ಕೊಳ್ತೋಡು ಪರಿಶಿಷ್ಟ ನಿವಾಸಿಗಳ ಗುಡಿಸಲು ತೆರವು: ಸೂಕ್ತ ಪರಿಹಾರದ ಭರವಸೆ ನೀಡಿದ ಎ‌ಎಸ್ ಪೊನ್ನಣ್ಣ

Jul 7, 2025 - 21:10
Jul 7, 2025 - 21:11
 0  49
ಕೊಳ್ತೋಡು ಪರಿಶಿಷ್ಟ ನಿವಾಸಿಗಳ ಗುಡಿಸಲು ತೆರವು: ಸೂಕ್ತ ಪರಿಹಾರದ ಭರವಸೆ ನೀಡಿದ ಎ‌ಎಸ್ ಪೊನ್ನಣ್ಣ

ವಿರಾಜಪೇಟೆ: ಕೊಳ್ತೋಡು ಬೈಗೊಡು ಎಂಬಲ್ಲಿ,ಗುಡಿಸಲು ನಿರ್ಮಿಸಿಕೊಂಡು ನೆಲೆಸಿದ್ದ, ಪರಿಶಿಷ್ಟ ಪಂಗಡಕ್ಕೆ ಸೇರಿದ ನಿವಾಸಿಗಳನ್ನು ಇತ್ತೀಚೆಗೆ ತಹಶೀಲ್ದಾರರು ಯಾವುದೇ ನೋಟಿಸ್ ನೀಡದೆ ತೆರವುಗೊಳಿಸಿದ್ದರು.    

ಇಂದು ಅಲ್ಲಿನ ನಿವಾಸಿಗಳು ಡಿಎಸ್ಎಸ್ ಅಧ್ಯಕ್ಷರಾದ ಪರಶುರಾಮ್ ರವರ ನೇತೃತ್ವದಲ್ಲಿ ಶಾಸಕರನ್ನು ಭೇಟಿಯಾಗಿ ತಮ್ಮ ಅಳಲನ್ನು ತೋಡಿಕೊಂಡರು. ನಿವಾಸಿಗಳ ಸಮಸ್ಯೆಯನ್ನು ಆಲಿಸಿದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣನವರು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಸೂಕ್ತ ಪರಿಹಾರ ಒದಗಿಸಿ ಕೊಡುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ನೂರಾರು ಜನ ಸ್ಥಳೀಯ ಹಾಡಿ ನಿವಾಸಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಟ್ಟಡ ರಂಜಿ ಪೂಣಚ್ಚ, ಪುರಸಭೆ ಉಪಾಧ್ಯಕ್ಷೆ ಫಸಿಯಾ ತಬ್ಸುಂ,ಪುರ ಸಭೆ ಸದಸ್ಯರು,ವಿರಾಜಪೇಟೆ ತಹಶೀಲ್ದಾರ್, ಹಾಗೂ ಪ್ರಮುಖರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0