ಕುಶಾಲನಗರ: ಪುರಸಭೆ ಮಾಜಿ ಸದಸ್ಯ ದಿನೇಶ್ ಅವರ ಮೇಲೆ ಬೀದಿ ನಾಯಿ ದಾಳಿ
ಕುಶಾಲನಗರ, ಡಿ 08: ಕುಶಾಲನಗರ ಪುರಸಭಾ ಮಾಜಿ ಸದಸ್ಯರಾದ ಎಂ.ಕೆ.ದಿನೇಶ್ (ಸುಂದರೇಶ್) ಅವರ ಮೇಲೆ ಬೀದಿನಾಯಿ ದಾಳಿ ನಡೆಸಿ ಘಾಸಿಗೊಳಿಸಿದ ಘಟನೆ ಕರಿಯಪ್ಪ ಬಡಾವಣೆಯಲ್ಲಿ ನಡೆದಿದೆ. ಕೈಬೆರಳಿಗೆ ಕಚ್ಚಿ ಹೊಟ್ಟೆಗೆ ಪರಚಿ ಗಾಯಗೊಳಸಿದೆ. ದಾಳಿ ನಡೆಸಿದ ನಾಯಿ ದಿನೇಶ್ ಅವರು ಕುಶಾಲನಗರ ಸಾಗರ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ನಾಯಿ ಹಲವರ ಮೇಲೆ ದಾಳಿ ನಡೆಸಿದ್ದು ನಾಯಿಗಳ ಹಾವಳಿ ತಡೆಗಟ್ಟಲು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
