ಮಾಜಿ ಎಂ.ಸಿ ನಾಣಯ್ಯ‌ ಅವರನ್ನು ಭೇಟಿಯಾದ ಸಚಿವ ಸಂತೋಷ್ ಲಾಡ್: ಎಂ.ಸಿ ನಾಣಯ್ಯ ಅವರಿಗೆ ಜನ್ಮದಿನದ ಶುಭಕೋರಿದ ಸಂತೋಷ್ ಲಾಡ್

ಮಾಜಿ ಎಂ.ಸಿ ನಾಣಯ್ಯ‌ ಅವರನ್ನು ಭೇಟಿಯಾದ ಸಚಿವ ಸಂತೋಷ್ ಲಾಡ್:  ಎಂ.ಸಿ ನಾಣಯ್ಯ ಅವರಿಗೆ ಜನ್ಮದಿನದ ಶುಭಕೋರಿದ ಸಂತೋಷ್ ಲಾಡ್

ಮಡಿಕೇರಿ: ಕೊಡಗು ಜಿಲ್ಲಾ ಪ್ರವಾಸದಲ್ಲಿರುವ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ರವರೊಂದಿಗೆ ಇಂದು, ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣನವರು, ಹಿರಿಯ ಕಾಂಗ್ರೆಸ್ ಮುಖಂಡ ಮಾಜಿ ಸಚಿವರಾದ ಎಂ.ಸಿ ನಾಣಯ್ಯ ರವರ ಮನೆಗೆ ಭೇಟಿ ನೀಡಿದರು.

ಔಪಚಾರಿಕವಾದ ಈ ಭೇಟಿ ಸಂದರ್ಭ,ಇಂದು ಜನ್ಮದಿನವನ್ನು ಆಚರಿಸುತ್ತಿರುವ ಎಂ.ಸಿ ನಾಣಯ್ಯ ರವರನ್ನು ಅಭಿನಂದಿಸುವುದರೊಂದಿಗೆ ಅವರ ಆರೋಗ್ಯವನ್ನು ವಿಚಾರಿಸಿಕೊಂಡರು. ಈ ಸಂದರ್ಭದಲ್ಲಿ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷರಾದ ಎಸ್. ಆರ್. ಮೆಹರೋಜ್ ಖಾನ್ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶ್ರೀ ಧರ್ಮಜ ಉತ್ತಪ್ಪ ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.