ಒಂದು ಕ್ಷೇತ್ರ - ನೂರಾರು ವದಂತಿಗಳು - ಒಬ್ಬ ಅನಾಮಿಕ - ಹದಿನೇಳು ಗುಂಡಿಗಳು - ಒಂದು ಸತ್ಯ!

(ವಿಶೇಷ ವರದಿ: ಅನಿಲ್ ಹೆಚ್.ಟಿ)
ಧಮ೯ಕ್ಷೇತ್ರಕ್ಕೇ ಈಗ ಅಗ್ನಿಪರೀಕ್ಷೆಯ ಸಮಯ... ನ್ಯಾಯ ನೀಡುವ ಕ್ಷೇತ್ರಕ್ಕೇ ನ್ಯಾಯ ಕೊಡಿ ಎಂದು ಕೇಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ದಕ್ಷಿಣ ಭಾರತದ ಪ್ರಮುಖ ಧಾಮಿ೯ಕ ಕ್ಷೇತ್ರವಾಗಿರುವ ಧಮ೯ಸ್ಥಳ ಈಗ ಒಂದಿಲ್ಲೊಂದು ಕಾರಣದಿಂದ ಸುದ್ದಿಯಾಗುತ್ತಿದೆ. ಧಾಮಿ೯ಕ ವಿಚಾರಗಳಿಗೆ ಸುದ್ದಿಯಲ್ಲಿದ್ದ ಕ್ಷೇತ್ರವೊಂದು ಈಗ ವಿವಾದದ ಕಾರಣದಿಂದ ನಿತ್ಯ ಸುದ್ದಿಯಲ್ಲಿದೆ. ಅದು ಧಮ೯ಸ್ಥಳ ಅಂಥಲ್ಲ. ಯಾವುದೇ ಕ್ಷೇತ್ರ, ಯಾವುದೇ ಸಂಸ್ಥೆ ಅಥವಾ ಯಾವುದೇ ವ್ಯಕ್ತಿಯಾಗಲಿ.. ಹತ್ತಾರು ವಷ೯ಗಳಿಂದ ನೂರಾರು ರೀತಿಯಲ್ಲಿ ಸಾಮಾಜಿಕ ಸೇವಾ ಕಾಯ೯ಗಳಲ್ಲಿ ಸಕ್ರಿಯರಾಗಿದ್ದು, ಲಕ್ಷಾಂತರ ಮಂದಿಗೆ ಸಹಾಯ ಮಾಡಿದ್ದರೂ ಕೊನೆಗೊಂದು ದಿನ ಯಾರೇ, ಎಷ್ಟೇ ಪ್ರಭಾವಿಯಾಗಿದ್ದರೂ ಸಮಾಜದ ಕೆಲವರಿಂದ ಎದುರಾಗುವ ಟೀಕೆ ಟಿಪ್ಪಣಿಗಳು , ಆರೋಪಗಳು ಎಂಬ ಅಗ್ನಿಪರೀಕ್ಷೆಗೆ ಒಳಗಾಗಲೇ ಬೇಕು. ಇಂಥ ಅಗ್ನಿಪರೀಕ್ಷೆಯ ದಿನಗಳಲ್ಲಿ ಅಂಥವರು ಮಾಡಿದ ಎಷ್ಟೇ ದೊಡ್ಡ ಸಾಮಾಜಿಕ ಸೇವೆಯಾಗಿದ್ದರೂ ಅದು ಟೀಕಾಕಾರರಿಂದಾಗಿ ಸಮಾಜದ ಮುಂದೆ ನಗಣ್ಯವಾಗಿಬಿಡುತ್ತದೆ. ಅದೆಲ್ಲಾ ಮಾಡಿದ್ದು ಸ್ವಾಥ೯ಕ್ಕಾಗಿ, ತಪ್ಪನ್ನು ಮುಚ್ಚಿಕೊಳ್ಳಲೋಸ್ಕರವಾಗಿ ಎಂಬ ವಾದವೊಂದೇ ಇಂಥ ಸಾಮಾಜಿಕ ಸುಧಾರಕರ ಬಗ್ಗೆ ಕೆಟ್ಟ ರೀತಿಯ ಸಂದೇಶ ಹರಡಲು ಕಾರಣವಾಗುತ್ತದೆ. ಧಮ೯ಸ್ಥಳದ ವಿಚಾರಕ್ಕೆ ಬರುವುದಾದಲ್ಲಿ, ಶತಮಾನದಿಂದಲೂ ಧಮ೯ಸ್ಥಳ ಎಂಬ ಶ್ರೀಕ್ಷೇತ್ರದಲ್ಲಿ ಶ್ರೀ ಮಂಜುನಾಥ ಸ್ವಾಮಿ, ಶ್ರೀ ಅಣ್ಣಪ್ಪ ದೈವಗಳಿಗೆ ಪೂಜೆ ಸಾಗಿದ್ದು, ಭಾರತಾದ್ಯಂತದಿಂದಲೂ ಧಮ೯ಕ್ಷೇತ್ರಕ್ಕೆ ದಿನನಿತ್ಯವೂ ಸಾವಿರಾರು ಭಕ್ತರು ಬಂದು ಪ್ರಾಥ೯ನೆ, ಪೂಜೆ ಸಲ್ಲಿಸುತ್ತಾರೆ. ಗಣ್ಯಾತಿಗಣ್ಯರಿಂದ ಮೊದಲ್ಗೊಂಡು ಸಾಮಾನ್ಯರೂ ಈ ಕ್ಷೇತ್ರದ ಮೇಲೆ ನಂಬಿಕೆ ಇರಿಸಿದ್ದಾರೆ. ಹಿಂದೂಗಳೂ ಮಾತ್ರವಲ್ಲ, ಸವ೯ಧಮೀ೯ಯರೂ ಧಮ೯ಸ್ಥಳದ ಮೇಲೆ ಅಪಾರವಾದ ನಂಬಿಕೆ ಹೊಂದಿದ್ದಾರೆ. ಇಂಥ ಕ್ಷೇತ್ರದ ಮೇಲೆ ಕೆಲವು ವಷ೯ಗಳಿಂದ ವಿವಾದದ ಕಿಡಿಗಳು ಕಾಣಲಾರಂಭಿಸಿದ್ದವು. ಇಂಥ ಕಿಡಿಗಳ ಸೖಷ್ಟಿಯಾದದ್ದು ಬೇರೆಲ್ಲೂ ಅಲ್ಲ, ಧಮ೯ಸ್ಥಳದಲ್ಲಿಯೇ ವಿವಾದದ ಕಿಡಿ ಹೊತ್ತಿ.. ಹೊಗೆಯಾಡತೊಡಗಿತ್ತು. ಧಮ೯ಸ್ಥಳ ಕ್ಷೇತ್ರದ ಮುಖ್ಯಸ್ಥರ ಕುಟುಂಬದ ಸದಸ್ಯರ ಮೇಲೆ ಸಂಶಯದ ನೋಟ, ವದಂತಿಗಳು ಪುಂಖಾನುಪುಂಖವಾಗಿ ಕೇಳಿಬರಲಾರಂಭಿಸಿದವು. ಧಮ೯ಸ್ಥಳ ವ್ಯಾಪ್ತಿಯಲ್ಲಿ ಉಂಟಾದ ಕೆಲವೊಂದು ದುರಂತ, ಅಪರಾಧಗಳಿಗೆಲ್ಲಾ ಧಮ೯ಸ್ಥಳ ಕ್ಷೇತ್ರದ ಮುಖ್ಯಸ್ಥರನ್ನೇ ಹೊಣೆ ಮಾಡಲಾಯಿತು.
ಇವೆಲ್ಲಾ ಬಹಿರಂಗವಾಗಿ ಅಲ್ಲದಿದ್ದರೂ ಸಾಮಾಜಿಕ ಜಾಲತಾಣ ಎಂಬ ಆಧುನಿಕ ಮಾಧ್ಯಮ ವ್ಯವಸ್ಥೆಯಲ್ಲಿ ಕಿಡಿಯನ್ನು ಬೆಂಕಿಯನ್ನಾಗಿಸಿ ಊರನ್ನೆಲ್ಲಾ ದಹಿಸುವ ಪ್ರಕ್ರಿಯೆ ಪ್ರಾರಂಭವಾಯಿತು. ವದಂತಿಗಳ ಕಿಡಿ ಹೊತ್ತಿ, ಬೆಂಕಿಯ ಸ್ವರೂಪ ಜೋರಾಗುತ್ತಿರುವಂತೆಯೇ ಇಂಥ ಬೆಂಕಿಗೆ ತುಪ್ಪ ಸುರಿಯುವವರ ಸಂಖ್ಯೆಯೂ ಕಡಮೆಯಿರಲಿಲ್ಲ. ಧಮ೯ಸ್ಥಳದ ಬಗ್ಗೆ ಅಪನಂಬಿಕೆ ಉಂಟು ಮಾಡುವವರ ಸಂಖ್ಯೆ ಹೆಚ್ಚಾಗತೊಡಗಿತು. ಈ ರೀತಿ ವದಂತಿ ಉಂಟು ಮಾಡುವ ಅನೇಕರಲ್ಲಿ ಸರಿಯಾದ ಸಾಕ್ಷ್ಯಾಧಾರಗಳು ಇರಲಿಲ್ಲ. ಬಹಿರಂಗವಾಗಿ ಕ್ಷೇತ್ರದ ಪ್ರಮುಖರ ವಿರುದ್ದ ಆರೋಪ ಹೊರಿಸಲಾಗದೇ ವದಂತಿಗಳ ಮೂಲಕವೇ, ಬೇರೆ ಬೇರೆ ಪದಗಳ ಬಳಕೆ ಮೂಲಕವೇ ಕ್ಷೇತ್ರದ ವಿರುದ್ದ ನಿರಂತರ ಪ್ರಚಾರ ಮಾಡುವ ಅಭಿಯಾನವೇ ನಡೆಯಿತು. ಧಮ೯ಸ್ಥಳ ವ್ಯಾಪ್ತಿಯಲ್ಲಿ ನಡೆದ ಕೆಲವೊಂದು ಯುವತಿಯರ ಹತ್ಯೆ, ಅತ್ಯಾಚಾರ ಪ್ರಕರಣಗಳಿಗೆ ಕ್ಷೇತ್ರದತ್ತ ಬೆಟ್ಟು ಮಾಡಲಾಯಿತು. ನ್ಯಾಯದಾನಕ್ಕಾಗಿ ಅಭಿಯಾನ ಪ್ರಾರಂಭವಾಯಿತು. ಹೀಗಿದ್ದರೂ ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ, ಇಂಥವರು ಆರೋಪ ಮಾಡತೊಡಗಿದ್ದರು. ಧಮ೯ಸ್ಥಳಕ್ಕೆ ಅಗ್ನಿಪರೀಕ್ಷೆ ಪ್ರಾರಂಭವಾಗಿದ್ದೇ ಇಲ್ಲಿ. ಕೆಲವು ವಷ೯ಗಳಿಂದ ಕೇಳಿಬರುತ್ತಿದ್ದ ಆರೋಪಗಳು ಯಾವಾಗ ಮಿತಿ ಮೀರತೊಡಗಿದವೋ, ಸಾಮಾಜಿಕ ಜಾಲತಾಣಗಳು ಯಾವಾಗ ಧಮ೯ಕ್ಷೇತ್ರದ ವಿರುದ್ದ ಹೋರಾಟದ ತೀಪು೯ ನೀಡಿಕೆ, ಕ್ಷೇತ್ರದವರೇ ಅಪರಾಧಿಗಳು ಎಂದು ಬಿಂಬಿಸತೊಡಗಿದವೋ, ಅವರೆಗೂ ಕ್ಷೇತ್ರದ ಭಕ್ತರಾಗಿದ್ದವರಿಗೂ ಸ್ವಲ್ಪ ಅನುಮಾನ ಬರತೊಡಗಿತ್ತು. ಹೀಗೂ ಆಗಿರಬಹುದಾ ಎಂಬ ಮಾನವ ಸಹಜ ಪ್ರಶ್ನೆಗಳೂ ಕೆಲವೊಂದು ಭಕ್ತರನ್ನು ಕಾಡಿದ್ದು ಸತ್ಯ. ಸಹಜ ಕೂಡ. ಇದರಿಂದಾಗಿಯೇ ಪ್ರಾರಂಭಿಕ ಹಂತದಲ್ಲಿ ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿ, ಧಮ೯ಸ್ಥಳದ ಪರ ಜನರು ನಿಲ್ಲಲಿಲ್ಲ. ಭಕ್ತಾಧಿಗಳಿಂದ ನಿರೀಕ್ಷಿತ ಬೆಂಬಲವೂ ಆರಂಭಿಕವಾಗಿ ಕ್ಷೇತ್ರಕ್ಕೆ ಲಭಿಸಲಿಲ್ಲ ಎಂಬುದೂ ಗಮನಾಹ೯ . ಇದನ್ನೇ ದಾಳವಾಗಿ ಬಳಸಿಕೊಂಡ ಕ್ಷೇತ್ರ ವಿರೋಧಿ ಪಡೆ ತಾವು ಮಾಡಿದ್ದೇ ಆರೋಪಗಳು ಎಂಬಂತೆ ಮತ್ತಷ್ಟು ಅಪಪ್ರಚಾರದಲ್ಲಿ ತೊಡಗಿದ್ದವು.
ಕನಾ೯ಟಕ ರಾಜ್ಯ ಸಕಾ೯ರಕ್ಕೂ ಧಮ೯ಸ್ಥಳ ವಿಚಾರದಲ್ಲಿ ತನಿಖೆಗೆ ಒತ್ತಡ ಆರಂಭವಾಗಿತ್ತು. ಯಾವಾಗ ಅನಾಮಧೇಯ ವ್ಯಕ್ತಿಯೋವ೯ ತಲೆಬುರುಡೆ ಹಿಡಿದುಕೊಂಡು ನ್ಯಾಯಾಲಯದ ಮುಂದೆ ಬಂದು ನಾನೇ ಸಾಕ್ಷಿ ಎಂದನೋ ಸಕಾ೯ರ ಕೂಡ ಇದೇ ಸಮಯಕ್ಕೆ ಕಾಯುತ್ತಿರುವಂತೆಯೇ ಎಸ್ ಐ ಟಿ ಎಂಬ ತನಿಖಾ ಸಂಸ್ಥೆಗೆ ಧಮ೯ಸ್ಥಳದ ವಿವಾದವನ್ನು ಒಪ್ಪಿಸಿ ಹಗುರಾಯಿತು. ಎಸ್ ಐ ಟಿ ತನಿಖೆಗೊಪ್ಪಿಸಿದ ಸಕಾ೯ರದ ತೀಮಾ೯ನವನ್ನು ಈಗ ಖಂಡಿಸುತ್ತಿರುವವರು ಒಂದು ಅಂಶವನ್ನು ನೆನಪಿಟ್ಟುಕೊಳ್ಳಲೇಬೇಕು. ಈ ತನಿಖೆ ಖಂಡಿತಾ ಸೂಕ್ತವಾದದ್ದು, ಸಕಾ೯ರದ ತನಿಖೆಯಿಂದ ಯಾರು ತಪ್ಪಿತಸ್ಥರು, ಯಾರು ನಿರಪರಾಧಿಗಳು ಎಂಬುದು ಬಹಿರಂಗವಾಗುತ್ತದೆ. ಅಪರಾಧಿಗಳಿದ್ದರೆ ಅವರು ಬೆಳಕಿಗೆ ಬರುತ್ತಾರೆ. ಧಮ೯ಸ್ಥಳ ವ್ಯಾಪ್ತಿಯಲ್ಲಿ ಅತ್ಯಾಚಾರ, ಕೊಲೆಗಳು ನಡೆದಿದ್ದರೆ ಅಂಥ ದೇಹಗಳ ಅಸ್ಥಿ ಪಂಜರ ಮಣ್ಣಿನಿಂದ ಹೊರಬಂದು ಭವಿಷ್ಯದಲ್ಲಿ ಸತ್ಯ ಹೇಳಲು ಕಾರಣವಾಗುತ್ತದೆ. ತನಿಖೆ ಆಗದೇ ಹೋಗಿದ್ದರೆ ಏನಾಗುತ್ತಿತ್ತು? ಧಮ೯ಸ್ಥಳದ ಮೇಲಿನ ಆರೋಪಗಳು ಹೀಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚುತ್ತಲೇ ಹೋಗುತ್ತಿದ್ದವು. ಅಪಪ್ರಚಾರ ಮತ್ತಷ್ಟು ಕಾವು ಪಡೆದು ನಿಜಸತ್ಯದ ಮೇಲೆ ಸುಳ್ಳಿನ ತಾಂಡವ ಸ್ವರೂಪ ಪಡೆಯುತ್ತಿತ್ತು. ಸಕಾ೯ರ ವು ಧಮ೯ಸ್ಥಳ ಕ್ಷೇತ್ರದ ಪಕ್ಷಪಾತಿ ಎಂಬ ಟೀಕೆಗಳು ಸದಾ ಇರುತ್ತಿದ್ದವು. ಧಮ೯ಸ್ಥಳದಲ್ಲಿನ ಸತ್ಯವನ್ನು ಹೂಳಲಾಗಿದೆ. ಆರೋಪಿಗಳನ್ನು ಸಂರಕ್ಷಿಸಲಾಗಿದೆ ಎಂಬ ಆರೋಪಗಳು ಭವಿಷ್ಯದಲ್ಲಿಯೂ ಕೇಳಿಬರುತ್ತಿದ್ದವು. ಈಗ, ಎಸ್ ಐ ಟಿ ತನಿಖೆ ನಡೆಯುತ್ತಿದೆ. ಸತ್ಯ ಏನೆಂದು ತನಿಖಾಧಿಕಾರಿಗಳು ಬಹಿರಂಗಗೊಳಿಸಲಿದ್ದಾರೆ.
ಸಾವ೯ಜನಿಕವಾಗಿಯೇ ಅನಾಮಿಕ ಹೇಳಿದ 17 ಸ್ಥಳಗಳಲ್ಲಿ ಗುಂಡಿ ತೋಡಲಾಗಿದೆ. ಪುರುಷನ ಅಸ್ಥಿಪಂಜರವೊಂದು ಮಣ್ಣಿನಡಿ ದೊರಕಿದ್ದು ಬಿಟ್ಟರೆ ಬೇರೆ ಯಾವುದೇ ಪ್ರಬಲ ಸಾಕ್ಷ್ಯ ದೊರಕಿಲ್ಲ. ಎಸ್ ಐ ಟಿ ರಚನೆಯಾಗಿ 15 ದಿನಗಳಾಗಿದ್ದು, ಯಾರೇ ದೂರುದಾರರಿದ್ದರೂ ನಿಭ೯ಯವಾಗಿ ಕಚೇರಿಗೆ ಬಂದು ದೂರು ಸಲ್ಲಿಸಿ, ನಾವು ಪಾರದಶ೯ಕವಾಗಿ ತನಿಖೆ ಕೈಗೊಳ್ಳುತ್ತೇವೆ ಎಂಬ ತನಿಖಾ ಸಂಸ್ಥೆಯ ಕೋರಿಕೆಗೆ 3 ಮಂದಿ ಬಿಟ್ಟರೆ ಬೇರೆ ಯಾವುದೇ ದೂರುದಾರರು ಈವರೆಗೂ ಮುಂದೆ ಬರಲಿಲ್ಲ. ಹಾಗಿದ್ದಲ್ಲಿ, ಧಮ೯ಸ್ಥಳ ವ್ಯಾಪ್ತಿಯಲ್ಲಿ ಹತ್ತಲ್ಲ. ನೂರಾರು ಶವಗಳನ್ನು ಹೂತಿದ್ದೇನೆ ಎಂಬ ಅನಾಮಿಕನ ಹೇಳಿಕೆ ಸತ್ಯವೇ? ಸಾಮಾಜಿಕ ಜಾಲತಾಣಗಳಲ್ಲಿ ಈವರೆಗೂ ಪುಂಖಾನುಪುಂಖವಾಗಿ ಪ್ರಚಾರ ಮಾಡಿದ್ದು ಏನಾಯಿತು? ಯಾವ ಆಧಾರದಲ್ಲಿ ಇಂಥ ವದಂತಿಗಳನ್ನು ಧಮ೯ಕ್ಷೇತ್ರದ ವಿರುದ್ದ ಹಬ್ಬಿಸಲಾಯಿತು? ಯಾಕಾಗಿ ಶ್ರೀಕ್ಷೇತ್ರವನ್ನೇ ಟಾಗೇ೯ಟ್ ಮಾಡಲಾಯಿತು? ಏನೇ ಇರಲಿ, ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಯಾರಿಗೇ ಶಿಕ್ಷೆಯಾಗಬೇಕಾಗಿದ್ದರೂ ಅಂತಿಮವಾಗಿ ನ್ಯಾಯಾಲಯ ಕೇಳುವುದು ಈ ಅಪರಾಧಕ್ಕೆ ನಿನ್ನಲ್ಲಿ ಸಾಕ್ಷಿ ಏನಿದೆ ? ಹಾಗಿದ್ದರೆ, ಯಾವುದೇ ಸಾಕ್ಷಿಗಳೇ ಇಲ್ಲದೇ, ಹೆಣಗಳನ್ನು ಹೂತಿದ್ದೇ ತಿಳಿಯದೇ ಸುಖಾಸುಮ್ಮನೆ ಶ್ರೀಕ್ಷೇತ್ರವನ್ನು ಟೀಕಾಸ್ತ್ರಗಳಿಗೆ ಗುರಿ ಮಾಡಲಾಯಿತೇ? ಈ ರೀತಿ ಸವ೯ ಧಮೀ೯ಯರ ಕ್ಷೇತ್ರವೊಂದನ್ನು, ಗುರಿ ಮಾಡುತ್ತಿರುವುದಾದರೂ ಯಾಕಾಗಿ? ತಮ್ಮ ಪಾಡಿಗೆ ತಾವು ಧಾಮಿ೯ಕ ವಿಚಾರಗಳಲ್ಲಿ, ವೈದ್ಯಕೀಯ, ಇಂಜಿನಿಯರಿಂಗ್, ಕಾನೂನು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾ, ಮಧ್ಯ ವ್ಯಸನಿಗಳ ಚಟ ಬಿಡಿಸಿ ಮಹಿಳೆಯರ ಕಣ್ಣೀರೊರೆಸುವ ಕೈಂಕಯ೯ವನ್ನು ನಿಷ್ಟೆಯಿಂದ ಮಾಡುತ್ತಾ ಬಂದಿದ್ದ, ಅಂತೆಯೇ ವಿವಿಧ ಯೋಜನೆಗಳ ಮೂಲಕ ಆಥಿ೯ಕವಾಗಿ ಮಹಿಳೆಯರನ್ನು ಸ್ವಾಭಿಮಾನಿ, ಸ್ವಾವಲಂಭಿಗಳನ್ನಾಗಿ ಮಾಡಿದ ಶ್ರೀಕ್ಷೇತ್ರದ ಧಮಾ೯ಧಿಕಾರಿಗಳ ಈ ಸಾಮಾಜಿಕ ಕಾಯ೯ಗಳೇ ಕೆಲವರ ನೆಮ್ಮದಿ ಕೆಡಿಸಿತ್ತಾ? ಇಂಥ ವದಂತಿ, ಟೀಕೆಗಳಿಂದ ಶ್ರೀಕ್ಷೇತ್ರಕ್ಕೆ ಉಂಟಾಗುವ ಹಾನಿಯಿಂದ ಯಾರಿಗೆ ಲಾಭ? ಧಮ೯, ಸತ್ಯ, ನಿಷ್ಟೆ, ಸಾಮಾಜಿಕ ಪರಿವತ೯ನೆ ಇತ್ಯಾಧಿ ಸೇವೆ ಮಾಡುವುದೇ ತಪ್ಪೇ? ಆಯಿತು, ಶ್ರೀಕ್ಷೇತ್ರದವರು ತಪ್ಪು ಮಾಡಿದ್ದಾರೆ. ಅವರ ಕುಟುಂಬಸ್ಥರು ಕೆಲವರಿಗೆ ಅನ್ಯಾಯ ಎಸಗಿದ್ದಾರೆ. ನ್ಯಾಯ ಕೇಳಬೇಕು ಅನ್ನಿಸಿದೆ ಎಂದು ಕೆಲವರಿಗೆ ಅನ್ನಿಸಿದೆ ಎಂದಿಟ್ಟುಕೊಳ್ಳೋಣ..
ಅಂಥವರು, ನ್ಯಾಯಾಂಗ ವ್ಯವಸ್ಥೆಗನುಗುಣವಾಗಿ ಸೂಕ್ತ ಸಾಕ್ಷ್ಯಗಳೊಂದಿಗೆ ಸಂಬಂಧಿತ ನ್ಯಾಯಾಲಯಗಳ ಕದ ತಟ್ಟಲು ಸವ೯ಸ್ವಾತಂತ್ರ್ಯರಿ ದ್ದಾರಲ್ಲ? ಅದನ್ನು ಬಿಟ್ಟು, ಯಾಕಾಗಿ ಇಂಥ ವದಂತಿ ಹಬ್ಬಿಸುವ ಕಾಯಾ೯ಚರಣೆ? ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಸಾಮಾಜಿಕ ಕಾಯ೯ಗಳನ್ನು ಮಾಡಿದಾಕ್ಷಣ ಯಾರೂ ತಪ್ಪನ್ನೇ ಎಸಗುವುದಿಲ್ಲ ಎಂದು ಭಾವಿಸುವುದು ಕೂಡ ತಪ್ಪೇ. ಅಂಥ ತಪ್ಪುಗಳ ಬಗ್ಗೆ ನಿಖರವಾದ ಮಾಹಿತಿ ಇಲ್ಲದೇ ಹೋದಲ್ಲಿ ಆತ, ಆಥವಾ ಸಂಸ್ಥೆ, ಕ್ಷೇತ್ರವನ್ನು ತಪ್ಪಿತಸ್ಥ, ಅಪರಾಧಿ ಎಂದು ಸುಖಾಸುಮ್ಮನೆ ಹೇಳುವುದು ಹೇಗೆ? ಎಷ್ಟು ಸರಿ? ಅಕಸ್ಮಾತ್ ಕ್ಷೇತ್ರ ವ್ಯಾಪ್ತಿಯಲ್ಲಿ ಹತ್ತಾರು, ನೂರಾರು ಅಸ್ಥಿಪಂಜರಗಳು ಸಿಕ್ಕಿದ್ದವು ಎಂದೇ ಇಟ್ಟುಕೊಳ್ಳೋಣ.. ಸಿಕ್ಕಿದ್ದರೂ ಅದು ಯಾರಿಗೆ ಸೇರಿದ್ದು, ಹೇಗೆ ಸತ್ತರು? ಯಾರಿಂದಾದಲೂ ಹತ್ಯೆಯಾಯಿತೇ? ಯಾರು ಹತ್ಯೆ ಮಾಡಿದ್ದು ಎಂಬುದರ ಬಗ್ಗೆ ಅಂತಿಮವಾಗಿ ತನಿಖಾಸಂಸ್ಥೆಗಳು ಸಾಕ್ಷ್ಯಾಧಾರಗಳನ್ನು ಆಧರಿಸಿಯೇ ನ್ಯಾಯಾಲಯದ ಮುಂದೆ ತನಿಖೆಯ ಅಂಶಗಳನ್ನು ಮುಂದಿಡಬೇಕಾಗುತ್ತದೆ. ಕೊನೆಗೇ ನ್ಯಾಯಾಲಯ ಈ ಕುರಿತಂತೆ ಅಂತಿಮ ತೀಪು೯ ನೀಡುತ್ತದೆಯೇ ವಿನಾ ಈ ದೇಶದಲ್ಲಿ ಸಾಮಾಜಿಕ ಜಾಲತಾಣಗಳು ತೀಪು೯ ನೀಡುವದಕ್ಕೆ ಅವಕಾಶವಿಲ್ಲ.
ಇನ್ನು ಅನಾಮಿಕ ದೂರುದಾರನ ವಿಚಾರ..
ಈತ ಬೆಳ್ತಂಗಡಿ ಪಂಚಾಯತ್ ನ ಮಾಜಿ ನೌಕರ. ಬುರುಡೆ ಹಿಡಿದುಕೊಂಡು ಬಂದವನ ಹಿಂದೆ ಬೇರೆಯವರ ಒತ್ತಡವೂ ಇತ್ತು ಎಂಬುದು ಅತ್ಯಂತ ಸ್ಪಷ್ಟ. ಈತ ಹೆಣ ಹೂಳಿದ್ದ ಎಂದಾದಲ್ಲಿ ತಾನೇ ಮಣ್ಮು ತೋಡಿದ್ದ ಜಾಗವನ್ನು ತಾನೇ ಗುರುತಿಸದಾದನೇ? ಸಂಶಯ ಹೆಚ್ಚಾಗುವುದೇ ಇಂಥಲ್ಲಿ. ಒಂದೆರಡು ಕಡೆ ಮರೆವಿನಿಂದ ಸ್ಥಳ ಗುರುತು ತಪ್ಪಿಹೋಗಬಹುದು. ಆದರೆ, 17 ಕ್ಕೆ 17 ಕಡೆಯೂ ಮಹಿಳೆಯ ಅಸ್ಥಿ ಪಂಜರ ದೊರಕಿಲ್ಲ ಎಂದಾದಲ್ಲಿ ಈ ಅನಾಮಿಕ ದೂರುದಾರನಿಗೆ ಏನನ್ನೋಣ? ಕನಾ೯ಟಕದಲ್ಲಿ ಎಸ್ ಐ ಟಿ ತನಿಖಾ ಸಂಸ್ಥೆಗೆ ಬಹಳ ದೊಡ್ಡ ಹೆಸರಿದೆ. ಪ್ರಣವ್ ಮೊಹಾಂತಿ ಇದರ ಮುಖ್ಯಸ್ಥರಾಗಿದ್ದಾರೆ. ಕೊಡಗಿನಲ್ಲಿ ಈ ಮೊದಲು ಪೊಲೀಸ್ ವರಿಷ್ಟಾಧಿಕಾರಿಯಾಗಿದ್ದ ಅನುಚೇತ್ ಅವರಂಥ ದಕ್ಷ ಅಧಿಕಾರಿಯೂ ಎಸ್ ಐ ಟಿ ತಂಡದಲ್ಲಿದ್ದಾರೆ. ಇಂಥ ಡೇರ್ ಡೆವಿಲ್ ಅಧಿಕಾರಿಗಳನ್ನೇ ಈ ಅನಾಮಿಕ ದೂರುದಾರ.. ಅಲ್ಲಲ್ಲಿ ಸುತ್ತಾಡಿಸುತ್ತಾ. ಇಲ್ಲಿ ಅಗೆಯಿರಿ. ಅಲ್ಲಿ ಗುಂಡಿ ತೆಗೆಯಿರಿ.. ಇಲ್ಲಿ ಹೂತಿದ್ದೆ. ಅಲ್ಲಿ ಹೋಗಿದ್ದೆ ಎಂದು ಮಕ್ಕಳಾಟದಂತೆ ಅಲೆದಾಡಿಸುತ್ತಿರುವುದನ್ನು ನೋಡಿದರೆ ಪೊಲೀಸ್ ಅಧಿಕಾರಿಗಳ ಬಗ್ಗೆಯೇ ಅಯ್ಯೋ ಪಾಪ ಎನಿಸುತ್ತದೆ.
ರಾಜಕಾರಣಿಗಳ ನಡೆ -
ಯಾವಾಗ ಧಮ೯ಸ್ಥಳದಲ್ಲಿ ಶವಗಳ ಕುರುಹು ದೊರಕಿಲ್ಲ ಎಂದು ಖಚಿತವಾಯಿತೋ ರಾಜ್ಯ ಬಿಜೆಪಿ ನಾಯಕರು ನಿದ್ದೆಯಿಂದ ಎದ್ದಂತೆ ಧಮ೯ಸ್ಥಳಕ್ಕೆ ತೆರಳಿ ಘಟನೆಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳತೊಡಗಿದರು. ದಿನನಿತ್ಯ ಒಬ್ಬರಲ್ಲ ಒಬ್ಬರು ನಾಯಕರು ಧಮ೯ಸ್ಥಳದ ಪರಕ್ಕಿಂತ ಸಕಾ೯ರದ ವಿರುದ್ದ ಟೀಕಾಪ್ರಹಾರ ಮಾಡತೊಡಗಿದರು. ಧಮ೯ಸ್ಥಳದ ಪರವಾಗಿ ತಾವಿದ್ದೇವೆ ಎಂದು ಬಿಜೆಪಿಗೆ ಹೇಳಲೇಬೇಕೆನ್ನಿಸಿದ್ದರೆ ಇಷ್ಟು ದಿವಸ ಕಾಯದೇ ಎಸ್ ಐಟಿ ತನಿಖೆ ಪ್ರಾರಂಭವಾದೊಡನೇ ಹಿಂದೂಗಳ ಧಾಮಿ೯ಕ ಕ್ಷೇತ್ರದ ಮೇಲೆ ಇಂಥ ತನಿಖೆ ಮಾಡಬೇಡಿ. ಇದನ್ನು ನಾವು ಖಂಡಿಸುತ್ತೇವೆ. ಎಸ್ ಐ ಟಿ ಬೇಡ ಎಂದು ಬಹಿರಂಗವಾಗಿ ಹೇಳಬೇಕಾಗಿತ್ತು. ಆದರೆ ಹಾಗೇ ಮಾಡದೇ ಎಲ್ಲಿಯಾದರೂ ಹೆಣಗಳ ಕುರುಹು ಸಿಕ್ಕೀತೇ ಎಂದು ಕಾದು ನೋಡಿ, ಕೊನೆಗೆ ಅಂತಿಮ ಘಟ್ಟದಲ್ಲಿ ಜೈಜೈ ಧಮ೯ಸ್ಥಳ ಎನ್ನುವ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಿಜೆಪಿ ಮುಂದಾಗಿರುವುದು ಸ್ಪಷ್ಟ. ಈ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಈಗ ಸತ್ಯ ಅಥ೯ವಾಗಿದೆ. ಆ ಸತ್ಯ ಏನೆಂದರೆ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲೇಬೇಕಾಗಿದ್ದರೆ ಅಲ್ಪಸಂಖ್ಯಾತರ ಮತಗಳು ಮಾತ್ರವಲ್ಲ ಹಿಂದೂಗಳ ಮತಗಳೂ ಹೆಚ್ಚಿನ ಪ್ರಮಾಣದಲ್ಲಿ ಕ್ರೊಡೀಕರಣವಾಗಲೇಬೇಕಾಗಿದೆ. ಹೀಗಾಗಬೇಕಾದಲ್ಲಿ ಕಾಂಗ್ರೆಸ್ ಕೂಡ ಹಿಂಧುತ್ವದ ಪರ ಸ್ವಲ್ಪ ಶಂಖ, ಜಾಗಟೆ ಹೊಡೆಯಲೇಬೇಕು. ಹಿಂಂದತ್ವ ಪರ ಕಾಂಗ್ರೆಸ್ ಕೂಡ ಇದೆ ಎಂದು ನಿರೂಪಿಸದೇ ಹೋದಲ್ಲಿ ಹಿಂದೂ ಮತಗಳು ಕಾಂಗ್ರೆಸ್ ಕೈಹಿಡಿಯಲಾರವು ಎಂಬುದನ್ನು ಡಿಕೆಶಿ ಚೆನ್ನಾಗಿ ತಿಳಿದಿದ್ದಾರೆ. ಹೀಗಾಗಿಯೇ ಹೈಕಮಾಂಡ್ ಒಪ್ಪದೇ ಇದ್ದರೂ ಡಿಕೆಶಿ, ಪ್ರಯಾಗ್ ರಾಜ್ ಗೆ ತೆರಳಿ ಪವಿತ್ರ ಸ್ನಾನ ಮಾಡುತ್ತಾರೆ. ಕೊಯಮತ್ತೂರಿಗೆ ತೆರಳಿ ಗೖಹ ಸಚಿವ ಅಮಿತ್ ಷಾ ಜತೆ ಈಶಾ ಫೌಂಡೇಶನ್ ನಲ್ಲಿ ಸದ್ಗುರು ಜತೆ ವೇದಿಕೆ ಹಂಚಿಕೊಳ್ಳುತ್ತಾರೆ. ಆಗಿಂದಾಗ್ಗೆ ದೇಶದ ವಿವಿಧ ದೇವಾಲಯಗಳಿಗೆ ತೆರಳಿ, ಆ ಸುದ್ದಿಯನ್ನು ಹೈಲೈಟ್ ಆಗುವಂತೆ ನೋಡಿಕೊಳ್ಳುತ್ತಿದ್ದಾರೆ. ಇವೆಲ್ಲದರ ಜತೆ ಈಗ, ನಾನೂ ಧಮ೯ಸ್ಥಳದ ಭಕ್ತ ಎಂದು ಹೇಳಿ, ಎಸ್ ಐ ಟಿ ತನಿಖೆಯ ಕ್ರಮಕ್ಕೆ ಪರೋಕ್ಷವಾಗಿ ಅಸಮಧಾನ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಎಸ್ ಐ ಟಿ ತನಿಖೆಗೆ ಆದೇಶಿಸಿದ್ದೇ ವಿನಾ ನನಗೆ ಇದೆಲ್ಲಾ ಗೊತ್ತಿಲ್ಲ ಎಂದು ಹೇಳುವಂತೆ, ಧಮ೯ಸ್ಥಳ ಭಕ್ತರ ಆಕ್ರೋಷ ಕಾಂಗ್ರೆಸ್ ಗೆ ತಾಗದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ಸಂಭವಿಸುತ್ತಿದ್ದರೂ ಧಮ೯ಸ್ಥಳದ ಧಮಾ೯ಧಿಕಾರಿ ಪದ್ಮಭೂಷಣ ಡಾ. ವೀರೇಂದ್ರ ಹೆಗಡೆ ಅವರು ಮೌನ ವಹಿಸಿದ್ದಾರೆ. ಬಹುಷ ಯಾರೇ ಆದರೂ ಇಂಥ ಪರಿಸ್ಥಿತಿಯಲ್ಲಿ ಇದೇ ನಡೆಯನ್ನೇ ಅನುಸರಿಸುತ್ತಿದ್ದರು. ಕ್ಷೇತ್ರದ ಮುಖ್ಯಸ್ಥ ಯಾವುದೇ ಹೇಳಿಕೆ ನೀಡಿದರೂ ಅದು ಮತ್ತೊಂದು ಸ್ವರೂಪ ತಳೆದು ಮತ್ತೆ ಬೇರೆ ಬೆಳವಣಿಗೆ ಸಂಭವಿಸುತ್ತಿತ್ತೋ ಏನೋ. ಕೆಲವೊಮ್ಮೆ ಇಂಥ ಮೌನವೂ ಕೆಲವೊಂದು ಘಟನೆಗಳ ಮುಂದುವರಿಕೆಗೆ ಕಾರಣವಾಗಹುದು ಎಂಬ ಸತ್ಯ ಕೆಲವಾರು ವಷ೯ಗಳ ಹಿಂದೆಯೇ ಕೆಲವು ಮುಖಂಡರಿಗೆ ಅಥ೯ವಾಗಿದ್ದರೆ ಅಗ್ನಿಪರೀಕ್ಷೆ ಎದುರಿಸುವ ಸಂದಭ೯ವೇ ಬರುತ್ತಿರಲ್ಲವೇನೋ!
ಕೊನೇ ಹನಿ .
ಬೆಟ್ಟದ ಪುರದಲ್ಲಿ ಸಂಭವಿಸಿದ ಹತ್ಯೆ ಪ್ರಕರಣ ನೆನಪಿಸಿಕೊಳ್ಳಿ. ಸುರೇಶ ಎಂಬಾತ ತನ್ನ ಪತ್ನಿಯ ಶೀಲಶಂಕಿಸಿ ಆಕೆಯನ್ನು ಹತ್ಯೆ ಮಾಡಿ ಹೂತಿಟ್ಟಿದ್ದ ಎಂಬ ದೂರು ದಾಖಲಾಗಿತ್ತು. . ಬೆಟ್ಟದಪುರ ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿರುವಾಗಲೇ ಹತ್ಯೆಗೀಡಾಗಿದ್ದಾಳೆ ಎಂದು ಹೇಳಲಾಗಿದ್ದ ಸುರೇಶನ ಪತ್ನಿ ಏಪ್ರಿಲ್ ನಲ್ಲಿ ಮಡಿಕೇರಿಯಲ್ಲಿ ಪ್ರತ್ಯಕ್ಷಳಾಗಿದ್ದಳು. ಮೈಸೂರು ನ್ಯಾಯಾಲಯ ಸುರೇಶನನ್ನು ಈ ಪ್ರಕರಣದಲ್ಲಿ ನಿರಪರಾಧಿ ಎಂದು ಬಿಡುಗಡೆ ಮಾಡಿತ್ತು. ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಯೋವ೯ರು ಸುಳ್ಳು ಸಾಕ್ಷ್ಯ ನೀಡಿದ್ದಾರೆ ಎಂದು ನ್ಯಾಯಾಲಯ ತೀಪು೯ ನೀಡಿ ಈ ಅಧಿಕಾರಿ ವಿರುದ್ದ ಕ್ರಮಕ್ಕೆ ಸೂಚಿಸಿತ್ತು. ವಿಪಯಾ೯ಸ ಎಂದರೆ ಬೆಟ್ಟದ ಪುರ ಪ್ರಕರಣದಲ್ಲಿ ಮಣ್ಣಿನಡಿ ಹೂಳಲ್ಪಟ್ಟಿದ್ದ ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲ. ಅಸ್ಥಿ ಪಂಜರ ಪತ್ತೆಯಾದರೂ ಆಕೆ ಯಾರು ಎಂಬುದನ್ನು ಪೊಲೀಸರು ಇಂದಿಗೂ ಪತ್ತೆ ಮಾಡಿಲ್ಲ. ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾಗಿದ್ದ ಪೊಲೀಸ್ ಅಧಿಕಾರಿ? ಈಗ ಎಸ್ ಐ ಟಿ ತಂಡದಲ್ಲಿದ್ದುಕೊಂಡು ಅನಾಮಿಕ ದೂರುದಾರ ಹೇಳಿದ ಕಡೆಗಳಲ್ಲಿ ಗುಂಡಿ ಅಗೆಯುತ್ತಿದ್ದಾರೆ.! ಬೆಟ್ಟದ ಪುರದಲ್ಲಿ ಸಿಕ್ಕಿರುವ ಅಸ್ಥಿಪಂಜರ ಯಾವ ಮಹಿಳೆಯದ್ದು ಎಂಬುದು.. ಸತ್ಯಾಂಶ ಬೆಳಕಿಗೆ ಬಂದು ನಾಲ್ಕು ತಿಂಗಳಾದರೂ ಪತ್ತೆಯಾಗಿಲ್ಲ. ಹೀಗಿದ್ದರೂ, ಅನಾಮಿಕವೋನ೯ ಧಮ೯ಸ್ಥಳದಲ್ಲಿ ನೂರಾರು ಹೆಣ ಹೂತಿದ್ದೇನೆ ಎಂದು ಹೇಳಿದಾಕ್ಷಣ.. ಎಸ್ ಐ ಟಿ ರಚಿಸಿ ಗುಂಡಿತೋಡುವ ಕಾಯ೯ಕ್ಕೆ ಸಕಾ೯ರ ಮುಂದಾಗುತ್ತದೆ. ! ಯಾಕೆ ಹೀಗೆ? ಯಾಕೆಂದರೆ .. ಅದು ಧಮ೯ಸ್ಥಳ.. ಧಮ೯ ಕ್ಷೇತ್ರ.. ಏಕ ಪತ್ನಿ ವೖತಸ್ಥ ಶ್ರೀರಾಮನ ಸತಿ ಸೀತಾಮಾತೆಯನ್ನೇ ಬಿಡದ ಅಗ್ನಿಪರೀಕ್ಷೆ.. ಆಧುನಿಕ ದಿನಗಳಲ್ಲಿ ಧಮ೯ಸ್ಥಾನವನ್ನೂ ಬಿಟ್ಟಿಲ್ಲ.. ಸತ್ಯ ಎಲ್ಲಿಯೇ ಇರಲಿ.. ಸತ್ಯಕ್ಕೆ ಜಯವಾಗಲಿ... ಯಾವ ಮಾಧ್ಯಮದ ರೂಪದಲ್ಲಾದರೂ ಬರಲಿ.. ಅಂಥ ಸುಳ್ಳು ವದಂತಿಗಳಿಗೆ ಸೋಲಾಗಲಿ.. ಜನರ ನಂಬಿಕೆಯ ಧಮ೯ ಗೆಲ್ಲಲಿ..