ಹೊಸತೋಟ ಜಾಮಿಯ ಮಸೀದಿಯಲ್ಲಿ ಮೀಲಾದ್ ಆಚರಣೆ

ಕುಶಾಲನಗರ: ಪ್ರವಾದಿ ಪೈಗಂಬರ್ ಮುಹಮ್ಮದ್ ಮುಸ್ತಪ ,(ಸ.ಅ) ಅವರ ೧೫೦೦ ನೇ ಜನ್ಮದಿನವನ್ನು ಹೊಸತೋಟಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಹೊಸತೋಟ ಜಾಮಿಯಾ ಮಸೀದಿ ವತಿಯಿಂದ ಪ್ರವಾದಿಯವರ ಜನ್ಮದಿನವನ್ನು ಆಚರಿಸಲಾಯಿತು. ಪ್ರವಾದಿಯವರ ಸಂದೇಶವನ್ನು ಸಾರುವ ಹಾಡು, ಪ್ರಭಾಷಣ, ದಫ್ ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಎರಡು ದಿನಗಳ ಕಾಲ ನಡೆಸಲಾಯಿತು. ಪ್ರವಾದಿಯವರು ಶಾಂತಿ, ಸಾಹೋದರ್ಯತೆ, ಸಮಾನತೆಯನ್ನು ೧೪ ಶತಮಾನಗಳ ಹಿಂದೆ ಸಾರಿದ್ದರು. ಪ್ರವಾದಿಯವರ ಆದರ್ಶಗಳನ್ನು ಮೈಗೂಡಿಸಿ ಜಾತಿ, ಧರ್ಮವೆಂಬ ಭೇದವಿಲ್ಲದೇ ಎಲ್ಲರೂ ಒಗ್ಗಟ್ಟಿನಿಂದ ಬಾಳಬೇಕು ಎಂದು ವೇದಿಕೆಯಲ್ಲಿದ್ದ ಗಣ್ಯರು ಕರೆ ನೀಡಿದರು. ಕೊಡುಗೈ ದಾನಿ ಫಾರೂಕ್, ಹರದೂರು ಗ್ರಾ.ಪಂ ಉಪಾಧ್ಯಕ್ಷರಾದ ಎಂ.ಎ.ಮುಸ್ತಫರವರಿಗೆ ಕಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಅತಿಥಿಗಳಾದ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ರಜ಼ಾಕ್, ಕೂಡುಮಂಗಳೂರು ಗ್ರಾ.ಪಂ ಸದಸ್ಯರಾದ ಕೆ.ಬಿ.ಶಂಶುದ್ಧೀನ್, ಕಮಿಟಿ ಅಧ್ಯಕ್ಷರು, ಪ್ರಮುಖರಾದ ಕೋಯ ತಂಜ್ಞಳ್, ಸಲೀಂ, ಮದ್ರಸ ಅಧ್ಯಾಪಕರು ಹಾಗೂ ಇನ್ನಿತರರು ಇದ್ದರು.