ಸೋಮವಾರಪೇಟೆ: ಆಗಸ್ಟ್ 27ರಂದು ಎರಡನೇ ವರ್ಷದ ಜಿಲ್ಲಾಮಟ್ಟದ ಕೆಸರುಗದ್ದೆ ವಾಲಿಬಾಲ್ ಪಂದ್ಯಾಟ

ಸೋಮವಾರಪೇಟೆ:ಆಲೇಕಟ್ಟೆ ಬಳಿಯ ಸೈನಿಕ ರಸ್ತೆ ಮತ್ತು ಕಾವೇರಿ ಬಡಾವಣೆಯ ಏಕದಂತ ಸೇವಾ ಸಮಿತಿ ಹಾಗೂ ಯುವಕ ಸಂಘದ ವತಿಯಿಂದ ಎರಡನೇ ವರ್ಷದ ಜಿಲ್ಲಾಮಟ್ಟದ ಕೆಸರುಗದ್ದೆ ವಾಲಿಬಾಲ್ ಪಂದ್ಯಾಟ ಹಾಗು ಹಗ್ಗ ಜಗ್ಗಾಟ ಸ್ಫರ್ಧೆ ಆ. 27 ರಂದು ಆಲೇಕಟ್ಟೆ ಗ್ರಾಮದಲ್ಲಿ ನಡೆಯಲಿದೆ. ಮೊದಲು ಹೆಸರು ನೋಂದಾಯಿಸಿಕೊಂಡ 25 ತಂಡಗಳಿಗೆ ಮಾತ್ರ ಅವಕಾಶ ಎಂದು ಯುವಕ ಸಂಘದ ಅಧ್ಯಕ್ಷ ರಮೇಶ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 7619150085 ಅಥವಾ 9476523787 ಸಂಖ್ಯೆಯನ್ನು ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.