ಕಸ್ತೂರಿ ರಂಗನ್ ವರದಿ ವಿರೋಧ ಸಮಿತಿ ವತಿಯಿಂದ ಸಿ&ಡಿ ಲ್ಯಾಂಡ್ ಬಗ್ಗೆ ಚರ್ಚೆ:ಸಚಿವರು,ಹಾಲಿ ಹಾಗೂ ಮಾಜಿ ಶಾಸಕರು ಸಭೆಯಲ್ಲಿ ಭಾಗಿ

ಕಸ್ತೂರಿ ರಂಗನ್ ವರದಿ ವಿರೋಧ ಸಮಿತಿ ವತಿಯಿಂದ ಸಿ&ಡಿ ಲ್ಯಾಂಡ್ ಬಗ್ಗೆ ಚರ್ಚೆ:ಸಚಿವರು,ಹಾಲಿ ಹಾಗೂ ಮಾಜಿ ಶಾಸಕರು ಸಭೆಯಲ್ಲಿ ಭಾಗಿ

ಮಡಿಕೇರಿ:ಕಸ್ತೂರಿ ರಂಗನ್ ವರದಿ ವಿರೋಧ ಹೋರಾಟ ಸಮಿತಿಯವರು ಆಯೋಜಿಸಿದ, ಸಿ ಮತ್ತು ಡಿ ಜಮೀನಿನ ಸಮಸ್ಯೆಯ ಕುರಿತಾದ ಚರ್ಚೆಯ ಸಭೆಯಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಎಚ್ ಭೋಸರಾಜು ರವರ ರೊಂದಿಗೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಹಾಗೂ ಶಾಸಕ‌ ಡಾ .ಮಂತರ್ ಗೌ ಅವರು ಭಾಗವಹಿಸಿದರು.

ಮೊದಲಿಗೆ ಕಸ್ತೂರಿರಂಗನ್ ವಿರೋಧಿ ಸಮಿತಿಯ ಪ್ರಮುಖರು ತಮ್ಮ ಆತಂಕವನ್ನು ಮಂಡಿಸಿ, ಸಿ ಮತ್ತು ಡಿ ಜಾಗದ ವಿಚಾರ ಕುರಿತು ತಮ್ಮ ಅನಿಸಿಕೆ ಹೇಳಿಕೊಂಡರು. ಬಳಿಕ ಮಾತನಾಡಿದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ವಿವರವಾಗಿ ಸಿ ಮತ್ತು ಡಿ ಜಮೀನು ವಿಷಯದಲ್ಲಿ ಇರುವ ಕಾನೂನು ವಿಷಯಗಳನ್ನು ಸಭೆಗೆ ಮನವರಿಗೆ ಮಾಡಿದರಲ್ಲದೆ, ಮುಂದೆ ಯಾವ ರೀತಿ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು ಎಂದು ವಿವರಿಸಿದರು.

 ಹೋರಾಟ ಸಮಿತಿಯ ಅಧ್ಯಕ್ಷರಾದ ಧರ್ಮಜ ಉತ್ತಪ್ಪ ಅಧ್ಯಕ್ಷತೆ ವಹಿಸಿದ್ದರು. ಮಡಿಕೇರಿ ಶಾಸಕರಾದ ಡಾ. ಮಂತರ್ ಗೌಡ, ಕರ್ನಾಟಕ ಕ್ರೀಡಾ ಉಪಾಧ್ಯಕ್ಷರು ಚೆಪ್ಪುಡೀರ ಅರುಣ್ ಮಾಚಯ್ಯ, ಮಾಜಿ ಶಾಸಕರಾದ ಕೆ.ಜಿ ಬೋಪಯ್ಯ,ಮಾಜಿ ಎಂ.ಎಲ್ಸಿ ಸುನಿಲ್ ಸುಬ್ರಮಣಿ,ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಹಾಗೂ ಹೋರಾಟ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.