ಸೋಮವಾರಪೇಟೆ: ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಂಧಿನಗರದಲ್ಲಿ ಬರೆ ಕುಸಿತ,ಶಾಸಕ ಡಾ.ಮಂತರ್ ಗೌಡ ಪರಿಶೀಲನೆ

ಸೋಮವಾರಪೇಟೆ: ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಂಧಿನಗರದಲ್ಲಿ  ಬರೆ ಕುಸಿತ,ಶಾಸಕ ಡಾ.ಮಂತರ್ ಗೌಡ ಪರಿಶೀಲನೆ

ಸೋಮವಾರಪೇಟೆ: ತಾಲ್ಲೂಕಿನ ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಂಧಿನಗರ 2 ನೇ ವಾರ್ಡ್ ನಲ್ಲಿ ಬರೆ ಕುಸಿತ ದಿಂದಾಗಿ ಸ್ಥಳೀಯ ನಿವಾಸಿಗಳಿಗೆ ಸಮಸ್ಯೆಯಾಗುತ್ತಿರುವುದು ಶಾಸಕರಾದ ಡಾ.ಮಂತರ್ ಗೌಡ ರವರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಮಂಗಳವಾರ ಅಧಿಕಾರಿಗಳೊಂದಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು ಹಾಗೂ ಸ್ಥಳೀಯ ನಿವಾಸಿಗಳಿಂದ ಮಾಹಿತಿ ಪಡೆದರು.

 ಸೂಕ್ತ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಬಿ ಬಿ ಸತೀಶ್, ಸೋಮವಾರಪೇಟೆ ಬ್ಲಾಕ್ ಕಾರ್ಮಿಕ ಘಟಕದ ಅಧ್ಯಕ್ಷರಾದ ಸೋಮೇಶ್, ಚೌಡ್ಲು ಗ್ರಾಮ ಪಂಚಾಯಿತಿ ಸದಸ್ಯರಾದ ಚೇತನ್, ಶ ಸುರೇಶ್ ಶೆಟ್ಟಿ, ಪ್ರವೀಣ, ಸೋಮವಾರಪೇಟೆ ಬ್ಲಾಕ್ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ರಫೀಕ್, ಸುಡಾ ಸಮಿತಿ ಸದಸ್ಯರಾದ ದರ್ಶನ್, ಕಾಂಗ್ರೆಸ್ ಮುಖಂಡರಾದ ಮಧು, ಗ್ರಾಮಸ್ಥರಾದ ಫ್ರಾನ್ಸಿಸ್ ಸಾಜು, ಅನಿಲ್, ಸತೀಶ್ ಹಾಗೂ ಇತರರು, ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.