ಸೆ.11 ರಿಂದ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟ

ಸೆ.11 ರಿಂದ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟ

ಮಡಿಕೇರಿ:-2025-26ನೇ ಸಾಲಿನ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟ ಸ್ಪರ್ಧೆಗಳು ಸೆಪ್ಟೆಂಬರ್, 11, 13, 14 ಮತ್ತು 15 ರಂದು ನಡೆಯಲಿದೆ. ಜಿಲ್ಲಾ ಮಟ್ಟದ ದಸರಾ ಕ್ರೀಡಾ ಕೂಟದಲ್ಲಿ ಭಾಗವಹಿಸಿರುವ ವೈಯಕ್ತಿಕ ಕ್ರೀಡೆಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಕ್ರೀಡಾಪಟುಗಳು ಹಾಗೂ ಗುಂಪು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ ಗುಂಪುಗಳಿಗೆ ಮಾತ್ರ ವಿಭಾಗ ಮಟ್ಟದಲ್ಲಿ ಭಾಗವಹಿಸಲು ಅರ್ಹರಿದ್ದು, ಈ ಕುರಿತು ಜಿಲ್ಲಾ ಮಟ್ಟದಲ್ಲಿ ವಿಜೇತರಾದ ಕ್ರೀಡಾಪಟುಗಳು ನಿಗದಿಗ ಜಿಲ್ಲೆಯ ಕ್ರೀಡಾ ಕೇಂದ್ರಗಳಲ್ಲಿ ಆಯಾಯ ಜಿಲ್ಲೆಯ ಕ್ರೀಡಾ ಅಧಿಕಾರಿಗಳು ನಿಗಧಿಪಡಿಸಿರುವ ಸಮಯಗಳಲ್ಲಿ ವರದಿ ಮಾಡಿಕೊಳ್ಳುವುದು. ತಪ್ಪಿದ್ದಲ್ಲಿ ಈ ಕ್ರೀಡಾಪಟುಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಿದೆ.

ಚಿಕ್ಕಮಗಳೂರು ವಿಭಾಗಕ್ಕೆ ಸೆಪ್ಟೆಂಬರ್, 11 ರಂದು ಬೆಳಗ್ಗೆ 8 ಗಂಟೆಗೆ ಟೆಕ್ವೊಂಡೊ, ಜೂಡೋ ಕ್ರೀಡೆಯು ಚಿಕ್ಕಮಗಳೂರು ಜಿಲ್ಲಾ ಶತಮಾನೋತ್ಸವ ಕ್ರೀಡಾಂಗಣದಲ್ಲಿ ನಡೆಯಲಿದೆ. ಜೂಡೋ(ರವಿ 7989495494), ಟೆಕ್ವೊಂಡೊ(ಯಶ್ವಂತ್ 9071208847 ಇವರನ್ನು ಸಂಪರ್ಕಿಸಬಹುದು. ಉಡುಪಿ ವಿಭಾಗಕ್ಕೆ ಸೆಪ್ಟೆಂಬರ್, 13 ಮತ್ತು 14 ರಂದು ಬೆಳಗ್ಗೆ 8 ಗಂಟೆಯಿಂದ ಅಥ್ಲೆಟಿಕ್ಸ್, ಟೆನ್ನಿಸ್, ಥ್ರೋಬಾಲ್, ಟೇಬಲ್ ಟೆನ್ನಿಸ್, ವುಷು ಉಡುಪಿ ಅಜ್ಜರ ಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಅನಂತರಾಮ್ 9448984729. ದಕ್ಷಿಣ ಕನ್ನಡ ಜಿಲ್ಲೆಯವರಿಗೆ ಸೆಪ್ಟೆಂಬರ್, 13 ಮತ್ತು 14 ರಂದು ಬೆಳಗ್ಗೆ 8 ಗಂಟೆಗೆ ಭಾರ ಎತ್ತುವುದು(ವೇಟ್ ಲಿಫ್ಟಿಂಗ್), ನೆಟ್ ಬಾಲ್, ವಾಲಿಬಾಲ್, ಬಾಕ್ಸಿಂಗ್, ಕುಸ್ತಿ, ಷಟಲ್ ಬ್ಯಾಡ್‍ಬ್ಯಾಡ್ಮಿಂಟನ್, ಬಾಸ್ಕೆಟ್ ಬಾಲ್ ಕ್ರೀಡೆಯು ಮಂಗಳೂರು ಮಂಗಳ ಕ್ರೀಡಾಂಗಣದಲ್ಲಿ ನಡೆಯಲಿದೆ. ರಜಿನಿ 8105100781 ನ್ನು ಸಂಪರ್ಕಿಸಬಹುದು. ಹಾಸನ ವಿಭಾಗಕ್ಕೆ ಸೆಪ್ಟೆಂಬರ್, 13 ಮತ್ತು 14 ರಂದು ಫುಟ್ ಬಾಲ್, ಕಬಡ್ಡಿ, ಬಾಲ್ ಬ್ಯಾಡ್ ಮಿಂಟನ್, ಖೋ ಖೋ, ಹ್ಯಾಂಡ್ ಬಾಲ್ ಮತ್ತು ಈಜು ಸ್ಪರ್ಧೆಗಳು ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ರವೀಶ್: 9448346424 ನ್ನು ಸಂಪರ್ಕಿಸಬಹುದು. ಕೊಡಗು ವಿಭಾಗಕ್ಕೆ ಸೆಪ್ಟೆಂಬರ್, 15 ರಂದು ಬೆಳಗ್ಗೆ 8 ಗಂಟೆಗೆ ಹಾಕಿ, ಯೋಗ ಹಾಗೂ ಜಿಮ್ನಾಸ್ಟಿಕ್ಸ್(ಆಯ್ಕೆ) ಕೊಡಗು ಕೂಡಿಗೆ ಕ್ರೀಡಾ ಶಾಲೆಯಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ವೆಂಕಟೇಶ್ 9844326007(ಹಾಕಿ ಹಾಗೂ ಯೋಗಾ), ಸುರೇಶ್ 9483629216(ಜಿಮ್ನಾಸ್ಟಿಕ್ಸ್). ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿ ವಿಭಾಗ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳು ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿ ದಸರಾ ಕ್ರೀಡಾಕೂಟವನ್ನು ಯಶಸ್ವಿಗೊಳಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.