ಮರ್ಕಝುಲ್ ಹಿದಾಯ ಕಾಲೇಜಿನಲ್ಲಿ ನೀಟ್ ತರಬೇತಿ

ಕಡಂಗ:ನಾಪೋಕ್ಲು ಸಮೀಪದ ಕೊಟ್ಟಮುಡಿ ಮರ್ಕಝುಲ್ ಹಿದಾಯ ಕಾಲೇಜು ಸಭಾಂಗಣದಲ್ಲಿ ನೀಟ್ ತರಬೇತಿ ಕಾರ್ಯಗಾರ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ವೈದ್ಯ ಡಾ, ಅಬ್ದುಲ್ ಅಜೀಜ್ ನೆರವೇರಿಸಿದರು.ಅಧ್ಯಕ್ಷತೆಯನ್ನು ಸಂಸ್ಥೆಯ ಹಿರಿಯ ಕಾರ್ಯದರ್ಶಿ ಯೂಸುಫ್ ಹಾಜಿ ಕೊಂಡೆಂಗೇರಿ ವಹಿಸಿದ್ದರು.
ಸಮಾರಂಭದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಸಖಾಫಿ ,ಮಾತನಾಡಿ ವಿದ್ಯಾರ್ಥಿನಿಯರು ಈ ತರಬೇತಿಯ ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು . ಸಂಸ್ಥೆಯ ನಿರ್ದೇಶಕರೂ ಹಾಗೂ ಶಾಲಾ ಡೆವೆಲಪ್ಮೆಂಟ್ ಅಧ್ಯಕ್ಷರಾದ ಮೊಹಮ್ಮದ್ ಹಾಜಿ ಮಾತನಾಡಿ ಶುಭ ಕೋರಿದರು.
ನ್ಯೂಕ್ಲಿ ನೀಟ್ ಫೌಂಡೇಶನ್ ಸಂಸ್ಥೆಯ ಸೈಯದ್ ಭಾಷಾ ಓರಿಯಂಟೇಷನ್ ತರಬೇತಿ ನಡೆಸಿದರು. ಸಂಸ್ಥೆಯ ಆಡಳಿತ ಅಧಿಕಾರಿ ಎಂ.ಬಿ.ಹಮೀದ್ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರು,ಉಪನ್ಯಾಸಕರು ಹಾಗೂ ವಿದ್ಯಾರ್ಥಿನಿಯರು ಹಾಗು ಪೋಷಕರು ಉಪಸ್ಥಿತರಿದ್ದರು.