ಕುಶಾಲನಗರ: ಡಾ.ಬಿ.ಆರ್ ಅಂಬೇಡ್ಕರ್ ಯುವಕ ಸಂಘದಿಂದ ಮೂರನೇ ವರ್ಷದ ಅದ್ಧೂರಿ ನೃತ್ಯ ವೈಭವ

ಕುಶಾಲನಗರ: ಡಾ.ಬಿ.ಆರ್ ಅಂಬೇಡ್ಕರ್ ಯುವಕ ಸಂಘದಿಂದ ಮೂರನೇ ವರ್ಷದ ಅದ್ಧೂರಿ ನೃತ್ಯ ವೈಭವ

ಕುಶಾಲನಗರ: ಡಾ. ಬಿ.ಆರ್ ಅಂಬೇಡ್ಕರ್ ಯುವಕ ಸಂಘ, ಕುಶಾಲನಗರ ಇವರ ವತಿಯಿಂದ ಆಯೋಜಿಸಲಾಗಿದ್ದ ಮೂರನೇ ವರ್ಷದ ಡ್ಯಾನ್ಸ್, ನೃತ್ಯ ವೈಭವ ಕಾರ್ಯಕ್ರಮದಲ್ಲಿ ಕೂಡಿಗೆಯ ಹೆಸರಾಂತ ಎ.ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ನೃತ್ಯ ಸಂಸ್ಥೆಯ ನೃತ್ಯ ಪಟುಗಳಿಂದ ಅದ್ಧೂರಿಯಾಗಿ ಕಾರ್ಯಕ್ರಮ ನಡೆಯಿತು. ಹಲವು ಮೈ ರೋಮಾಂಚನಗೊಳಿಸುವ ನೃತ್ಯ ಪ್ರದರ್ಶನವನ್ನು ಎಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ವಿದ್ಯಾರ್ಥಿಗಳಿಂದ ಪ್ರದರ್ಶಸಿದರು.

 ಕಾರ್ಯಕ್ರಮದಲ್ಲಿ ಮೈಸೂರಿನ ಹೆಸರಾಂತ ಗಾಯಕರಲ್ಲಿ ಒಬ್ಬರಾದಂತಹ ಶಶಿಕುಮಾರ್ ರವರ ಹಾಡಿಗೆ ನೆರೆದಿದ್ದ ಜನರು ಕುಣಿದು ಕುಪ್ಪಳಿಸಿದರು. ಕಾರ್ಯಕ್ರಮವು ಎ.ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ಸಂಸ್ಥಾಪಕ ಹಾಗೂ ನೃತ್ಯ ಸಂಯೋಜಕ ಅಕ್ತರ್ ರವರ ನೇತೃತ್ವದಲ್ಲಿ ಅತೀ ಸುಂದರವಾಗಿ ನಡೆಯಿತು. ಭಾಗವಹಿಸಿದ ನೃತ್ಯ ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದ ಆಯೋಜಕಾರದ ಜಯಪ್ರಕಾಶ್, ಮಹದೇವ್ ಮತ್ತು ಮಹಮದ್ ಮುಸ್ತಾಫಾ ಪ್ರಶಸ್ತಿ ಪತ್ರ ಮತ್ತು ಬಹುಮಾನವನ್ನು ನೀಡಿ ಸನ್ಮಾನಿಸಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ವಿನಾಯಕ ಸೇವಾಸಮಿತಿ ಟೌನ್ ಕಾಲೊನಿ ಅಧ್ಯಕ್ಷರಾದ ಪುನೀತ್ ರಾಜ್, ಉಪಾಧ್ಯಕ್ಷರಾದ ದೀಪಕ್, ಖಜಾಂಜಿ ಸೂರ್ಯ ಪ್ರಕಾಶ್ ಹಾಗೂ ಸಂಘದ ಎಲ್ಲಾ ಪದಾಧಿಕಾರಿಗಳು, ಗಣ್ಯರು ಮತ್ತು ಎಲ್ಲಾ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಅತೀ ವಿಜ್ರಂಭಣೆಯಿಂದ ಯಶಸ್ವಿಗೊಳಿಸಿದರು.