ಪೊನ್ನಂಪೇಟೆ: ಜೀಪ್-ಆಟೋರಿಕ್ಷಾ ಅಪಘಾತ

ಪೊನ್ನಂಪೇಟೆ:ಅರಣ್ಯ ಇಲಾಖೆಯ ಮುಂಭಾಗ, ಪೊನ್ನಂಪೇಟೆ ಗೋಣಿಕೊಪ್ಪ ಮುಖ್ಯ ರಸ್ತೆಯಲ್ಲಿ ಮಹೇಂದ್ರ ತಾರ್ ಜೀಪ್ ಹಾಗೂ ಐರೀಸ್ ಪ್ಯಾಸೆಂಜರ್ ಆಟೋಕ್ಕೆ ಅಪಘಾತ ಸಂಭವಿಸಿದೆ. ಆಟೋ ಮಾಲೀಕ ಹಾಗೂ ಚಾಲಕ ಸಾದಿಕ್ ಎಂಬುವರು ಗೋಣಿಕೊಪ್ಪದಿಂದ ಪೊನ್ನಂಪೇಟೆ ಕಡೆಯಿಂದ ಆಗಮಿಸುತ್ತಿದ್ದ ಸಂದರ್ಭ ಸರ್ವೇ ಕಛೇರಿಯ ಮುಂಭಾಗ ನಿಲ್ಲಿಸಿದ್ದ ಎಂ. ಬಿ ತಿಮ್ಮಯ್ಯ ಎಂಬುವರಿಗೆ ಸೇರಿದ ಜೀಪ್ ಮುಖ್ಯ ರಸ್ತೆಗೆ ಬರುವ ಸಂದರ್ಭ ಘಟನೆ ನಡೆದಿದೆ. ಅಪಘಾತದಿಂದಾಗಿ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿರುವುದಿಲ್ಲ. ಪೊನ್ನಂಪೇಟೆ ಪೊಲೀಸ್ ಠಾಣೆಯ ಎ ಎಸ್ ಐ, ಬಿ. ಎಂ ಪ್ರಮೋದ್ ಅವರು ಸ್ಥಳಕ್ಕಾಗಮಿಸಿ, ಪರಿಶೀಲನೆ ನಡೆಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.
ವರದಿ: ಚಂಪಾ ಗಗನ ಪೊನ್ನಂಪೇಟೆ