ಸೋಮವಾರಪೇಟೆ: ನವರಾತ್ರಿ ಉತ್ಸವಕ್ಕೆ ಚಾಲನೆ

ಸೋಮವಾರಪೇಟೆ:-ಪಟ್ಟಣದಲ್ಲಿ ಇಂದು ನವರಾತ್ರಿ ಉತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು. ಪಟ್ಟಣದ ಸೋಮೇಶ್ವರ ಹಾಗೂ ಬಸವೇಶ್ವರ ದೇವಾಲಯಗಳಲ್ಲಿ ದೇವಿ ಮೂರ್ತಿಯ ಪ್ರತಿಷ್ಠಾಪನೆಯೊಂದಿಗೆ ಧಾರ್ಮಿಕ ವಿಧಿವಿಧಾನಗಳು ಆರಂಭಗೊಂಡಿವೆ.
ಈ ಭಾರಿ ನವರಾತ್ರಿ ಉತ್ಸವ ಹನ್ನೊಂದು ದಿನ ನಡೆಯಲಿರುವುದು ವಿಶೇಷ. ಇಲ್ಲಿನ ಸೋಮೇಶ್ವರ ದೇವಾಲಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಆನೆಕೆರೆಯಲ್ಲಿ ಗಂಗಾಪೂಜೆ ನೆರವೇರಿಸಿ,ಮಂಗಳ ವಾಧ್ಯಘೋಷಗಳೊಂದಿಗೆ ಮೆರವಣಿಗೆಯ ಮೂಲಕ ದೇವಾಲಯಕ್ಕೆ ತಂದು ಅರ್ಚಕ ಚಿತ್ರಕುಮಾರ ಭಟ್ ಪುರೋಹಿತ್ವದಲ್ಲಿ ಪ್ರತಿಷ್ಠಾಪನೆಯ ವಿಧಿವಿಧಾನಗಳ ನಂತರ ಮಹಾಮಂಗಳಾರತಿ,ಪ್ರಸಾದ ವಿನಿಯೋಗ ನೆರವೇರಿತು. ಬಸವೇಶ್ವ ದೇವಾಲಯದ ಪ್ರತಿಷ್ಠಾಪನೆಯ ಲೋಹದ ದೇವಿ ಮೂರ್ತಿಯನ್ನು ಆನೆಕೆರೆಯಲ್ಲಿ ಗಂಗೆ ಪೂಜೆಯೊಂದಿಗೆ ದೇವಾಲಯಕ್ಕೆ ತಂದು ಅರ್ಚಕ ಶೇಕಯ್ಯ ಪುರೋಹಿತ್ವದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಇಂದಿನಿಂದ ಅಕ್ಟೋಬರ್ 2ರ ವರೆಗೆ ಪ್ರತಿನಿತ್ಯ ದೇವಿಗೆ ವಿವಿಧ ಅಲಂಕಾರ,ಪೂಜೆ,ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.