ಕೊಡವ ಹಾಕಿ ಅಕಾಡೆಮಿಗೆ ಚುನಾವಣೆ ನಡೆಸದೇ ಅವಿರೋಧವಾಗಿ ಪಾಂಡಂಡ ಬೋಪಣ್ಣ ಅವರನ್ನು ಆಯ್ಕೆ ಮಾಡುವಂತಾಗಲಿ: ಬಿದ್ದಾಟಂಡ ತಮ್ಮಯ್ಯ

ಕೊಡವ ಹಾಕಿ ಅಕಾಡೆಮಿಗೆ ಚುನಾವಣೆ ನಡೆಸದೇ ಅವಿರೋಧವಾಗಿ ಪಾಂಡಂಡ ಬೋಪಣ್ಣ ಅವರನ್ನು ಆಯ್ಕೆ ಮಾಡುವಂತಾಗಲಿ:  ಬಿದ್ದಾಟಂಡ ತಮ್ಮಯ್ಯ

ಮಡಿಕೇರಿ: ಕೊಡವ ಹಾಕಿ ಅಕಾಡೆಮಿಗೆ ಚುನಾವಣೆ ನಡೆಸದೇ ಅವಿರೋಧವಾಗಿ ಪಾಂಡಂಡ ಬೋಪಣ್ಣ ಅವರನ್ನು ಆಯ್ಕೆ ಮಾಡುವಂತಾಗಲಿ ಎಂದು ಕೂರ್ಗ್ ಹಾಕಿ ಅಸೋಸಿಯೇಷನ್ ಮಾಜಿ ಉಪಾಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ತಿಳಿಸಿದರು.

ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಪಾಂಡಂಡ ಬೋಪಣ್ಣ ಸೂಕ್ತರಾಗಿದ್ದಾರೆ. ಅಲ್ಲದೇ, ಕೊಡವ ಕೌಟುಂಬಿಕ ಹಾಕಿ ಉತ್ಸವ ಆಯೋಜಿಸುವ ಮೂಲಕ ಕೊಡವ ಕುಟುಂಬಗಳು ಒಂದೆಡೆ ಸೇರಲು ಪಾಂಡಂಡ ಕುಟುಂಸ್ಥರು ಕಾರಣರಾಗಿದ್ದಾರೆ. ಅವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಯಾವುದೇ ಚುನಾವಣೆ ನಡೆಸದೇ ಅಧ್ಯಕ್ಷ ಸ್ಥಾನಕ್ಕೆ ಅವರನ್ನೇ ನೇಮಿಸುವಂತಾಗಬೇಕು ಎಂದು ಮನವಿ ಮಾಡಿದರು. ಆಯ್ಕೆ ಪ್ರಕ್ರಿಯೆ ಸಂಬಂಧ ಗೊಂದಲಗಳು ಏರ್ಪಡುತ್ತಿದೆ. ಕೊಡವ ಹಾರ್ಕಿ ಅಕಾಡೆಮಿಗೆ ರಾಜಕಯ ಬೆರಸದೇ ಆಯ್ಕೆ ಮಾಡುವಂತಾಗಬೇಕು ಎಂದು ಮನವಿ ಮಾಡಿದರು.

 ಸುದ್ದಿಗೋಷ್ಠಿಯಲ್ಲಿ ಕಲಿಯಂಡ ಕಪ್ ಆಯೋಜಕ ಕೌಶಿ ಕುಶಾಲಪ್ಪ, ಕೂರ್ಗ್ ಹಾಕಿ ಅಸೋಸಿಯೇಷನ್ ಮಾಜಿ ಸದಸ್ಯ ಪುತ್ತರಿರ ಪಪ್ಪುತಿಮ್ಮಯ್ಯ ಇದ್ದರು.