ಸೆ. 24 ರಂದು ಕಾಫಿ ದಸರಾ :ಕಾಫಿಯ ವೈವಿಧ್ಯಮಯ ಖಾದ್ಯಗಳ ಸ್ಪಧೆ೯

ಮಡಿಕೇರಿ ಸೆ. 16 - ಮಡಿಕೇರಿ ದಸರಾ ಸಾಂಸ್ಕೖತಿಕ ಸಮಿತಿ ವತಿಯಿಂದ ಸೆ 24 ರಂದು ಬುಧವಾರ ಆಯೋಜಿತ ಎರಡನೇ ವಷ೯ದ ಕಾಫಿ ದಸರಾ ಸಂದಭ೯ ಕಾಫಿಯಿಂದ ತಯಾರಿಸಲ್ಪಡುವ ವೈವಿಧ್ಯಮಯ ಖಾದ್ಯಗಳ ಸ್ಪಧೆ೯ ಆಯೋಜಿಸಲಾಗಿದೆ ಎಂದು ಸಾಂಸ್ಕೖತಿಕ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್ ಮತ್ತು ಕಾಫಿ ದಸರಾ ಸಮಿತಿ ಸಂಚಾಲಕ ಅನಿಲ್ ಹೆಚ್.ಟಿ. ತಿಳಿಸಿದ್ದಾರೆ.
ಕಾಫಿಯ ಮಹತ್ವ ತಿಳಿಸಲು ಮಾಹಿತಿಯುಕ್ತ ಸ್ಪಧೆ೯ಯನ್ನು ಸೆ.24 ರಂದು ಬುಧವಾರ ಬೆಳಗ್ಗೆ 10 ಗಂಟೆಯಿಂದ 12 ಗಂಟೆಯವರೆಗೆ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದೆ. ಕಾಫಿ ಫ್ಲೆವರ್ ಕೇಕ್ ವಿಭಾಗ , ಕಾಫಿ ಫ್ಲೆವರ್ ಕಪ್ ಕೇಕ್ ವಿಭಾಗ , ಕಾಫಿ ಫ್ಲೆವರ್ ಬ್ರೌನಿ ವಿಭಾಗ, ಕಾಫಿ ಫ್ಲೆವರ್ ಬಿಸ್ಕತ್ ವಿಭಾಗ, ಕಾಫಿ ಫ್ಲೆವರ್ ಪುಡ್ಡಿಂಗ್ ವಿಭಾಗ. ವಿಭಿನ್ನ ರುಚಿಯಿರುವ ಕಾಫಿ ಪಾನೀಯವಿಭಾಗ, ಮತ್ತು ಕಾಫಿ ಫ್ಲೇವರ್ ಚಾಕಲೇಟ್ ವಿಭಾಗ ಒಳಗೊಂಡಂತೆ 7 ವಿಭಾಗಗಳಲ್ಲಿ ಸ್ಪಧೆ೯ಗಳು ಆಯೋಜಿತವಾಗಿದೆ. ಸೆಪ್ಟೆಂಬರ್ 22 ರೊಳಗಾಗಿ ಸ್ಪಧಿ೯ಗಳು ತಮ್ಮ ಹೆಸರು ನೋಂದಾಯಿಸಲು ಸಂಪಕಿ೯ಸಬೇಕಾದ ಸಂಖ್ಯೆ - ಮೇಪಾಡಂಡ ಸವಿತಾ ಕೀರ್ತನ್ .9448309814