25 ವರ್ಷಗಳ ಕಾಲ ಗುಂಡಿಗೆರೆ ಜಮಾಅತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಎಂ.ಎ ಅಬ್ಬಾಸ್ ಅವರಿಗೆ ಸನ್ಮಾನ

ಕಡಂಗ: ವಿರಾಜಪೇಟೆ ಸಮೀಪದ ಗುಂಡಿಗೆರೆ ಮುಸ್ಲಿಂ ಜಮಾಅತಿನಲ್ಲಿ 25 ವರ್ಷ ವರ್ಷಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಹಾಗೂ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಎಂಎ ಅಬ್ಬಾಸ್ ಹಾಜಿರವರನ್ನು ಗುಂಡಿಗೆರೆ ಗ್ರಾಮಸ್ಥರು ಅವರ, ಕುಟುಂಬಸ್ಥರ ಸಮ್ಮುಖದಲ್ಲಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಬ್ಬಾಸ್ ಹಾಜಿ ಸಂಕಷ್ಟಿದಲ್ಲಿರುವವರಿಗೆ ಸಹಾಯ ಮಾಡಲು ನಾವು ಕಾರಣರಾದರೆ ಮಾತ್ರ ನಮ್ಮ ಜೀವನವು ಸಾರ್ಥಕವಾಗುತ್ತದೆ ಎಂದು ನುಡಿದರು.
ಎಚ್.ಐ.ಜಿ ಫ್ಯೂಚರ್ ದುಬಾಯಿ ಸಂಘಟನೆಯ ವತಿಯಿಂದ ಅಧ್ಯಕ್ಷರಾದ ಮೀತಲ್ತಂಡ ರಪೀಕ್ ಅವರ ನಿವಾಸದಲ್ಲಿ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ರಫೀಕ್ ಎಂ ಯು. ಕಾರ್ಯದರ್ಶಿಯಾದ ಶಿಹಾಬ್ ಎಂ ಎಸ್,ಸಾಮಾಜಿಕ ಕಾರ್ಯಕರ್ತ ಅಕ್ಬರ್ ಎಂ ಎ. ಸುನ್ನಿ ವೆಲ್ಪೇರ್ ಕಾರ್ಯದರ್ಶಿ ನಿಸಾರ್ ಎಂ ಯು.ಮಾಜಿ ಕಾರ್ಯದರ್ಶಿ ಲತೀಪ್ ಸಿಎ, ಸೈದು ಎಂ ಎ. ಝಕರಿಯ ಮುಟ್ಟಲ್,ಹಸನ್ ಎಂ ಎಂ, ಸಮೀರ್ ಎಂ ಎಂ,ಆಲಿ ಎಂ ಎಸ್,ಅನೀಫ ಎಂ ಎಸ್,ರಂಶೀದ್ ಎಂ ಯು,ಸುಪಿಯಾನ್ ಎಂ ಎ.ಮಿದ್ಲಾಜ್ ಎಂಎಂ.ಸಲೀಂ ಕೇಯು. ಅಪ್ಪು ಎಂಐ. ಶಾನಿಫ್ ಎಂ ಎಸ್ ಉಪಸ್ಥಿತರಿದ್ದರು. ವರದಿ:ನೌಫಲ್ ಕಡಂಗ