ಮಡಿಕೇರಿ| ಅನಾರೋಗ್ಯದಿಂದ ಬಳಲುತ್ತಿದ್ದ ಹಸು ಸಾವು: ಹಿಂದೂ ಸಾಂಪ್ರದಾಯದಂತೆ ಅಂತ್ಯಕ್ರಿಯೆ ಮಾಡಿದ ಯುವಕರು

ಮಡಿಕೇರಿ| ಅನಾರೋಗ್ಯದಿಂದ ಬಳಲುತ್ತಿದ್ದ  ಹಸು ಸಾವು: ಹಿಂದೂ ಸಾಂಪ್ರದಾಯದಂತೆ ಅಂತ್ಯಕ್ರಿಯೆ ಮಾಡಿದ ಯುವಕರು

ಮಡಿಕೇರಿ:-ಸಾಮಾನ್ಯವಾಗಿ ಗೋವುಗಳು ಅನಾರೋಗ್ಯದಿಂದ ಮೃತಪಟ್ಟರೆ ಅಂತಹ ಗೋವುಗಳನ್ನು ಕಾಡನಂಚಿನ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಶವಸಂಸ್ಕಾರ ಮಾಡುತ್ತಾರೆ.ಅಥವಾ ಸ್ಥಳೀಯ ಪಟ್ಟಣ ಪಂಚಾಯತಿ,ಗ್ರಾಮ ಪಂಚಾಯತಿ ಸಿಬ್ಬಂದಿಗಳಿಗೆ ಹೇಳಿ ಅವರಿಗೆ ಮೃತದೇಹವನ್ನು ಹಸ್ತಾಂತರ ಮಾಡುತ್ತಾರೆ.ಆದರೆ ಇಲ್ಲೊಂದು ಬಡಾವಣೆ ಯುವಕರು ಅನಾರೋಗ್ಯದಿಂದ ಬಳಲಿ‌ ಮೃತಪಟ್ಟ ಗೋ ಮಾತೆಯ ಮೃತದೇಹವನ್ನು ಹಿಂದೂಗಳ ಸಾಂಪ್ರಾದಾಯದಂತೆ ಹೂಗಳನ್ನು ಇಟ್ಟು ಪೂಜೆಗಳನ್ನು ಮಾಡಿ ಅಂತ್ಯಕ್ರಿಯೆ ಮಾಡಿ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಒಳಗಾಗಿದ್ದಾರೆ.

 ಅಂದಹಾಗೆ ಈ ಘಟನೆ ನಡೆದಿದು ಮಂಜಿನ ನಗರಿ ಮಡಿಕೇರಿಯ ಪುಟಾಣಿ ನಗರದಲ್ಲಿ. ಹೌದು ಕಳೆದ ಮೂರು ನಾಲ್ಕು ದಿನಗಳಿಂದ ಬಡಾವಣೆಯ ಶ್ರೀದುರ್ಗಪರಮೇಶ್ವರಿ ದೇವಾಲಯ ಸಮೀಪದಲ್ಲಿ ಯಾರೋ ಸಾಕಿದ ಹಸುವೊಂದು ನರಳಟ ನಡೆಸುತ್ತಿದ್ದನ್ನು ಕಂಡು ಸಾಮಾಜಿಕ ಜಾಲತಾಣದಲ್ಲಿ ಹಸುವಿನ ಮಾಲೀಕರು ಯಾರದ್ರು ಇದ್ದಾರೆ ಈ ಹಸುವನ್ನು ತೆಗೆದುಕೊಂಡು ಹೋಗಿ ಅನಾರೋಗ್ಯದಿಂದ ಬಳಲುತ್ತಿದೆ ಎಂದು ಮನವಿ ಮಾಡಿದ್ರು.ಆದರೆ ಯಾರು ಅದಕ್ಕೆ ಸ್ಪಂದಿಸಿದ ಹಿನ್ನಲೆಯಲ್ಲಿ ಪಶುಸಂಗೋಪನೆ ಇಲಾಖೆಯ ವೈದ್ಯರನ್ನು ಸಂಪರ್ಕ ಮಾಡಿದ್ರು.ಯಾವುದೇ ವೈದ್ಯರು ಸ್ಥಳಕ್ಕೆ ಬಂದು ಚಿಕಿತ್ಸೆ ಕೋಡಲು ಮನಸ್ಸು ಮಾಡಲ್ಲೇ ಇಲ್ಲ.

ಆದ್ರೂ ಕೆಲ ಯುವಕರು ಅಹಾರ ಗಂಜಿಯನ್ನು ನೀಡಿ ಆರೈಕೆ ಮಾಡಲು ಮುಂದಾಗಿದ್ದಾರೆ. ಆದರೆ ಹಸು ಮಾತ್ರ ಅನಾರೋಗ್ಯ ಹೆಚ್ಚಾಗಿ ಇಂದು ಮೃತಪಟ್ಟಿದೆ.ಈ ಹಿನ್ನಲೆಯಲ್ಲಿ ಪುಟಾಣಿನಗರ ಯುವಕರು ಹಸು ಮೃತಪಟ್ಟ ಹಿನ್ನಲೆಯಲ್ಲಿ ಬಡಾವಣೆಯ ಮಹಿಳೆಯರನ್ನು ಕರೆಸಿ ಪೂಜೆ ಧಾರ್ಮಿಕ ಕೈಕರ್ಯಗಳನ್ನು ನೇರವೆರಿಸಿ ನಂತರ ಹಿಂದೂ ಸಂಪ್ರದಾಯದಂತೆ ನಗರಸಭೆಯ ಸಿಬ್ಬಂದಿಗಳೊಂದಿಗೆ ಅಂತ್ಯಕ್ರಿಯೆ ನೇರವೇರಿಸಿದ್ದಾರೆ.ಈ ಯುವಕರು ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಮಡಿಕೇರಿ ನಗರದ ಜನತೆ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.