ಏಪ್ರಿಲ್ 2 ರಿಂದ 4ರವರೆಗೆ ಕೊಡವ ಕೌಟುಂಬಿಕ ಕಬಡ್ಡಿ ನಮ್ಮೆ
ಮಡಿಕೇರಿ: ವಿರಾಜಪೇಟೆ ತಾಲೂಕು ಕಂಡAಗಾಲ ಗ್ರಾಮದಲ್ಲಿ ಐನ್ ಮನೆ ಹೊಂದಿರುವ ಮುಲ್ಲೇಂಗಡ ಒಕ್ಕದ ವತಿಯಿಂದ ಪ್ರಪ್ರಥಮ ಬಾರಿಗೆ ಕೊಡವ ಕೌಟುಂಬಿಕ ಕಬಡ್ಡಿ ನಮ್ಮೆಯನ್ನು ಏಪ್ರಿಲ್‌ನ 2,3,4 ರಂದು ಕಂಡಂಗಾಲ ಸರ್ಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಕೊಡವ ಕೌಟುಂಬಿಕ ಕಬಡ್ಡಿ ನಮ್ಮೆಯ ಸಂಚಾಲಕ ಮುಲ್ಲೇಂಗಡ ಮದೋಷ್ ಪೂವಯ್ಯ ತಿಳಿಸಿದ್ದಾರೆ.
ಕರ್ನಾಟಕ ಕಬಡ್ಡಿ ಫೆಡರೇಶನ್ ನಿಯಮಾವಳಿಗಳಂತೆ ನಡೆಯುವ ಈ ಮ್ಯಾಟ್ ಕಬಡ್ಡಿ ಪಂದ್ಯಾವಳಿಯಲ್ಲಿ ನೋಂದಾಯಿತ ಕಬಡ್ಡಿ ತೀರ್ಪುಗಾರರು ತಾಂತ್ರಿಕ ಸಮಿತಿಯಲ್ಲಿ ಉಪಸ್ಥಿತರಿರಲಿದ್ದಾರೆ. ಕೊಡವ ಕುಟುಂಬಗಳ ನಡುವೆ ನಡೆಯುವ ಈ ಪಂದ್ಯಾವಳಿಯಲ್ಲಿ 10 ಆಟಗಾರರ ಒಂದು ತಂಡದಂತೆ ಭಾಗವಹಿಸಬಹುದಾಗಿದೆ. ಗ್ರಾಮೀಣ ಕ್ರೀಡೆಯಾದ ಕಬಡ್ಡಿಯನ್ನು ಉತ್ತೇಜಿಸಲು ಈ ಪಂದ್ಯಾವಳಿಯನ್ನು ಆಯೋಜಿಸುತ್ತಿದ್ದು, ವಿಜೇತರಿಗೆ ನಗದು ಹಾಗೂ ಆಕರ್ಷಕ ಪಾರಿತೋಷಕವನ್ನು ಬಹುಮಾನವಾಗಿ ನೀಡಲಾಗುವುದು.
ಆಸಕ್ತ ಕೊಡವ ಕುಟುಂಬಗಳು ಮಾ.10ರ ಒಳಗಾಗಿ ತಮ್ಮ ಹೆಸರನ್ನು 9480556667 ಸಂಖ್ಯೆಯನ್ನು ಸಂಪರ್ಕಿಸಿ ನೋಂದಾಯಿಸಬಹುದು ಎಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಮುಲ್ಲೇಂಗಡ ಒಕ್ಕದ ಅಧ್ಯಕ್ಷರಾದ ಶಂಕರಿಪೊನ್ನಪ್ಪ, ಕಾರ್ಯದರ್ಶಿ ಕಿಟ್ಟು ಕುಟ್ಟಪ್ಪ, ನಿರ್ದೇಶಕರಾದ ಸುರೇಶ್ ಭೀಮಯ್ಯ, ರಘು ದೇವಯ್ಯ ಉಪಸ್ಥಿತರಿದ್ದರು.
