ಕೊಡಗು ಪತ್ರಕತ೯ರ ಸಂಘ, ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜನೆ:85 ಸಂಘಸಂಸ್ಥೆಗಳು ಭಾಗಿ: ಮಡಿಕೇರಿಯಲ್ಲಿ ಶನಿವಾರ ಕಾಗಿ೯ಲ್ ವಿಜಯ ದಿವಸ್ - ದೀಪನಮನ, ಗಾನ ನಮನ, ಪುಪ್ಪನಮನ ಕಾಯ೯ಕ್ರಮ

ಕೊಡಗು  ಪತ್ರಕತ೯ರ ಸಂಘ, ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜನೆ:85 ಸಂಘಸಂಸ್ಥೆಗಳು ಭಾಗಿ:  ಮಡಿಕೇರಿಯಲ್ಲಿ ಶನಿವಾರ  ಕಾಗಿ೯ಲ್ ವಿಜಯ ದಿವಸ್ - ದೀಪನಮನ, ಗಾನ ನಮನ, ಪುಪ್ಪನಮನ  ಕಾಯ೯ಕ್ರಮ

ಮಡಿಕೇರಿ: ಕೊಡಗು ಪತ್ರಕತ೯ರ ಸಂಘ (ರಿ) ಮತ್ತು ರೋಟರಿ ಮಿಸ್ಟಿ ಹಿಲ್ಸ್ ಸಂಯುಕ್ತಾಶ್ರಯದಲ್ಲಿ ಜುಲೈ 26 ರಂದು ಮಡಿಕೇರಿಯ ಗೌಡ ಸಮಾಜದಲ್ಲಿ ಕಾಗಿ೯ಲ್ ವಿಜಯ್ ದಿವಸ್ ಅಂಗವಾಗಿ ಹುತಾತ್ನ ಯೋಧರಿಗೆ ದೀಪ ನಮನ, ಪುಪ್ಪನಮನ ಮತ್ತು ಗಾನ ನಮನ ಎಂಬ ವಿನೂತನ ಕಾಯ೯ಕ್ರಮ ಆಯೋಜಿಸಲಾಗಿದ್ದು, ಜಿಲ್ಲೆಯಾದ್ಯಂತಲಿನ 85 ಸಂಘಸಂಸ್ಥೆಗಳು ಪಾಲ್ಗೊಳ್ಳಲಿವೆ ಎಂದು ಪತ್ರಕತ೯ರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ಹಾಗೂ ರೋಟರಿ ಮಿಸ್ಟಿ ಹಿಲ್ಸ್ ನ ಅಧ್ಯಕ್ಷ ರತ್ನಾಕರ್ ರೈ ಮಾಹಿತಿ ನೀಡಿದ್ದಾರೆ.

 ನಗರದ ಗೌಡ ಸಮಾಜದಲ್ಲಿ ಜುಲೈ 26 ರಂದು ಸಂಜೆ 5 ಗಂಟೆಯಿಂದ ರಾತ್ರಿ 8.30 ಗಂಟೆಯವರೆಗೆ ಆಯೋಜಿತ ಕಾಯ೯ಕ್ರಮದಲ್ಲಿ 26 ವಷ೯ಗಳ ಹಿಂದೆ ಕಾಗಿ೯ಲ್ ನಲ್ಲಿ ಪಾಕಿಸ್ತಾನದ ಸಂಚಿನ ವಿರುದ್ದ ವೀರಹೋರಾಟ ಕೈಗೊಂಡು ಭಾರತದ ಹಿಮಪವ೯ತಗಳನ್ನು ಮರಳಿ ತಾಯ್ನಾಡಿಗೆ ಮರಳಿ ತಂದುಕೊಟ್ಟ ಭಾರತೀಯ ಯೋಧರನ್ನು ಸ್ಮರಿಸಲಾಗುತ್ತದೆ. ಕಾಗಿ೯ಲ್ ನಲ್ಲಿ ಹುತಾತ್ಮರಾದ 527 ಸೈನಿಕರಿಗೆ ದೀಪನಮನ ಸಲ್ಲಿಸಲಾಗುತ್ತದೆ. ಭಾರತದ ಯೋಧರಿಗೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಗೌರವಾಪ೯ಣೆ ಕೂಡ ನಡೆಯಲಿದೆ. ಮೈಸೂರಿನ ಪಾವನ ಮ್ಯೂಸಿಕಲ್ ಇವೆಂಟ್ಸ್ ವತಿಯಿಂದ ದೇಶಭಕ್ತಿ ಗೀತೆ ಕಾಯ೯ಕ್ರಮ ಕೂಡ ಆಯೋಜಿಸಲಾಗಿದೆ ಎಂದು ಅನಿಲ್ ಮತ್ತು ರತ್ನಾಕರ್ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸಮಾಜಮುಖಿ ಕಾಯ೯ಕ್ರಮಗಳನ್ನು ಆಯೋಜಿಸುತ್ತಿರುವ ಕೊಡಗು ಪತ್ರಕತ೯ರ ಸಂಘ, ರೋಟರಿ ಮಿಸ್ಟಿ ಹಿಲ್ಸ್ ಕಾಗಿ೯ಲ್ ವಿಜಯ್ ದಿವಸ್ ಸಂದಭ೯ ದಾಖಲೆಯ ಸಂಖ್ಯೆಯಲ್ಲಿ ಸಂಘಸಂಸ್ಥೆಗಳಿಗೆ ಯೋಧನಮನ ಸಲ್ಲಿಸಲು ಅವಕಾಶ ನೀಡಲಾಗಿದೆ. ಜಿಲ್ಲೆಯ ವಿವಿಧೆಡೆಗಳ 85 ಸಂಘಸಂಸ್ಥೆಗಳು ರಾಜಕೀಯ, ಧಮ೯, ಜಾತಿಯ ಬೇಧವಿಲ್ಲದೇ ಈ ಕಾಯ೯ಕ್ರಮದಲ್ಲಿ ಒಟ್ಟಾಗಿ ಯೋಧರ ವೀರಶೌಯ೯ವನ್ನು ಸ್ಮರಿಸಲಿದ್ದಾರೆ ಎಂದೂ ಪ್ರಕಟಣೆ ತಿಳಿಸಿದೆ.

ಮಡಿಕೇರಿ ಗೌಡ ಸಮಾಜ, ಶಕ್ತಿ ಪ್ರತಿಷ್ಟಾನ, ಕೊಡಗು ಔಷಧಿ ವ್ಯಾಪಾರಿಗಳ ಸಂಘ, ಭಾರತೀಯ ಮೆಡಿಕಲ್ ಅಸೋಸಿಯೇಷನ್ ನ ಕೊಡಗು ಶಾಖೆ, , ಮಡಿಕೇರಿ ಇನ್ನರ್ ವೀಲ್, ಮಡಿಕೇರಿ ಟರಿ, ಕೊಡಗು ಸಹಕಾರಿ ಕೇಂದ್ರ ಬ್ಯಾಂಕು, ರೋಟರಿ ವುಡ್ಸ್ ಮಡಿಕೇರಿ, , ಮಡಿಕೇರಿಯ ಶಾಂತಿ ಸಾಗರ್ ರೆಸ್ಟೋರೆಂಟ್, ಸ್ವಾಗತ್ ಡೆಕೋರೇಟರ್ಸ್, ಕೇಶವಪ್ರಸಾದ್ ಮುಳಿಯ ಕಾಯ೯ಕ್ರಮಕ್ಕೆ ಸಹಯೋಗ ನೀಡಿದ್ದಾರೆ ಎಂದೂ ಪ್ರಕಟಣೆ ತಿಳಿಸಿದೆ.

 ಕಾಗಿ೯ಲ್ ವಿಜಯೋತ್ಸವ ಸಂದಭ೯ ಯೋಧರಿಗೆ ಗೌರವ ನಮನ ಸಲ್ಲಿಸಲಿರುವ ಸಂಘ ಸಂಸ್ಥೆಗಳು:

ಅಖಿಲ ಕನಾ೯ಟಕ ಮಾಜಿ ಸೈನಿಕರ ಸಂಘ ಕೊಡಗು, ಮಾಜಿ ಸೈನಿಕರ ಸಂಘ ಮಡಿಕೇರಿ, ನಗರಸಭೆ ಸದಸ್ಯರು, ಅಧಿಕಾರಿ, ಸಿಬ್ಬಂದಿಗಳು ಮಡಿಕೇರಿ, ವಕೀಲರ ಸಂಘ, ಮಡಿಕೇರಿ, ನಗರಾಭಿವೖದ್ದಿ ಪ್ರಾಧಿಕಾರ ಮಡಿಕೇರಿ, ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಮಡಿಕೇರಿ , ಗೌಡ ಸಮಾಜ, ಮಡಿಕೇರಿ , ಕೊಡವ ಸಮಾಜ, ಮಡಿಕೇರಿ,ಬ್ರಾಹ್ಮಣ ವಿದ್ಯಾಭಿವೖದ್ದಿ ನಿಧಿ ಕೊಡಗು ಮಡಿಕೇರಿ, ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮಸ್೯ ಕೊಡಗು ಜಿಲ್ಲೆ , ಹೋಟೇಲ್ , ರೆಸಾಟ್೯ ಅಸೋಸಿಯೇಷನ್ ಕೊಡಗು,ಹೋಂಸ್ಟೇ ಅಸೋಸಿಯೇಷನ್, ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಕೊಡಗು, ಭಾರತೀಯ ಜನತಾ ಪಾಟಿ೯, ಕೊಡಗು, ಜಾತ್ಯಾತೀತ ಜನತಾ ದಳ ಕೊಡಗು,ಎಸ್ ಡಿಪಿಐ ಕೊಡಗು,ಪೊಮ್ಮಕ್ಕಡ ಕೂಟ ಮಡಿಕೇರಿ,ಪೊಮ್ಮಕ್ಕಡ ಕೂಟ ವೀರಾಜಪೇಟೆ, ಲಯನ್ಸ್ ಕ್ಲಬ್ ಮಡಿಕೇರಿ,ರೋಟರಿ ಮಡಿಕೇರಿ ವುಡ್ಸ್ , ರೋಟರಿ ಮಡಿಕೇರಿ,ಇನ್ನರ್ ವೀಲ್ ಮಡಿಕೇರಿ,ರೆಡ್ ಕ್ರಾಸ್ ಕೊಡಗು ಘಟಕ , ಮಹದೇವಪೇಟೆ ಮಹಿಳಾ ಸಹಕಾರ ಸಂಘ ಮಡಿಕೇರಿ ಆರೋಹಣ ತಂಡ ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘ, ಕೊಡಗು,ಹಿಂದೂ ಮಲಯಾಳಿ ಸಮಾಜ ಕೊಡಗು ,,ಬಿಲ್ಲವ ಸಮಾಜ ಕೊಡಗು ,ಜಿಲ್ಲಾ ಬಂಟರ ಸಂಘ ಕೊಡಗು, ಜಿಲ್ಲಾ ಮೊಗೇರ ಸಮಾಜ ಕೊಡಗು,ಭಾರತೀಯ ಮೆಡಿಕಲ್ ಅಸೋಸಿಯೇಷನ್ ಕೊಡಗು ಶಾಖೆ,ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘ ಕೊಡಗು , ದಲಿತ ಸಂಘಷ೯ ಸಮಿತಿ. ಕೊಡಗು,ಬ್ಯಾರಿ ವೆಲ್ಪೇರ್ ಟ್ರಸ್ಟ್ ಮಡಿಕೇರಿ, ಕ್ರೈಸ್ತರ ಸೇವಾ ಸಂಘ ಕೊಡಗು ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಕೊಡಗು,ವೀರಶೈವ ಸಮಾಜ, ಮಡಿಕೇರಿ ಜಿಲ್ಲಾ ಜಮಾ ಅತ್ ಎ ಇಸ್ಲಾಂ ಹಿಂದ್ ಕೊಡಗು, ಗೌಡ ಮಹಿಳಾ ಒಕ್ಕೂಟ ಚೇರಂಬಾಣೆ. ಸಮಥ೯ ಕನ್ನಡಿಗರು ಸಂಸ್ಥೆ, ಕೊಡಗು ಕನ್ನಡ ಸಿರಿ ಸ್ನೇಹಬಳಗ ಕುಶಾಲನಗರ,ಸಂಸ್ಕೖಸಿ ಸಿರಿ ಬಳಗ ಟ್ರಸ್ಟ್, ಕೊಡಗು,ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ ( ನೀಮಾ) ,ಗೌಡ ಸಮಾಜಗಳ ಒಕ್ಕೂಟ ಕೊಡಗು, ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಮಹಿಳಾ ಸಂಘ ,ಫೋಟೋಗ್ರಾಫರ್ ಅಸೋಸಿಯೇಷನ್ ಕೊಡಗು,ಕೊಡಗು ವಿದ್ಯಾಲಯ – ಮಡಿಕೇರಿ,ವೀರ ಮಡಿವಾಳರ ಸಂಘ ಕೊಡಗು , ಜ್ಞಾನಗಂಗ ರೆಸಿಡೆನ್ಶಿಯಲ್ ಸ್ಕೂಲ್ ಅತ್ತೂರು. ಹಾರಂಗಿ, ಕೖಷಿ ಪತ್ತಿನ ಸಹಕಾರ ಸಂಘ ಮದೆ ,ಫೀಲ್ಡ್ ಮಾಷ೯ಲ್ ಕೆ.ಎಂ.ಕಾಯ೯ಪ್ಪ ಕಾಲೇಜು - ಮಡಿಕೇರಿ, ಜನರಲ್ ತಿಮ್ಮಯ್ಯ ಶಾಲೆ ಮಡಿಕೇರಿ, ಟ್ರಾವೆಲ್ ಅಸೋಸಿಯೇಷನ್ ಕೊಡಗು, ಪತ್ರಿಕಾಭವನ ಟ್ರಸ್ಟ್ ಕೊಡಗು, ಜಿಲ್ಲಾ ಮಹಿಳಾ ಬರಹಗಾರರ ಸಂಘ ಕೊಡಗು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕೊಡಗು ,ಲಾರಿ ಮಾಲೀಕರ ಮತ್ತು ಚಾಲಕರ ಸಂಘ ಮಡಿಕೇರಿ,ಆಟೋ ಮಾಲೀಕರ ಚಾಲಕರ ಸಂಘ ಮಡಿಕೇರಿ,ಕನ್ನಡ ಭವನ ಮತ್ತು ಚುಟುಕು ಸಾಹಿತ್ಯ ಸಂಘ, ಕೊಡಗು,ಕೊಡಗು ಜಾನಪದ ಪರಿಷತ್ ಕೊಡಗು, ಕನ್ನಡ ಜಾನಪದ ಪರಿಷತ್ ಕೊಡಗು ,ಜ್ಞಾನದೀಪ ದೈವಜ್ಞ ಬ್ರಾಹ್ಮಣ ಮಹಿಳಾ ಸಂಘ, ಮಡಿಕೇರಿ , ಜೀಪು ಮಾಲೀಕರ ಮತ್ತು ಚಾಲಕರ ಸಂಘ ಕೊಡಗು, ಕೊಡಗು ಪೊಲೀಸ್ , ಮಡಿಕೇರಿ , ದಸರಾ ದಶಮಂಟಪ ಸಮಿತಿ, ಮಡಿಕೇರಿ,ಸೇವಾ ಭಾರತಿ ಕೊಡಗು , ಶಕ್ತಿ ಪ್ರತಿಷ್ಟಾನ ಮಡಿಕೇರಿ, ಕನಾ೯ಟಕ ಅರೆಬಾಷೆ ಸಾಹಿತ್ಯ , ಸಂಸ್ಕೖತಿ ಅಕಾಡೆಮಿ ಕೊಡಗು, ಕನಾ೯ಟಕ ಕೊಡವ ಸಾಹಿತ್ಯ ಸಂಸ್ಕೖತಿ ಅಕಾಡೆಮಿ ಕೊಡಗು , ಸವೋ೯ದಯ ಸಮಿತಿ ಮಡಿಕೇರಿ , ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ 2 ನೇ ಮೊಣ್ಣಂಗೇರಿ , ಎಸ್ ಎನ್ ಡಿ ಪಿ. ಯೂನಿಯನ್ ಕೊಡಗು , ಸವಿತಾ ಸಮಾಜ ಕೊಡಗು, ಸಕಾ೯ರಿ ನೌಕರರ ಸಂಘ ಕೊಡಗು, ಶ್ರೀ ಕೋದಂಡ ರಾಮ ರಾಮೋತ್ಸವ ಸಮಿತಿ ಮಡಿಕೇರಿ, ಗೌಡ ಯುವವೇದಿಕೆ ಕೊಡಗು ,ಗೌಡ ಮಾಜಿ ಸೈನಿಕರ ಸಂಘ ಕೊಡಗು ಗೌಡ ನಿವೖತ್ತ ನೌಕರರ ಸಂಘ, ಕೊಡಗು, ಗೌಡ ವಿದ್ಯಾ ಸಂಘ, ಕೊಡಗು,ಗೌಡ ಮಹಿಳಾ ಒಕ್ಕೂಟ. ಕೊಡಗು, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಕೊಡಗು ಮಹಿಳಾ ಮತ್ತು ಮಕ್ಕಳ ಅಭಿವೖದ್ದಿ ಇಲಾಖೆ , ಕೊಡಗು ವಿಶ್ವಕಮ೯ ಸಮಾಜ, ಕೊಡಗು ಸ್ಕೌಟ್ ಮತ್ತು ಗೈಡ್ಸ್. ಮಡಿಕೇರಿ ತಾಲೂಕು ಭಾರತ್ ಸೇವಾ ದಳ ಕೊಡಗು,ಸ್ಕೌಟ್ ಮತ್ತು ಗೈಡ್ಸ್. ಮಡಿಕೇರಿ ತಾಲೂಕು, ಭಾರತ್ ಸೇವಾ ದಳ ಕೊಡಗು, ಕಲಾನಗರ ಸಾಂಸ್ಕೖತಿಕ ಕಲಾವೇದಿಕೆ. ಮಡಿಕೇರಿ, ಜನನಿ ಮಹಿಳಾ ಮಂಡಳಿ, ಮಡಿಕೇರಿ. ದೇಶ ಮೊದಲು . ಭಾರತೀಯ ಯೋಧರೆ,, ನಿಮ್ಮ ತ್ಯಾಗ, ಬಲಿದಾನವನ್ನು ನಾವೆಂದೂ ಮರೆಯೋದಿಲ್ಲ.. ಎಂಬ ಪರಿಕಲ್ಪನೆಯಲ್ಲಿ ಆಯೋಜಿತ ಈ ಕಾಯ೯ಕ್ರಮದಲ್ಲಿ ಪ್ರತೀ ಸಂಘಸಂಸ್ಥೆಗಳೂ ಸರದಿಯಲ್ಲಿ ಬಂದು ವೇದಿಕೆಯಲ್ಲಿ ಪುಪ್ಪಾಚ೯ನೆ ಮಾಡುವ ಮೂಲಕ ಸೈನಿಕರಿಗೆ ಗೌರವ ನಮನ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದೂ ಕೊಡಗು ಪತ್ರಕತ೯ರ ಸಂಘದ ಪ್ರಧಾನ ಕಾಯ೯ದಶಿ೯ ಸುರೇಶ್ ಬಿಳಿಗೇರಿ ಮತ್ತು ಮಿಸ್ಟಿ ಹಿಲ್ಸ್ ಕಾಯ೯ದಶಿ೯ ಬಿ.ಕೆ. ಕಾಯ೯ಪ್ಪ ಜಂಟಿ ಹೇಳಿಕೆಯಲ್ಲಿ ಮಾಹಿತಿ ನೀಡಿದ್ದಾರೆ.