ಹಂಡ್ಲಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 13 ಲಕ್ಷದ 29ಸಾವಿರ ರೂ ನಿವ್ವಳ ಲಾಭ

ಹಂಡ್ಲಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ   13 ಲಕ್ಷದ 29ಸಾವಿರ ರೂ ನಿವ್ವಳ ಲಾಭ

ಶನಿವಾರಸಂತೆ:-‘ಸಹಕಾರಿ ಸದಸ್ಯರು ಸಕಾಲದಲ್ಲಿ ಸಂಘದಲ್ಲಿ ಮಾಡಿರುವ ಸಾಲವನ್ನು ಮರು ಪಾವತಿಸುವುದು ಮತ್ತು ಸಂಘದ ಬೆಳವಣಿಗೆಗೆ ಸಹಕಾರವುದ್ದರಿಂದ ಸಂಘವು ಲಾಭಗಳಿಸಲು ಸಾಧ್ಯವಾಗುತ್ತದೆ’ ಎಂದು ಹಂಡ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ್ ಅಭಿಪ್ರಾಯಪಟ್ಟರು.ಅವರು ಸದರಿ ಸಂಘದ 2024--25ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.

ಸಂಘದ ಬೆಳವಣಿಗೆಯಲ್ಲಿ ಸಹಕಾರಿ ಸದಸ್ಯರ ಸಹಕಾರ ಪ್ರಮುಖವಾದದ್ದು ಸಂಘದಲ್ಲಿ ಮಾಡಿರುವ ಸಾಲವನ್ನು ಮರು ಪಾವತಿಸಿ ಸಹಕರಿಸಬೇಕು ಮತ್ತು ಸಂಘದಲ್ಲಿ ಕೃಷಿ ಸಾಲವನ್ನು ಪಡೆಯುವ ಸಂದರ್ಭದಲ್ಲಿ ಸಂಘದ ನಿಯಮದಂತೆ ತಮ್ಮ ಜಮೀನಿನ ಪಹಣೆ ಪತ್ರದಲ್ಲಿ ವ್ಯತ್ಯಸವಿದ್ದಲ್ಲಿ ಅದನ್ನು ಸರಿಪಡಿಸಿಕೊಂಡು ಸಂಘದಲ್ಲಿ ಸಾಲ ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಸದರಿ ಸಂಘವು ಈ ಸಾಲಿನಲ್ಲಿ 13ಲಕ್ಷದ 29 ಸಾವಿರದ 773 ರು ನಷ್ಟು ನಿವ್ವಳ ಲಾಭಗಳಿಸಿದೆ ಈ ಮೂಲಕ ಕಳೆದ ಸಾಲಿಗಿಂತ ಹೆಚ್ಚಿನ ಲಾಭಗಳಿಸಿದ್ದು ಮುಂದಿನ ಸಾಲಿನಲ್ಲಿ ಮತ್ತಷ್ಟು ಲಾಭ ತಂದುಕೊಡಲು ಪ್ರಯತ್ನಿಸಲಾಗುವುದೆಂದು ಭರವಸೆ ನೀಡಿದರು.

ನಾವು ಅಧಿಕಾರಕ್ಕೆ ಇತ್ತೀಚಿಗೆ ಬಂದಿದ್ದು ಎಲ್ಲಾ ಸದಸ್ಯರ ಸಹಕಾರ ಹಾಗೂ ಮಾರ್ಗದರ್ಶನ ಬೇಕು ಅದರಂತೆ ಸಂಗಾವನ್ನು ಬಲಪಡಿಸೋಣ ಎಂದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಸಪ್ಪ ಸದರಿ ಸಂಘದ ವಾರ್ಷಿಕ ವರದಿ ಮತ್ತು ಲೆಕ್ಕಪರಿಶೋಧನಾ ವರದಿಯನ್ನು ಮಂಡಿಸುತ್ತಾ-ಸದರಿ ಸಂಘದಲ್ಲಿ 1497 ಮಂದಿ ಸದಸ್ಯರಿದ್ದು ಸದಸ್ಯರ ‘ಎ’ ತರಗತಿಯ ಪಾಲು ಹಣ 1 ಕೋಟಿ 66 ಲಕ್ಷದ 41 ಸಾವಿರದ 207 ರು ಇರುತ್ತದೆ ಸಂಘವು 2024-25ನೇ ಸಾಲಿನಲ್ಲಿ ಕೆ.ಡಿ.ಸಿ.ಸಿ ಬ್ಯಾಂಕಿನಲ್ಲಿ 13 ಕೋಟಿ 65 ಲಕ್ಷ 19 ಸಾವಿರದ 940 ರೂ ಸಾಲ ಪಡೆಯಲಾಗಿದ್ದು ಈ ಮೂಲಕ ಸಂಘದ 760 ಸದಸ್ಯರಿಗೆ ಈ ಸಾಲಿನಲ್ಲಿ 14 ಕೋಟಿ 82 ಲಕ್ಷದ 26 ಸಾವಿರದ 538 ರೂ ಕೆ.ಸಿ.ಸಿ ಸಾಲವನ್ನು, 9ಸದಸ್ಯರಿಗೆ ಆಭರಣ ಸಾಲ ರೂ 10,13,100 ಹಾಗೂ ಸಂಘದ ನೌಕರ ವರ್ಗದವರಿಗೆ ಆದರದ ಸಾಲ ಗಳಾದ ಅಸ್ಸಾಮಿ ಸಾಲ ರೂ 9,65,408 ರೂಗಳನ್ನು ಮತ್ತು 26ಸದಸ್ಯರಿಗೆ ಜಮೀನು ಸಾಲ ರೂ 19,50,000 ವಿತರಿಸಿದೆಎಂದು ಹೇಳಿದರು.

ಸಂಘವು 2024-25ನೇ ಸಾಲಿನಲ್ಲಿ 1 ಕೋಟಿ 20 ಲಕ್ಷದ 13 ಸಾವಿರದ 329 ರು ನಷ್ಟು ವ್ಯಾಪಾರ ವಹಿವಾಟು ನಡೆಸಿ ಈ ಮೂಲಕವಾಗಿ 9 ಲಕ್ಷದ 28 ಸಾವಿರದ 614 ರೂ ಗಳ ವ್ಯಾಪಾರ ಲಾಭವನ್ನುಗಳಿಸಿದೆ ಸಂಘದ ಕಾರ್ಯಕ್ಷೇತ್ರದಲ್ಲಿರುವ ಸಂಘದ ರೈತರು ಸಂಘದ ಮೂಲಕವೆ ರಸಾಯನಿಕ ಗೊಬ್ಬರ, ಮೈಲು ತೂತು ಖರೀದಿ ಮಾಡುವಂತೆ ಹೇಳಿದರು.

ಮಹಾಸಭೆಯಲ್ಲಿ ನಡೆದ ಚರ್ಚೆಗಳು:

 ಈ ಹಿಂದಿನ ಡಿವಿಡೆಂಟ್ ಹಣವನ್ನು ಕ್ಷೇಮ ನಿದಿಗೆ ಹಾಕಿರೋದು ಸರಿಯಲ್ಲಾ, ಅದಕ್ಕೆ ಹಣ ಹಾಕಿದರೆ ಅದನ್ನು ತೆಗೆಯಲು ಸಾಧ್ಯವಿಲ್ಲ ಹಾಗಾಗಿ ಈ ವರ್ಷ ಕ್ಷೇಮ ನಿದಿಗೆ ಹಾಕಬೇಡಿ, ಜಮೀನು ಸಾಲ ವಸೂಲಾತಿ ಆಗಿದ್ಯಾ, ಜಮೀನು ಸಾಲ 25ಸಾವಿರ ಮಾತ್ರ ಕೊಡಿ ಒಬ್ಬರಿಗೆ ಒಂದು ಲಕ್ಷ ಕೊಡಬೇಡಿ ಎಂದು ಸದಸ್ಯರು ಹೇಳಿದರು ಇದಕ್ಕೆ ಉತ್ತರಿಸಿ ಕಾರ್ಯನಿರ್ವಾಹಣಾಧಿಕಾರಿ ಬಸಪ್ಪ ಈ ಅವಧಿಯಲ್ಲಿ ಯಾರಿಗೂ ಜಮೀನು ಸಾಲ ನೀಡಿಲ್ಲ ಎಂದರು. ಚಿನ್ನಭಾರಣಕ್ಕೆ ವಿಮೆ ಹೆಚ್ಚು ಪಾವತಿ ಮಾಡಿ ಎಂದು ಸದಸ್ಯರು ಸಲಹೆ ನೀಡಿದರು. ಕಳೆದ 10ವರ್ಷಗಳ ಹಿಂದೆ ಸಹಕಾರ ಸಂಘದಲ್ಲಿ ದುರುಪಯೋಗ ಆಗಿದೆ ಎಂದು ಸಂಘದ ಕೆಲವರು ಕೋರ್ಟ್ ಮೆಟ್ಟಿಲೇರಿರುವುದರಿಂದ ಸಂಘಕ್ಕೆ ಲಕ್ಷಾಂತರ ರೂ ನಷ್ಟ ಆಗುತ್ತಿದೆ ಎಂದು ಸದಸ್ಯರು ಹಾಗೂ ನಿರ್ದೇಶಕರು ಹೇಳಿದರು. ಕೆಲ ಸದಸ್ಯರು ರಾಜಿ ತೀರ್ಮಾನ ಮಾಡಿಸಿ ಎಂದರು ಇಲ್ಲವಾದರೆ ಮುಂದೆಯೂ ಸಂಘಕ್ಕೆ ನಷ್ಟವಾಗಲಿದೆ ಎಂದರು. ಇದಕ್ಕೆ ಅಧ್ಯಕ್ಷರು ಪ್ರತಿಕ್ರಿಯಿಸಿ ಮುಂದಿನ ದಿನದಲ್ಲಿ ಕೋರ್ಟ್ ಮೆಟ್ಟಿಲೇರಿರುವ ಹಾಗೂ ಈ ಹಿಂದಿನ ಅಧ್ಯಕ್ಷರ ಹಾಗೂ ನಿರ್ದೇಶಕರ ಸಭೆ ಸೇರಿ ಚರ್ಚೆ ಮಾಡೋಣ ಎಂದರು.

ಸಂಘ ಬೆಳವಣಿಗೆ ಮತ್ತು ಸಹಕಾರಿ ಸದಸ್ಯರಿಗೆ ಉಪಯೋಗಕ್ಕೆ ಪೂರಕವಾಗಿ ಚರ್ಚಿಸಲಾಯಿತು. ಸಂಘದ ಹಿರಿಯ ಸಹಕಾರಿ ಸದಸ್ಯರಾದ ಎಸ್. ಕೆ ವೀರಪ್ಪ,ವಿನುತ್ ಶಂಕರ್, ರವಿ ಕುಮಾರ್, ನಿರಂಜನ್, ಶಿವಪ್ಪ,ಕೆ. ವಿ. ಮಂಜುನಾಥ್, ಶಿವಾನಂದ್,ಬಸವರಾಜ್.ನಂಜಪ್ಪ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಕಾಂತ್ ರಾಜ್,ಮುಂತಾದ ಸಹಕಾರಿಗಳು ಸಭೆಯಲ್ಲಿ ಚರ್ಚಿಸಿದರು ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷ ಯಶವಂತ, ಮತ್ತು ಆಡಳಿತ ಮಂಡಳಿಯ ನಿರ್ದೇಶಕರಾದ ವೀರೇಂದ್ರ ಕುಮಾರ್, ಸಂದೀಪ್, ಮದು, ರಮೇಶ್, ವಿಶಾಲಾಕ್ಷಿ, ಕೆ. ಎನ್ ಮದುರ, ಮೋಹನ್, ರವೀಶ್, ದೇವರಾಜು, ಕೆಡಿಸಿಸಿ ಬ್ಯಾಂಕ್ ಪರ ಮೇಲ್ವಿಚಾರಕರಾದ ಆರ್. ಅನುರಾಧಾ, ಸಂಘದ ಹಿರಿಯ ಗುಮಸ್ತೆ ಶೋಭಾ, ಕಿರಿಯ ಗುಮಸ್ತ ಹುಸೈನಾರ್, ಮಾರಾಟ ಗುಮಸ್ತ ಕೆ. ಎಸ್ ಸಂತೋಷ್, ಸೋಮಶೇಖರ್ ಮುಂತಾದವರು ಹಾಜರಿದ್ದರು.