ಅವಕಾಡೊ‌ ಮರದಿಂದ ಬಿದ್ದು ಸೊಂಟದ ಮೂಳೆ ಮುರಿದಿದ್ದ ವ್ಯಕ್ತಿಗೆ 3ಲಕ್ಷ ವೆಚ್ಚದಲ್ಲಿ ಉಚಿತ ಚಿಕಿತ್ಸೆ ನೀಡಲು‌ ನೆರವಾದ ಶಾಸಕ ಎಎಸ್ ಪೊನ್ನಣ್ಣ

ಅವಕಾಡೊ‌ ಮರದಿಂದ ಬಿದ್ದು ಸೊಂಟದ ಮೂಳೆ ಮುರಿದಿದ್ದ ವ್ಯಕ್ತಿಗೆ 3ಲಕ್ಷ ವೆಚ್ಚದಲ್ಲಿ ಉಚಿತ ಚಿಕಿತ್ಸೆ ನೀಡಲು‌ ನೆರವಾದ ಶಾಸಕ ಎಎಸ್ ಪೊನ್ನಣ್ಣ

ಸಿದ್ದಾಪುರ:ಪಾಲಿಬೆಟ್ಟದ ಟಾಟಾ ಕಾಫೀ ಸಂಸ್ಥೆಯ ನಿವೃತ್ತ ಕೂಲಿ ಕಾರ್ಮಿಕರಾದ ರಾಮಚಂದ್ರಪ್ಪ* ಅವರು ಆರೋಗ್ಯದ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದ್ದ ಸಂದರ್ಭದಲ್ಲಿ, ವಿರಾಜಪೇಟೆ ಶಾಸಕರು ಹಾಗೂ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರು ತೋರಿದ ಮಾನವೀಯ ಸಹಾಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.

ಮೂರು ತಿಂಗಳ ಹಿಂದೆ ಅವಕಾಡೊ ಹಣ್ಣು ಕೊಯ್ಲು ಮಾಡುವ ವೇಳೆ ಮರದಿಂದ ಬಿದ್ದು, ಸೊಂಟದ ಮೂಳೆ ಮುರಿದು ತೀವ್ರ ತೊಂದರೆಯಿಂದ ನರಳುತ್ತಿದ್ದ ರಾಮಚಂದ್ರಪ್ಪನವರನ್ನು, ಪಾಲಿಬೆಟ್ಟದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಗಣೇಶ್ ಚೆನ್ನಯನಕೋಟೆ ಅವರು ತಕ್ಷಣವೇ ಮೈಸೂರು ಕೆ.ಆರ್. ಆಸ್ಪತ್ರೆಯಲ್ಲಿ ದಾಖಲಿಸಿದರು. ವೈದ್ಯರು ಶಸ್ತ್ರಚಿಕಿತ್ಸೆಗೆ ಸುಮಾರು 3ಲಕ್ಷ ವೆಚ್ಚ ಆಗಲಿದೆ ಎಂದು ತಿಳಿಸಿದರು. ಆದರೆ ಬಿಪಿಎಲ್ ಕಾರ್ಡ್ ಹಾಗೂ ಯಶಸ್ವಿನಿ ಯೋಜನೆಯ ಸೌಲಭ್ಯಗಳು ಅವರ ಬಳಿ ಲಭ್ಯವಿರಲಿಲ್ಲ.

ಆ ಸಂಕಷ್ಟದ ಕ್ಷಣದಲ್ಲಿ, ಗಣೇಶ್ ರವರು ತಮ್ಮ ಪಕ್ಷದ ವಲಯ ಮಖಂಡರುಗಳು ಹಾಗೂ ಕಾರ್ಯಕರ್ತರನ್ನೊಳಗೊಂಡು ಬೆಂಗಳೂರಿನ ವಿಧಾನಸೌಧದಲ್ಲಿ ಅಧಿವೇಶನ ನಡೆಯುತ್ತಿದ್ದ ವೇಳೆ, ಶಾಸಕರಾದ ಪೊನ್ನಣ್ಣನವರನ್ನು ಭೇಟಿ ಮಾಡಿ ವಿಷಯವನ್ನು ತಿಳಿಸಿದರು. ಶಾಸಕರು ತಮ್ಮ ಬಿಡುವಿಲ್ಲದ ಸಮಯದಲ್ಲಿಯೂ ಸಹ ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಕೆ.ಆರ್. ಆಸ್ಪತ್ರೆಯ ನಿರ್ದೇಶಕರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ತಕ್ಷಣವೇ ತಮ್ಮ ಕಾರ್ಯದರ್ಶಿಗಳ ಮೂಲಕ ಶಿಫಾರಸು ಪತ್ರ ನೀಡಿ, ಸರ್ಕಾರದ ಸಹಾಯದಡಿ 3 ಲಕ್ಷ ರೂಪಾಯಿಗಳ ವೆಚ್ಚದ*ಉಚಿತ ಶಸ್ತ್ರಚಿಕಿತ್ಸೆ ನಡೆಸಿ ಕೊಡುವಲ್ಲಿ ಮಾನವೀಯತೆ ಮೆರೆದಿದ್ದಾರೆ.

ಶಾಸಕರ ಮಾನವೀಯ ಕಾರ್ಯಕ್ಕೆ ಇಂದು ರಾಮಚಂದ್ರಪ್ಪನವರು ಸಂಪೂರ್ಣ ಗುಣಮುಖರಾಗಿದ್ದು, ತಮ್ಮ ಪಾದಗಳಿಂದಲೇ ನಡೆಯುವಂತಾದರು. ಗುಣಮುಖರಾದ ರಾಮಚಂದ್ರಪ್ಪನವರು, ತಮ್ಮ ಆರೋಗ್ಯವನ್ನ ಉಳಿಸಿದ, ಶಾಸಕರಾದ ಎ.ಎಸ್. ಪೊನ್ನಣ್ಣನವರಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಲು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಗಣೇಶ್ ಚೆನ್ನಯನಕೋಟೆ, ಕಾಂಗ್ರೆಸ್ ಪಕ್ಷದ ಮುಖಂಡರಾದ ಸಣ್ಣುವಂಡ ರತ್ನ ಸುಬ್ಬಯ್ಯ, ಮಾಳೇಟಿರ ಸಾಬು ಕಾಳಪ್ಪ ಹಾಗೂ ಪಕ್ಷದ ಕಾರ್ಯಕರ್ತರಾದ ಮಿಲನ್ ಸುಬ್ಬಯ್ಯ, ದರ್ಶನ್, ರತನ್ ಭೀಮಯ್ಯ ಇವರೊಂದಿಗೆ ಶಾಸಕರ ವಿರಾಜಪೇಟೆಯ ಗೃಹ ಕಛೇರಿಗೆ ಬಂದು ಭಾವಪೂರ್ಣವಾಗಿ ಮಾಲಾರ್ಪಣೆ ಮಾಡಿ ಧನ್ಯವಾದ ಸಲ್ಲಿಸಿದರು.