ಡಿ.16 ರಂದು ವಿದ್ಯುತ್ ವ್ಯತ್ಯಯ

ಡಿ.16 ರಂದು ವಿದ್ಯುತ್ ವ್ಯತ್ಯಯ

ಮಡಿಕೇರಿ :-66/11 ಕೆ.ವಿ ಪೊನ್ನಂಪೇಟೆ ವಿದ್ಯುತ್ ವಿತರಣಾ ಉಪಕೇಂದ್ರದಿಂದ ಹೊರಹೊಮ್ಮುವ ಎಫ್4-ತಿತಿಮತಿ ಫೀಡರ್‍ನಲ್ಲಿ ಡಿಸೆಂಬರ್, 16 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ನಿರ್ವಹಣೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿರುವುದರಿಂದ ಈ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ಬಾಲಾಜಿ, ರುದ್ರಬೀಡು, ಮಾಯಮುಡಿ, ಬೆಮ್ಮತ್ತಿ, ಕೋಣನಕಟ್ಟೆ, ದೇವರಪುರ, ಅಂಬುಕೋಟೆ, ಕಲ್ಲಳ, ಭದ್ರಗೋಳ, ನೋಕ್ಯಾ, ತಿತಿಮತಿ, ಎಡ್ತೋರೆ, ರೇಷ್ಮೆಹಡ್ಲು, ಹೆಬ್ಬಾಲೆ, ಮರೂರು, ದೇವಮಚ್ಚಿ, ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.