ಮಡಿಕೇರಿ ತಾಲ್ಲೂಕು ಮಟ್ಟದ ವಾಲಿಬಾಲ್:ರಾಫೆಲ್ಸ್ ಇಂಟರ್ನ್ಯಾಷನಲ್ ಪಿಯು ಕಾಲೇಜು ತಂಡ ಸತತ ನಾಲ್ಕನೇ ಬಾರಿಗೆ ಚಾಂಪಿಯನ್

ಮಡಿಕೇರಿ ತಾಲ್ಲೂಕು ಮಟ್ಟದ ವಾಲಿಬಾಲ್:ರಾಫೆಲ್ಸ್ ಇಂಟರ್ನ್ಯಾಷನಲ್ ಪಿಯು ಕಾಲೇಜು ತಂಡ ಸತತ ನಾಲ್ಕನೇ ಬಾರಿಗೆ ಚಾಂಪಿಯನ್
ಚಾಂಪಿಯನ್ ರಾಫೆಲ್ಸ್ ಇಂಟರ್ನ್ಯಾಷನಲ್ ‌ಕಾಲೇಜು ತಂಡ

ಮಡಿಕೇರಿ: ಹೊದವಾಡದ ರಾಫೆಲ್ಸ್ ಇಂಟರ್ನ್ಯಾಷನಲ್ ಪಿಯು ಕಾಲೇಜು ಬಾಲಕರ ವಾಲಿಬಾಲ್ ತಂಡವು ಸತತ ನಾಲ್ಕನೇ ಬಾರಿಗೆ ಮಡಿಕೇರಿ ತಾಲೂಕು ಪದವಿ ಪೂರ್ವ ಕಾಲೇಜು ಮಟ್ಟದ ವಾಲಿಬಾಲ್ ಪಂದ್ಯವಾಳಿಯಲ್ಲಿ ಗೆಲುವು ಸಾಧಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.

ಶುಕ್ರವಾರ ಭಾಗಮಂಡಲ ಸಮೀಪದ ಕೋರಂಗಾಲದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯಲ್ಲಿ ಮಡಿಕೇರಿ ತಾಲ್ಲೂಕು ಪದವಿ ಪೂರ್ವ ಕಾಲೇಜು ಮಟ್ಟದ ಬಾಲಕ ಮತ್ತು ಬಾಲಕಿಯರ ವಾಲಿಬಾಲ್ ಪಂದ್ಯಾವಳಿ ನಡೆಯಿತು.

ಬಾಲಕರ ವಿಭಾಗದಲ್ಲಿ ರಾಫೆಲ್ಸ್ ಇಂಟರ್ನ್ಯಾಷನಲ್ ಪಿಯು ಕಾಲೇಜು‌ ತಂಡವು ಮೊದಲ ಪಂದ್ಯದಲ್ಲಿ ಮಡಿಕೇರಿ ಜೂನಿಯರ್ ಕಾಲೇಜು ತಂಡವನ್ನು 15-02 ಹಾಗೂ 15-08 ಎರಡು ನೇರ ಸೆಟ್ ಗಳಿಂದ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿತು. ಸೆಮಿಫೈನಲ್ ಪಂದ್ಯದಲ್ಲಿ ಆತಿಥೇಯ ಅಟಲ್ ಬಿಹಾರಿ ವಾಜಪೇಯಿ ಕಾಲೇಜು‌ ತಂಡವನ್ನು 16-14 ಹಾಗೂ 15-08 ಅಂಕಗಳ ಮೂಲಕ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು. ಫೈನಲ್ ಪಂದ್ಯದಲ್ಲಿ ಕಾವೇರಿ ಕಾಲೇಜು ಭಾಗಮಂಡಲ ತಂಡವನ್ನು 15-13 ಹಾಗೂ 15-08 ಅಂಕಗಳ ಎರಡು ನೇರ ಸೆಟ್ ಗಳ ಮೂಲಕ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.

ಗೋಣಿಕೊಪ್ಪಲಿನ ಕಾಪ್ಸ್ ಕಾಲೇಜಿನಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಪಂದ್ಯಾವಳಿಯಲ್ಲಿ ರಾಫೆಲ್ಸ್ ಇಂಟರ್ನ್ಯಾಷನಲ್ ಪಿಯು ಕಾಲೇಜು ತಂಡವು ಮಡಿಕೇರಿ ತಾಲ್ಲೂಕನ್ನು ಪ್ರತಿನಿಧಿಸಲಿದೆ. ಪ್ರಶಸ್ತಿ ವಿತರಣಾ ಸಂದರ್ಭ ಕಾಲೇಜಿನ ಉಪನ್ಯಾಸಕರಾದ ಹುಸೈನ್,ಪೂಜ ಶ್ರೀ, ತರಬೇತುದಾರರಾದ ಇಸ್ಮಾಯಿಲ್ ಕಂಡಕರೆ,ಫರ್ಹಾನ್,ಹಾಗೂ ಆಶಿರ್ ಇದ್ದರು.