ಸಿದ್ದಾಪುರ: ಕಾಫಿ ಬೆಳೆಗಾರರಿಗೆ ಬೆಳೆಗಳ ಬಗ್ಗೆ ಅರಿವು ಕಾರ್ಯಕ್ರಮ

ಸಿದ್ದಾಪುರ: ಕಾಫಿ ಬೆಳೆಗಾರರಿಗೆ ಬೆಳೆಗಳ ಬಗ್ಗೆ ಅರಿವು ಕಾರ್ಯಕ್ರಮ

ಸಿದ್ದಾಪುರ: ಕುಶಾಲನಗರದ ಐ.ಟಿ.ಸಿ. ಕಾಫಿ ಡಿವಿಜನ್ ಟೀಮ್ ಸಸ್ಟೈನೇಬಿಲಿಟಿ ವತಿಯಿಂದ ಸಿದ್ದಾಪುರದ ಕೊಡವ ಕಲ್ಚರ್ ಅಸೋಸಿಯೇಷನ್ ಸಭಾಂಗಣದಲ್ಲಿ ಕಾಫಿ ಬೆಳೆಗಾರರಿಗೆ ಹಾಗೂ ರೈತರಿಗೆ ಬೆಳೆಗಳ ಸಂಬಂಧ ಮಾಹಿತಿ ಅರಿವು ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮವನ್ನು ನೆಲ್ಲಿಹುದಿಕೇರಿ ಗ್ರಾಮದ ಕಾಫಿ ಬೆಳೆಗಾರರಾದ ಬಿದ್ದಂಡ ಸರೋಜಿನಿ ಅಚ್ಚಪ್ಪ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಬೆಳಗಾರನ್ನು ಉದ್ದೇಶಿಸಿ ಮಾತನಾಡಿದ ಚೆಟ್ಟಳ್ಳಿಯ ಕಾಫಿ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿ . ಡಾ‌. ಎಸ್.ಎ. ನಡಾಫ್, ರೈತರು ತಮ್ಮ ತೋಟಗಳಲ್ಲಿ ತ್ಯಾಜ್ಯ ವಸ್ತುಗಳನ್ನು ಹಾಗೂ ಪ್ಲಾಸ್ಟಿಕ್ ಗಳನ್ನು ಬಳಸದಂತೆ ಕರೆ ನೀಡಿದರು. ಪ್ಲಾಸ್ಟಿಕ್ ವಸ್ತುಗಳನ್ನು ದೂರ ಮಾಡದಿದ್ದಲ್ಲಿ ಆರೋಗ್ಯದ ಮೇಲೆ ಕೂಡ ದುಷ್ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ರೈತರಿಗೆ ಮಣ್ಣು ಮುಖ್ಯವಾಗಿದ್ದು ಉತ್ತಮ ಪೋಷಕಾಂಶಗಳ ಮಣ್ಣು ಅಗತ್ಯವಿದೆ ಎಂದು ತಿಳಿಸಿದರು. ಮೇಲ್ಪದರ ಇರುವಂತ ಮಣ್ಣುಗಳನ್ನು ಕೃಷಿಗಳಿಗೆ ಬಳಸದಿದ್ದಲ್ಲಿ ಬೆಳೆಗಳು ನಾಶವಾಗುತ್ತದೆ ಎಂದು ಹೇಳಿದರು. ಕಾಫಿ ಸಂಶೋಧನಾ ಕೇಂದ್ರದಿಂದ 10,000ಕ್ಕೂ ಅಧಿಕ ಮಣ್ಣುಗಳನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕೊಡಗು ಜಿಲ್ಲೆಯಲ್ಲಿ ಸಾವಯವ ಮಣ್ಣು ಇರುವುದರಿಂದ ಅಷ್ಟೊಂದು ಸಮಸ್ಯೆಗಳು ಕಂಡು ಬರುತ್ತಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಗ್ರಾಮಗಳಲ್ಲಿ ಮಣ್ಣಿನ ಲ್ಲಿ ಸಮಸ್ಯೆಗಳು ಕಂಡು ಬರುತ್ತಿದೆ. ಯಾವುದೇ ರೈತರುಗಳು ತಮ್ಮ ಜಾಗದ ಮಣ್ಣುಗಳನ್ನು ಪರೀಕ್ಷೆ ನಡೆಸಿ ನಂತರ ಅದಕ್ಕೆ ತಕ್ಕಂತೆ ರಸ ಗೊಬ್ಬರಗಳನ್ನು ಬಳಸುವಂತೆ ಸಲಹೆ ನೀಡಿದರು.

 ಸುಣ್ಣಗಳನ್ನು ಬಳಸುವ ಸಂದರ್ಭದಲ್ಲಿ ಎಚ್ಚರವಹಿಸಿ ಬೇಕು ತಪ್ಪಿದ್ದಲ್ಲಿ ಇಳುವರಿಗಳು ಕೂಡ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು ಮಣ್ಣಿನಲ್ಲಿ ವಿವಿಧ ರೀತಿಯ ಮಣ್ಣುಗಳಿದ್ದು ಬೆಳೆಗಾರರು ಮಣ್ಣನ್ನು ಸಂರಕ್ಷಣೆ ಮಾಡಬೇಕೆಂದು ಸಲಹೆ ನೀಡಿದರು ಅವಜ್ಞಾನಿಕವಾಗಿ ರಸ ಗೊಬ್ಬರಗಳನ್ನು ಬಳಸದಂತೆ ತಿಳಿಸಿದ ನಡಾಫ್ ಅವರು ಅವಜ್ಞಾನಿಕವಾಗಿ ಗೊಬ್ಬರಗಳನ್ನು ಬಳಿಸಿದಲ್ಲಿ ಬೆಳೆಗಳಿಗೆ ರೋಗಗಳು ಹರಡುವ ಸಾಧ್ಯತೆ ಇದೆ ಎಂದರು.

 ಬೆಳೆಗಳಿಗೆ ಮೂರು ಅಂಶಗಳು ಅಗತ್ಯವಾಗಿದ್ದು. ಜೀವಂಶ,ತೇವಾಂಶ, ಇಂಗಲಗಳು ಅಗತ್ಯ ಇದೆ ಎಂದು ವಿವರಿಸಿದರು. ರೈತರು ತಮ್ಮ ಭೂಮಿಯಲ್ಲಿ ಹುಳಿ ಮಣ್ಣುಗಳನ್ನು ನಿರ್ಮೂಲನ ಮಾಡಬೇಕೆಂದು ಸಲಹೆ ನೀಡಿದರು. ಕಾಫಿ ತೋಟಗಳಲ್ಲಿ ಮೂರು ಬಾರಿ ಸಕಾಲಕ್ಕೆ ಗೊಬ್ಬರಗಳನ್ನು ನೀಡುವಂತಾಗಬೇಕೆಂದರು.

 ಚೆಟ್ಟಳ್ಳಿಯ ಕಾಫಿ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿ ‌ಡಾ‌. ಬಿ.ಎಂ.ಮುರುಳಿಧರ್,ಮಾತನಾಡಿ ರೈತರು ತಮ್ಮ ಜಮೀನುಗಳಲ್ಲಿ ಹಣ್ಣಿನ ಗಿಡಗಳನ್ನು ಬೆಳೆಸಬೇಕೆಂದು ತಿಳಿಸಿದರು. ಬಟರ್ ಫ್ರೂಟ್ ಹಣ್ಣಿನಿಂದ ಆರೋಗ್ಯಕ್ಕೆ ಉತ್ತಮ ಎಂದು ಅಭಿಪ್ರಾಯ ಇತ್ತೀಚಿನ ದಿನಗಳಲ್ಲಿ ಈ ಹಣ್ಣಿಗೆ ಹೆಚ್ಚಿನ ಬೇಡಿಕೆಗೆ ಬಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ವಿವಿಧ ರೀತಿಯ ಹಣ್ಣುಗಳನ್ನು ಬೆಳೆಸಿದ್ದಲ್ಲಿ ಅವುಗಳನ್ನು ಮಾರಾಟ ಮಾಡುವ ಸಂದರ್ಭದಲ್ಲಿ ಉತ್ತಮ ಬೆಲೆ ಸಿಗುತ್ತದೆ ಎಂದು ತಿಳಿಸಿದರು.

ಹಣ್ಣು ಗಿಡಗಳಿಂದ ಉತ್ತಮ ಲಾಭ ಲಭಿಸುತ್ತದೆ ಎಂದು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ವಿಜ್ಞಾನಿಗಳು ರೈತರ ವಿವಿಧ ಸಮಸ್ಯೆಗಳ ಪ್ರಶ್ನೆಗಳಿಗೆ ಉತ್ತರಿಸಿ. ಮಾಹಿತಿಗಳನ್ನು ಮತ್ತು ಸಲಹೆಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ ‌ ಸ್ಥಳೀಯ ಬೆಳೆಗಾರರಾದ ಚೇಂರಂಡ ಸುಭಾಷ್.ಮಂಡೇಪಂಡ ಕುಟ್ಟಣ್ಣ ಇನ್ನಿತರರು ಹಾಜರಿದ್ದರು.ಎಸ್. ಸಿದ್ದೇಗೌಡ ಸ್ವಾಗತಿಸಿ ವಂದಿಸಿದರು.