ಕೊಂಡಂಗೇರಿ ಮಹಿಳೆಯರ ಮೇಲೆ ಹಲ್ಲೆ ಪ್ರಕರಣ:ಆರೋಪಿ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಪ್ರಕರಣ ದಾಖಲು

ಕೊಂಡಂಗೇರಿ ಮಹಿಳೆಯರ ಮೇಲೆ ಹಲ್ಲೆ ಪ್ರಕರಣ:ಆರೋಪಿ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಪ್ರಕರಣ ದಾಖಲು
ಸಾಂದರ್ಭಿಕ ಚಿತ್ರ

ಮಡಿಕೇರಿ:ಕೊಂಡಂಗೇರಿ ಪರಂಬು‌ ಎಂಬಲ್ಲಿ ಮಹಿಳೆಯರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಚಿನ್ನದ ಸರವನ್ನು ಕಳ್ಳತನ ಮಾಡಿದ್ದ ಆರೋಪಿ ಪಾಲಿಬೆಟ್ಟದ ಮುನವ್ವರ್ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸೋಮವಾರ ಕೊಂಡಂಗೇರಿ ಗ್ರಾಮದ ಎಂಬಲ್ಲಿ ಮಹಿಳೆಯರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗುತ್ತಿದ್ದ ಆರೋಪಿ ಮುನವ್ವರ್ (26) ಎಂಬಾತನನ್ನು ಗ್ರಾಮಸ್ಥರು ಹಾಲುಗುಂದ ತೋಟವೊಂದರಲ್ಲಿ ಪತ್ತೆಹಚ್ಚಿ ಹಲ್ಲೆ ನಡೆಸಿ ಗಾಯಗೊಳಿಸಿದ್ದರು. ಈ ಬಗ್ಗೆ ಮುನವ್ವರ್ ಅವರ ಸಹೋದರ ಮನ್ಸೂರ್ ಸಿದ್ದಾಪುರ ಪೊಲೀಸ್ ಠಾಣೆಹೆ ದೂರು ನೀಡಿದ್ದು,ಕೊಂಡಂಗೇರಿ ಗ್ರಾಮದ 25 ರಿಂದ 30 ಮಂದಿಯ ಮೇಲೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.