ಕೃಷಿ ಸಂಶೋಧನಾ ಅರ್ಹತಾ ಪರೀಕ್ಷೆಯಲ್ಲಿ ದೇಶಕ್ಕೆ 34ನೇ ಸ್ಥಾನ ಪಡೆದ ಸೋಮವಾರಪೇಟೆಯ ಸೃಜನ್

ಸೋಮವಾರಪೇಟೆ:ಇಲ್ಲಿನ ಸೃಜನ್. ಬಿ.ಎಂ.ಇತೀಚೆಗೆ ನಡೆದ ಕೃಷಿ ಸಂಶೋದನಾ ಅರ್ಹತಾ ಪರೀಕ್ಷೆಯಲ್ಲಿ ದೇಶಕ್ಕೆ 34ನೆ ರ್ಯಾಂಕ್ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಪೈಕಿ 18ನೆ ರ್ಯಾಂಕ್ ಪಡೆದು ಸಾದನೆ ತೋರಿದ್ದಾರೆ. ಪಟ್ಟಣದ ಬಸ್ಸ್ ಚಾಲಕ ಮೋನಪ್ಪ ಹಾಗೂ ಶ್ರೇಯಾ ಬಟ್ಟೆ ಅಂಗಡಿ ಮಾಲಕಿ(ಸೋಮವಾರಪೇಟೆ ಮಂಡಲ ಬಿಜೆಪಿ ಕಾರ್ಯದರ್ಶಿ)ಇಂದಿರಾ ದಂಪತಿಗಳ ಪುತ್ರ ಶ್ರೇಯಸ್,ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯಕ್ಕೆ ಒಳಪಡುವ ಮೈಸೂರು ತೋಟಗಾರಿಕಾ ಕಾಲೇಜಿನಲ್ಲಿ ಬಿ.ಎಸ್.ಸಿ (ಹಾನರ್ಸ)ವ್ಯಾಸಾಂಗ ಮಾಡಿದ್ದು ಕಳೆದ ಜುಲೈ ತಿಂಗಳಿನಲ್ಲಿ ನಡೆದ ಕೃಷಿ ಸಂಶೋದನಾ ಸ್ನಾತಕೋತ್ತರ ಅರ್ಹತಾ ಪರೀಕ್ಷೆಯಲ್ಲಿ ದೇಶದ ಒಟ್ಟು 42 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ ಸೃಜನ್ 34ನೆ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಲ್ಲಿ 18ನೆ ರ್ಯಾಂಕ್ ಪಡೆಯುವಮೂಲಕ ಅಪ್ರತಿಮ ಸಾಧನೆ ತೋರಿದ್ದಾರೆ. ಸೃಜನ್ ಸ್ಥಳೀಯ ಸಾಂದೀಪನಿ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದಾರೆ.