ಮಡಿಕೇರಿ: ಪುಟಾಣಿನಗರದ ಉದ್ಭವ ವಿನಾಯಕ ಸೇವಾ ಸಮಿತಿಯಿಂದ ಬಡಾವಣೆಯ ನಿವಾಸಿಗಳಿಗೆ ವಿವಿಧ ಆಟೋಟ ಸ್ಪರ್ಧೆ

ಮಡಿಕೇರಿ: ನಗರದ ಪುಟಾಣಿನಗರದ ಶ್ರೀ ಉದ್ಭವ ವಿನಾಯಕ ಸೇವಾ ಸಮಿತಿಯ ಸದಸ್ಯರು ಭಾನುವಾರ ಬಡಾವಣೆಯ ನಿವಾಸಿಗಳಿಗೆ ವಿವಿಧ ರೀತಿಯ ಆಟೋಟ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿತ್ತು. ಬೆಳಿಗ್ಗೆಯಿಂದಲೇ ಬಡಾವಣೆಯ ನಿವಾಸಿಗಳು ಮಕ್ಕಳು ಸೇರಿದಂತೆ ವಿವಿಧ ಕ್ರೀಡಾಕೂಟದಲ್ಲಿ ಮಳೆಯನ್ನು ಲೆಕ್ಕಿಸದೆ ಅತ್ಯಂತ ಉತ್ಸಾಹದಿಂದ ಭಾಗಿಯಾಗಿದರು. ಅಂಗನವಾಡಿ ಮಕ್ಕಳಿಗೆ ಕಾಳು ಹೆಕ್ಕುವುದು,ರಸ್ತೆ ಓಟ,ಕಪ್ಪೆ ಓಟ,ಬಡಾವಣೆಯಲ್ಲಿ ಪ್ರತಿಷ್ಟಾಪನೆ ಮಾಡಿರುವ ಗಣಪತಿ ಮೂರ್ತಿಯ ಚಿತ್ರಕಲೆ ಆದರ್ಶ ದಂಪತಿಗಳಿಗೆ ವಿಶೇಷ ಕ್ರೀಡೆ,ಯುವಕರಿಗೆ ಮಡಿಕೆ ಒಡೆಯುವ ಸ್ಪರ್ಧೆ, ಹಗ್ಗ ಜಗ್ಗಟ ಸೇರಿದಂತೆ ವಿವಿಧ ಬಗ್ಗೆಯ ಕ್ರೀಡಾಕೂಟವನ್ನು ನಡೆಸಲಾಯಿತು. ಸಂಜೆ ಬಡಾವಣೆಯ ಮಕ್ಕಳು ಸೇರಿದಂತೆ ಶಾಲಾ ಕಾಲೇಜಿನ ಯುವಕ-ಯುವತಿಯರು ನೃತ್ಯ ಪ್ರದರ್ಶನ ಮಾಡಿದರು.
ಈ ಸಂದರ್ಭ ಉದ್ಭವ ಕಲೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ಮೂಡಾ ಅದ್ಯಕ್ಷ ರಾಜೇಶ್ ಯಲ್ಲಪ್ಪ ಮಾತಾನಾಡಿ ಪುಟಾಣಿ ನಗರದ ಯುವಕರು ಗಣಪತಿಯನ್ನು ಕಳೆದ 32 ವರ್ಷಗಳಿಂದ ಪ್ರತಿಷ್ಟಾಪನೆ ಮಾಡಿ,ಧಾರ್ಮಿಕ ಕಾರ್ಯಗಳೊಂದಿಗೆ ಹಲವಾರು ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದ್ದಾರೆ.ಪುಟಾಣಿನಗರದ ಯುವಕರ ಕಾರ್ಯವನ್ನು ಪ್ರತಿವರ್ಷ ಹತ್ತಿರದಿಂದ ನೋಡಿಕೊಂಡು ಬಂದಿದ್ದೇನೆ.ಗಣಪತಿ ಪ್ರತಿಷ್ಠಾಪನೆ ಮಾಡುವುದು ಅಲ್ಲದೇ ಸ್ಥಳೀಯ ಪ್ರತಿಭೆಗಳಿಗೆ ಉತ್ತಮವಾದ ರೀತಿಯಲ್ಲಿ ವೇದಿಕೆಯನ್ನು ಕಲ್ಪಿಸಿ ಅವರಲ್ಲಿ ಇರುವ ಪ್ರತಿಭೆಗಳನ್ನು ಹೊರ ತರಲು ಯುವಕರು ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಬಣ್ಣಿಸಿದರು. ಕಾರ್ಯಕ್ರಮದಲ್ಲಿ ಮೂಡಾ ಸದಸ್ಯ ಚಂದ್ರಶೇಖರ್,ಬಡಾವಣೆ ನಿವಾಸಿ ಮಾಜಿ ಪೋಲಿಸ್ ಅಧಿಕಾರಿ ನಂದಕುಮಾರ್,ಅರಣ್ಯ ಇಲಾಖೆ ನಿವೃತ್ತ ಸಿಬ್ಬಂದಿ ಎಂ ರಾಜು ಅವರಿಗೆ ಇದೇ ಸಂದರ್ಭ ಸನ್ಮಾನ ಮಾಡಲಾಯಿತು.