ಶಾಸಕ ಎಎಸ್ ಪೊನ್ನಣ್ಣ ಅವರನ್ನು ಭೇಟಿ ಮಾಡಿದ ಪಾಡಿ ಶ್ರೀ ಇಗ್ಗುತಪ್ಪ ದೇವಸ್ಥಾನ ಸಮಿತಿ

ವಿರಾಜಪೇಟೆ:ಕುಂಜಿಲ ಕಕ್ಕಬೆಯ ಪ್ರಸಿದ್ಧ ಪಾಡಿ ಶ್ರೀ ಇಗ್ಗುತಪ್ಪ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಬಾಚಮಂಡ ಪೂವಣ್ಣ (ರಾಜ) ಮತ್ತು ನಿರ್ದೇಶಕರುಗಳು, ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರನ್ನು ವಿರಾಜಪೇಟೆಯ ಗೃಹ ಕಚೇರಿಯಲ್ಲಿ ಭೇಟಿ ಮಾಡಿ ಹೂಗುಚ್ಛ ನೀಡುವ ಮೂಲಕ ಧನ್ಯವಾದ ಅರ್ಪಿಸಿದರು.
ಇತಿಹಾಸ ಪ್ರಸಿದ್ಧ ಪಾಡಿ ಶ್ರೀ ಇಗ್ಗುತ್ತಪ್ಪ ದೇವಸ್ಥಾನದ ಆಡಳಿತ ಮಂಡಳಿಗೆ, ಶಾಸಕರು ಈ ಹಿಂದೆ ಇವರುಗಳ ಹೆಸರನ್ನು ಸೂಚಿಸಿದ್ದು, ರಾಜ್ಯ ಸರ್ಕಾರ ಅದನ್ನು ಅನುಮೋದಿಸಿ ಆದೇಶ ನೀಡಿತ್ತು.
ನೂತನ ಅಧ್ಯಕ್ಷರಾದ ಬಾಚಮಂಡ ಪೂವಣ್ಣ ರವರೊಂದಿಗೆ, ನಿರ್ದೇಶಕರುಗಳಾಗಿ ನೇಮಕಗೊಂಡಿರುವ ಪರದಂಡ ಟಿ. ಭೀಮಯ್ಯ (ವಿಟಲ), ಪರದಂಡ ಎಂ. ನರೇಂದ್ರ (ಲಾಲು), ಕೋಟೆರ ನೈಲ್ ಚಂಗಪ್ಪ, ಚೇನಂಡ ಡಿ. ಉಷಾ, ಕುಶ ಭಟ್, ಮಾದಂಡ ಜಗದೀಶ್ (ಜಗ್ಗ), ಪೊಂಚೇರಿ ಉಲ್ಲಾಸ್, ರಮೇಶ್ ಸಿಇಒ ರವಿಕುಮಾರ್, ಪಾರ್ಪತಿಕಾರ ಪರದಂಡ ಪ್ರಿನ್ಸ್ ತಮ್ಮಪ್ಪ ರವರೊಂದಿಗೆ, ಕೆಡಿಪಿ ಸದಸ್ಯರಾದ ಬಾಚಮಂಡ ಲವ ಚಿಣ್ಣಪ್ಪ ಹಾಗೂ ಕಕ್ಕಬೆ ಪಂಚಾಯತ್ ಸದಸ್ಯರಾದ ಸಂಪನ್ ಅಯ್ಯಪ್ಪ ಉಪಸ್ಥಿತರಿದ್ದರು.