ಅಂತರಾಷ್ಟ್ರೀಯ ಮಟ್ಟದ ಆಹ್ವಾನಿತ ತಂಡಗಳ ನಡುವೆ ರಗ್ಬಿ ಪಂದ್ಯಾವಳಿ:ಕೊಡಗಿನ ಮಾದಂಡ ತಿಮ್ಮಯ್ಯ ಪ್ರತಿನಿಧಿಸಿದ ಗೋವಾ ತಂಡ ಚಾಂಪಿಯನ್

ಅಂತರಾಷ್ಟ್ರೀಯ ಮಟ್ಟದ ಆಹ್ವಾನಿತ ತಂಡಗಳ ನಡುವೆ ರಗ್ಬಿ ಪಂದ್ಯಾವಳಿ:ಕೊಡಗಿನ ಮಾದಂಡ ತಿಮ್ಮಯ್ಯ ಪ್ರತಿನಿಧಿಸಿದ ಗೋವಾ ತಂಡ ಚಾಂಪಿಯನ್

ಮಡಿಕೇರಿ: ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಆಹ್ವಾನಿತ ತಂಡಗಳ ನಡುವಿನ‌ "ಗೋವಾ ಸೆವೆನ್ಸ್" ರಗ್ಬಿ ಪಂದ್ಯಾವಳಿಯಲ್ಲಿ ಮಾಜಿ ಅಂತರರಾಷ್ಟ್ರೀಯ ರಗ್ಬಿ ಆಟಗಾರ ಕೊಡಗಿನ ಮಾದಂಡ ತಿಮ್ಮಯ್ಯ ಅವರು ಪ್ರತಿನಿಧಿಸಿದ ಗೋವಾ ತಂಡ ಚಾಂಪಿಯನ್ ಪ್ರಶಸ್ತಿ ಅಲಂಕರಿಸಿದೆ.

 ಫೈನಲ್ ಪಂದ್ಯದಲ್ಲಿ ಡೆಲ್ಲಿ ಹರಿಕೇನ್ ಕ್ಲಬ್ ತಂಡದ ವಿರುದ್ಧ ಗೋವಾ ತಂಡವು ಭರ್ಜರಿ ಗೆಲುವು ಸಾಧಿಸಿ ಪ್ರಶಸ್ತಿಗೆ ತಮ್ಮದಾಗಿಸಿಕೊಂಡರು. ಸೆಮಿಫೈನಲ್ ಪಂದ್ಯದಲ್ಲಿ ಹೈದರಾಬಾದ್ ಬ್ಲ್ಯಾಕ್ ಹಾಕ್ಸ್ ತಂಡವನ್ನು ಮಣಿಸಿ ಗೋವಾ ತಂಡವು ಫೈನಲ್ ಪ್ರವೇಶಿಸಿತು. ಲೀಗ್ ಹಂತ ಪಂದ್ಯದಲ್ಲಿ ಮಾದಂಡ ತಿಮ್ಮಯ್ಯ ‌ಪ್ರತಿನಿಧಿಸಿದ್ದ ಗೋವಾ ತಂಡಚು ಸಿಂಗಾಪುರ ಫ್ಲೈಯರ್ಸ್ ಹಾಗೂ ಕೇರಳ ವೋಲ್ಫ್ ಪ್ಯಾಕ್ಸ್ ತಂಡವನ್ನು ಮಣಿಸಿತು. ಗೋವಾ ತಂಡದಲ್ಲಿ ಆಸ್ಟ್ರೇಲಿಯಾ,ಅಮೇರಿಕಾ ತಂಡದ ಆಟಗಾರರು ಇದ್ದರು.