ಮಡಿಕೇರಿ -ಮಂಗಳೂರು ರಸ್ತೆಯ ತಡೆಗೋಡೆ ವೀಕ್ಷಿಸಿದ ಮಡಿಕೇರಿ ನಗರ ಎಸ್.ಡಿ.ಪಿ.ಐ ಸಮಿತಿ

ಮಡಿಕೇರಿ -ಮಂಗಳೂರು ರಸ್ತೆಯ ತಡೆಗೋಡೆ ವೀಕ್ಷಿಸಿದ ಮಡಿಕೇರಿ ನಗರ ಎಸ್.ಡಿ.ಪಿ.ಐ ಸಮಿತಿ

ಮಡಿಕೇರಿ: ಮಡಿಕೇರಿ- ಮಂಗಳೂರು 275ರಾಷ್ಟ್ರೀಯ ಹೆದ್ದಾರಿಯ ರಸ್ತೆಯಲ್ಲಿರುವ ತಡೆಗೋಡೆಯಲ್ಲಿ ಬಿರುಕು ಬಿಟ್ಟಿರುವುದನ್ನು ಮಡಿಕೇರಿ ನಗರ ಎಸ್.ಡಿ.ಪಿ.ಐ ಸಮಿತಿ ಭೇಟಿ ಪರಿಶೀಲನೆ ನಡೆಸಿದರು. ತಡೆಗೋಡೆ ಗೋಡೆ ಕೆಳಭಾಗದಲ್ಲಿ ಸಂಕಷ್ಟದಲ್ಲಿ ವಾಸವಿರುವ ಐದು ಕುಟುಂಬಗಳನ್ನು ಕಾಳಜಿ ಕೇಂದ್ರದಲ್ಲಿ ಭೇಟಿ ಮಾಡಿ ಅವರ ಅಹವಾಲುಗಳನ್ನು ಎಸ್.ಡಿ.ಪಿ.ಐ ಸಮಿತಿ ಆಲಿಸಿದು. ಈ ಸಂದರ್ಭ SDPI ಜಿಲ್ಲಾಧ್ಯಕ್ಷ ನಗರಸಭೆ ಸದಸ್ಯರಾದ ಅಮೀನ್ ಮೊಹಿಸಿನ್, ಮನ್ಸೂರ್ ಅಲಿ, ಮೇರಿ ವೇಗಸ್, ಮತ್ತು SDPI ಮಡಿಕೇರಿ ನಗರ ಸಮಿತಿ ಸದಸ್ಯರುಗಳು ಹಾಜರಿದ್ದರು.