ಆಗಸ್ಟ್ 05ರಂದು ಸೋಮವಾರಪೇಟೆ ತಾಲ್ಲೂಕಿನ ವಿವಿಧೆಡೆ ವಿದ್ಯುತ್ ವ್ಯತ್ಯಯ! ನಿಮ್ಮೂರಿನಲ್ಲಿ ಕರೆಂಟ್ ಇರುತ್ತಾ ನೋಡಿ

ಸೋಮವಾರಪೇಟೆ:66/11 ಕೆ.ವಿ ಶನಿವಾರಸಂತೆ ಹಾಗೂ 66/11 ಕೆವಿ ಮಲ್ಲಿಪಟ್ಟಣ ವಿದ್ಯುತ್ ವಿತರಣಾ ಉಪಕೇಂದ್ರದಿಂದ ಹೊರಹೊಮ್ಮುವ ಶಾಖಾ ವ್ಯಾಪ್ತಿಯ F3-ಶನಿವಾರಸಂತೆ ಟೌನ್ F1-ಹಂಡ್ಲಿ, F7-ಬೀಟಿಕಟ್ಟೆ, F4-ಆಲೂರು, F5-ಅಂಕನಹಳ್ಳಿಫೀಡರ್‌ಗಳಲ್ಲಿ ಆಗಸ್ಟ್ 05ರಂದು ಬೆಳಿಗ್ಗೆ 10.00 ರಿಂದ ಸಂಜೆ 5.00 ಗಂಟೆಯವರೆಗೆ ತ್ರೈಮಾಸಿಕ ನಿರ್ವಹಣೆಯನ್ನು ಕೈಗೆತ್ತಿಕೊಂಡಿರುವುದರಿಂದ ಸದರಿ ಫೀಡರ್‌ನಿಂದ ಹೊರಹೊಮ್ಮುವ ಶನಿವಾರಸಂತೆ ಪಟ್ಟಣ, ಮಾದರೆ, ಅಪ್ಪಶೆಟ್ಟಳ್ಳಿ, ಚಿಕ್ಕತೋರುರು, ದುಂಡಳ್ಳಿ, ಚೆಂಬೆಬೆಳ್ಳೂರು, ಬಿಳಹ, ಹಂಡ್ಲಿ, ಕಿತ್ತೂರು, ಸಂಪಿಗೆದಾಳು, ಮಾದ್ರದಳ್ಳಿ, ಮಣಗಲಿ, ಬೀಟಿಕಟ್ಟೆ, ಗೌಡಳ್ಳಿ, ಶುಂಠಿ, ಶಾಂತೇರಿ, ಬಸವನಕಟ್ಟೆ, ಮುಳ್ಳೂರು, ಗೋಪಾಲಪುರ, ಜಾಗೇನಹಳ್ಳಿ, ನಿಡ್ತ, ಅಂಕನಹಳ್ಳಿ, ಚೌಡನಹಳ್ಳಿ, ದೊಡ್ಡಳ್ಳಿ, ಹಾರಹೊಸೂರು, ಹಾಗೂ ಕೊಡ್ಲಿಪೇಟೆ ವ್ಯಾಪ್ತಿಯ ಬೆಸೂರು ಪಂಚಾಯಿತಿ, ನೀರುಗುಂದ, ನಿಲುವಾಗಿಲು, ದೊಡ್ಡಭಂಢಾರ, ಬ್ಯಾಡಗೊಟ್ಟ, ಕೊಡ್ಲಿಪೇಟೆ ಟೌನ್, ಅವರದಾಳು, ಬೆಂಬಳೂರು, ದೊಡ್ಡಕೊಡ್ಲಿ, ಕ್ಯಾತೆ, ದೊಡ್ಡಕುಂದ, ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ಮೇಲೆ ತಿಳಿಸಿರುವ ಸಮಯದಲ್ಲಿ ಹಾಗೂ ಸ್ಥಳದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆಕಾರ್ಯನಿರ್ವಾಹಕ ಇಂಜಿನಿಯರ್ (ವಿ) ಕಾರ್ಯ ಮತ್ತು ಪಾಲನೆ ವಿಭಾಗ, ಚಾವಿಸನಿನಿ,ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.