ಕೊಡಗು ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಅಧ್ಯಕ್ಷ ಅಪ್ರು ರವೀಂದ್ರ ಕಾಂಗ್ರೆಸ್ ಸೇರ್ಪಡೆ!

ಕೊಡಗು ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಅಧ್ಯಕ್ಷ ಅಪ್ರು ರವೀಂದ್ರ ಕಾಂಗ್ರೆಸ್ ಸೇರ್ಪಡೆ!

ಮಡಿಕೇರಿ:ಕೊಡಗು ಜಿಲ್ಲಾ ಬಿಜೆಪಿ‌‌ OBC ಅಧ್ಯಕ್ಷ ಹಾಗೂ ಮಾಜಿ ಮಡಿಕೇರಿ ತಾಲ್ಲೂಕು ಪಂಚಾಯಿತಿ ಸದಸ್ಯ ಅಪ್ರು ರವೀಂದ್ರ ಅವರು ಕಮಲ ತೊರೆದು ‘ಕೈ ಹಿಡಿದಿದ್ದಾರೆ. ಮಡಿಕೇರಿಯಲ್ಲಿ ಆಯೋಜಿತ ಕಾಂಗ್ರೆಸ್ ಹಿಂದುಳಿದ ವರ್ಗಗಳ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ. ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರ ಸಮ್ಮುಖದಲ್ಲಿ ಸುಮಾರು 150ಕ್ಕೂ ಅಧಿಕ ಮಂದಿ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಅಪ್ರು ರವೀಂದ್ರ ಸೇರ್ಪಡೆಯಾಗಿದ್ದಾರೆ.