ಗುಡ್ಡೆಹೊಸೂರು:ಪಿಕ್ ಅಪ್ ಮತ್ತು ಸ್ಕೂಟಿ‌ ನಡುವೆ ಅಪಘಾತ:ಸ್ಕೂಟಿ ಚಾಲಕನಿಗೆ ಗಂಭೀರ ಗಾಯ

ಗುಡ್ಡೆಹೊಸೂರು:ಪಿಕ್ ಅಪ್ ಮತ್ತು ಸ್ಕೂಟಿ‌ ನಡುವೆ ಅಪಘಾತ:ಸ್ಕೂಟಿ ಚಾಲಕನಿಗೆ ಗಂಭೀರ ಗಾಯ

ಕುಶಾಲನಗರ:ರಾಷ್ಟ್ರೀಯ ಹೆದ್ದಾರಿ (275) ಗುಡ್ಡೆಹೊಸೂರು ಬಳಿ ಮಧ್ಯರಾತ್ರಿ 12.10ಕ್ಕೆ  ಸ್ಕೂಟಿ ಮತ್ತು ಪಿಕ್ ಅಪ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು,ಸ್ಕೂಟಿ ಚಾಲಕ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.ಅಪಘಾತ ಸಂಭವಿಸಿ ರಸ್ತೆಯಲ್ಲೇ ಗಾಯಗೊಂಡು ಬಿದ್ದಿದ್ದ ಸ್ಕೂಟಿ ಚಾಲಕನನ್ನು ಸುಂಟಿಕೊಪ್ಪದ ಮಜೀದ್,ಪತ್ರಕರ್ತ ಇಸ್ಮಾಯಿಲ್ ಕಂಡಕರೆ, ಹಾಗೂ ವಾಸು ಸುಂಟಿಕೊಪ್ಪ ಅವರು ಕುಶಾಲನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.ಸ್ಕೂಟಿ ಚಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಗೆ ರವಾನಿಸಲಾಗಿದೆ.