ಕುಶಾಲನಗರ:ಅಳಿಲುಗುಪ್ಪೆಯಲ್ಲಿ ಸಾಗಾಟಕೆ ಸಿದ್ದವಾಗಿದ್ದ 30.ಕೆ.ಜಿ ಶ್ರೀ ಗಂಧದ ತುಂಡುಗಳ ವಶ

ಕುಶಾಲನಗರ: ತೊರೆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಅಳಿಲುಗುಪ್ಪೆ ಗ್ರಾಮದ ಬಸ್ ತಗುದಾಣದಲ್ಲಿ ಅಂದಾಜು 30. ಕೆ.ಜೆ .ಶ್ರೀಗಂಧದ ತುಂಡುಗಳನ್ನು ಸಾಗಾಟ ಮಾಡಲು ಸಿದ್ದವಿದ್ದ ಸಂದರ್ಭದಲ್ಲಿ ಬಾಣವಾರ ಉಪ ವಲಯ ಅರಣ್ಯ ಅಧಿಕಾರಿಗೆ ದೊರೆತ ಮಾಹಿತಿಯ ಮೇಲೆ ದಾಳಿ ಮಾಡಿ ಆರೋಪಿ ಪ್ರತಾಪ್ ಮತ್ತು ಶ್ರೀ ಗಂಧದ ತುಂಡುಗಳನ್ನು ವಶಪಡಿಸಿಕೊಂಡಿರುತ್ತಾರೆ. ಕಾರ್ಯಚರಣೆಯ ಸಂದರ್ಭದಲ್ಲಿ ಬಾಣವಾರ ಉಪ ವಲಯ ಅರಣ್ಯಾಧಿಕಾರಿ ಶ್ರವಣಕುಮಾರ್, ಗಸ್ತು ವನಪಾಲಕ ಈರಣ್ಣ ಅಕ್ಕಿ,ಪ್ರವೀಣ್ ಕುಮಾರ್, ಸಿಬ್ಬಂದಿಗಳಾದ ವೇದ, ಪ್ರವೀಣ್, ಸಂತೋಷ್, ನಾಗರಾಜ್, ಸಂಜಯ್, ಧರ್ಮ ಇದ್ದರು.