ಮನೆ ಬಿಟ್ಟು ಹೋದ ಪತ್ನಿ, ನೊಂದ ಪತಿ ನೇಣಿಗೆ ಶರಣು

ವಿರಾಜಪೇಟೆ: ಆ ಅನ್ಯೋನ್ಯವಾದ ಸಂಸಾರಲದ್ಲಿ ಮನೆಯನ್ನೇ ಬಿಟ್ಟ ಪತ್ನಿಯನ್ನು ನೆನದು ನೊಂದ ಪತಿಯು ನೇಣಿಗೆ ಶರಣಾದ ಘಟನೆ ವಿರಾಜಪೇಟೆ ಕಡಂಗ ಅರಪಟ್ಟು ಗ್ರಾಮದಲ್ಲಿ ನಡೆದಿದೆ. ವಿರಾಜಪೇಟೆ ತಾಲೂಕಿನ ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಮ್ಮೇತೊಡು ಗ್ರಾಮದ ಬದ್ರೀಯ ನಗರದ ಬಾಡಿಗೆ ಮನೆಯಲ್ಲಿ ವಾಸವಿದ್ದ ಚಾಲಕ ವೃತ್ತಿಯ ದಿವಂಗತ ಹೆಚ್. ಬಾಬು ಅವರ ಪುತ್ರ ಹೆಚ್. ಬಿ. ದರ್ಶನ್ ಪ್ರಾಯ (47) ನೇಣಿಗೆ ಶರಣಾದ ವ್ಯಕ್ತಿ.
ಘಟನೆಯ ವಿವರ:
ಮೃತ ದರ್ಶನ್ ಕೊಲಿ ಕೆಲಸ ಮಾಡಿಕೊಂಡು ಚಾಲಕ ವೃತ್ತಿ ಮಾಡಿಕೊಂಡು ಪತ್ನಿಯೊಂದಿಗೆ ಸುಖಿ ಸಂಸಾರ ನಡೆಸುತ್ತಿದ್ದ ಪತಿ ಮತ್ತು ಪತ್ನಿಗೆ ಮೂವರು ಮಕ್ಕಳ ಸಂಸಾರವಿತ್ತು. ಗಂಡ-ಹೆಂಡಡತಿಯ ನಡುವಿಣ "ಕಲಹ ಉಂಡು ಮಲಗುವ ತನಕ ಎನ್ನುವುದು ಗಾದೆಯಾದರೆ".ಇದು ಪತಿ ಪತ್ನಿಗೆ ವಿರುದ್ದವಾಗಿತ್ತುಮ ತುಂಬು ಸಂಸಾರದಲ್ಲಿ ನಡೆದ ತಿಳಿಯದ ಕಲಹದಿಂದ ಮೃತನ ಪತ್ನಿ ಲತ ಮನೆ ತೊರೆದು ಸುಮಾರು 15 ದಿನಗಳಾಗಿವೆ ಎನ್ನಲಾಗಿದೆ.ಗುರುವಾರ ಮೃತ ದರ್ಶನ್ ಮನೆಬಿಟ್ಟು ಕೆಲಸಕ್ಕ ತೆರಳಿದ್ದಾನೆ.ಕಡಂಗ ಅರಪಟ್ಟು ಗ್ರಾಮದ ಚೆಯ್ಯಂಡಾಣೆ ರಸ್ತೆ ಬದಿಯ ಗದ್ದೆಯ ಸಮೀಪದ ಮರಕ್ಕೆ ಹಗ್ಗದಿಂದ ಬಿಗಿದು ನೇಣಿಗೆ ಶರಣಾಗಿದ್ದಾನೆ. ಇದೇ ಮಾರ್ಗದಲ್ಲಿ ಬರುತ್ತಿದ್ದ ದಾರಿಹೋಕರು ಮರದಲ್ಲಿ ಜೋತುಬಿದ್ದ ವ್ಯಕ್ತಿಯನ್ನು ಗುರುತಿಸಿ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಅರಿತು ವಿರಾಜಪೇಟೆ ಗ್ರಾಮಾಂತರ ಠಾಣೆಯ ಪೋಲಿಸು ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಮೃತ ದೇಹ ಪರಿಶೀಲನೆ ಮಾಡಿದ್ದುಣಮೃತನ ಮಗ ದೀಕ್ಷಿತ್ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೋಲಿಸು ಠಾಣೆಯಲ್ಲಿ ಆತ್ಮಹತ್ಯೆ 194 ಬಿ.ಎನ್.ಎಸ್.ಎಸ್. ಪ್ರಕರಣ ದಾಖಲಾಗಿದ್ದು. ಪೋಲಿಸರು ಮುಂದಿನ ಕ್ರಮ ಜರುಗಿಸಿದ್ದಾರೆ.
ವರದಿ: ಟಿ.ಜೆ.ಕಿಶೋರ್ ಕುಮಾರ್ ಶೆಟ್ಟಿ