ಕೆಸರುಗದ್ದೆ ಕ್ರಿಕೆಟ್ ಪಂದ್ಯಾವಳಿ: ಕಲ್ಲುಮೊಟ್ಟೆ ಚಾಂಪಿಯನ್

ಕಡಂಗ:ಇಲ್ಲಿನ ಸಮೀಪದ ಕೋಡಿರ ಗದ್ದೆಯಲ್ಲಿ ಕಳೆದ ಶನಿವಾರ ಮತ್ತು ಭಾನುವಾರ ನಡೆದ ಜಿಲ್ಲಾ ಮಟ್ಟದ ಕೆಸರುಗದ್ದೆ ಕ್ರಿಕೆಟ್ ಕ್ರೀಡಾಕೂಟವನ್ನು ಕಡಂಗ ಕ್ರಿಕೆಟರ್ಸ್ ವತಿಯಿಂದ ಮೊದಲನೇ ವರ್ಷದ ಕ್ರಿಕೆಟ್ ಕ್ರೀಡಾಕೂಟವನ್ನು ಕೆಸರು ಗದ್ದೆಯಲ್ಲಿ ಆಯೋಜಿಸಲಾಯಿತು. ಕ್ರೀಡಾಕೂಟದ ಉದ್ಘಾಟನೆಯನ್ನು ಸಂಘದ ಅಧ್ಯಕ್ಷರಾದ ರಹೀಂ ಟಿ.ಎಂ ನೆರವೇರಿಸಿದರು 32 ತಂಡಗಳುಪಾಲ್ಗೊಂಡ ಕ್ರೀಡಾಕೂಟವು ಅತ್ಯಂತ ರೋಚಕವಾಗಿತ್ತು.
ಫೈನಲ್ ಪಂದ್ಯದಲ್ಲಿ ಬಲಿಷ್ಠ ಪಾರಾಣೆ ಫ್ರೆಂಡ್ಸ್ ಪಾರಾಣೆ ತಂಡವನ್ನು ಕೇವಲ 6 ರನ್ ಗಳ ಅಂತರದಲ್ಲಿ ಮಣಿಸಿ ಕಲ್ಲುಮೊಟ್ಟೆ ಫ್ರೆಂಡ್ಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿತು. ಕ್ರೀಡಾಕೂಟದ ಅತ್ಯುತ್ತಮ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಕಲ್ಲುಮೊಟ್ಟೆ ಫ್ರೆಂಡ್ಸ್ ತಂಡದ ರೋಷನ್ಣ ಎಮರ್ಜಿಂಗ್ ಪ್ಲೇಯರ್ ಆಟಗಾರ ಪ್ರಶಸ್ತಿಯನ್ನು ಪಾರಣೆ ಕ್ರಿಕೆಟ್ ತಂಡದ ಸುಜಿತ್ ತನ್ನದಾಗಿಸಿದರು. ಕ್ರೀಡಾಕೂಟದ ತೀರ್ಪುಗಾರರಾಗಿ ರಕ್ಷಿತ್ ಪಾರಣೆ, ನೌಶಾದ್ ಕಡಂಗ ಕಾರ್ಯನಿರ್ವಹಿಸಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಮಾಜ ಸೇವಕರಾದ ಕೋಡಿರ ಡಾಲಿ ಸುಬ್ರಮಣಿ ವಹಿಸಿ ಕ್ರೀಡಾಕೂಟಕ್ಕೆ ಶುಭ ಕೋರಿದರು.ವೇದಿಕೆಯಲ್ಲಿ ಉದ್ಯಮಿಗಳಾದ ಸಿದ್ದಿಕ್ ಬಿ ಎಮ್,ಸಿಹಾಬ್ ಕೆ ಯು, ಕುಂಜಿ ಮೊಹಮ್ಮದ್, ಕರೀಂ, ಕ್ರೀಡಾಕಟದ ಆಯೋಜಕರಾದ ರಹೀಮ್ ಟಿ ಎಂ, ಯೂನಸ್ ಕಾಶಿ, ಸಜೀರ್, ನೌಶಾದ್, ತಮ್ಮು, ಉಪಸ್ಥಿತರಿದ್ದರು ಕ್ರೀಡಾಕೂಟದ ನಿರೂಪಣೆಯನ್ನು ಹರ್ಷದ್ ದುಬೈ ನಿರ್ವಹಿಸಿದರು
ವರದಿ: ನೌಫಲ್