ಶಾಲಾ ಮಟ್ಟದಿಂದಲೇ ವಿದ್ಯಾರ್ಥಿಗಳು ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಂಡು ಉತ್ತಮ ಸಮಾಜ ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸಬೇಕು:ವಿರಾಜಪೇಟೆ ಗ್ರಾಮಾಂತರ ಠಾಣಾಧಿಕಾರಿ ಎನ್.ಜಿ. ಲತಾ

ವಿರಾಜಪೇಟೆ:ಶಾಲಾ ಮಟ್ಟದಿಂದಲೇ ವಿದ್ಯಾರ್ಥಿಗಳು ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಂಡು ಉತ್ತಮ ಸಮಾಜ ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸುವಂತೆ ವಿದ್ಯಾರ್ಥಿಗಳಿಗೆ ವಿರಾಜಪೇಟೆ ಗ್ರಾಮಾಂತರ ಠಾಣಾಧಿಕಾರಿ ಎನ್.ಜಿ. ಲತಾ ಕರೆ ನೀಡಿದರು. ವಿರಾಜಪೇಟೆಯ ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ 2025-26 ನೇ ಸಾಲಿನ ವಿದ್ಯಾರ್ಥಿ ಸಂಘದ ಪದಗ್ರಹಣ ಸಮಾರಂಭ ನಡೆಯಿತು. ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಭೋದಿಸಿ ಮಾತನಾಡಿದ ಎನ್.ಜಿ. ಲತಾ ಅವರು, ಶಾಲೆಗಳು ಉತ್ತಮ ಗುಣಮಟ್ಟದ, ಮತ್ತು ಮೌಲ್ಯಾಧಾರಿತ ಶಿಕ್ಷಣ ವಿದ್ಯಾರ್ಥಿಗಳಿಗೆ ನೀಡಿದರು ಕೂಡ, ವಿದ್ಯಾರ್ಥಿಗಳು ಆಯ್ಕೆ ಮಾಡುವ ವಿಷಗಳಲ್ಲಿ ಮಾತ್ರ ಆಸಕ್ತಿ ತೋರುತ್ತಾರೆ. ಹೊರ ಪ್ರಪಂಚದಲ್ಲಿ ನಡೆಯುವ ವಿಷಯಗಳನ್ನು ಅರಿಯಲು ಆಸಕ್ತಿ ಇರಬೇಕು. ಅತಿಯಾದ ಮೊಬೈಲ್ ಬಳಕೆಯಿಂದ ಜ್ಞಾನ ಸಂಪಾದನೆಯಾದರು ಕೂಡ ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ಕುಗ್ಗಿ ಹೋಗುತ್ತಿರುವುದು ಪ್ರಸ್ತುತ ದಿನಗಳಲ್ಲಿ ನಾವು ನೋಡುತ್ತಿದ್ದೇವೆ ಎಂದರು. ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ಆಳಿತಾಧಿಕಾರಿಗಳಾದ ಮಾದಂಡ ತಿಮ್ಮಯ್ಯ ಮಾತನಾಡಿ, ಬಾಲ್ಯದಿಂದಲೇ ನಾಯಕತ್ವದ ಪಾಠ ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆನ್ನುವ ಚಿಂತನೆಯಿಂದ ಶಾಲಾ ಆರಂಭದ ದಿನಗಳಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಇದರಿಂದ ಜವಬ್ದಾರಿಗಳ ಅನುಭವ ವಿದ್ಯಾರ್ಥಿಗಳಿಗೆ ಬರುವಂತಾಗುತ್ತದೆ. ವಿದ್ಯಾರ್ಥಿಗಳು ಪಠ್ಯ ಪುಸ್ತಕದ ವಿಷಯಗಳಿಗೆ ಸೀಮಿತವಾಗದೆ ಬಾಹ್ಯ ವಿಷಯಗಳ ಬಗ್ಗೆ ತಿಳಿದುಕೊಳ್ಳುವ ಅಸಕ್ತಿ ಹೊಂದಬೇಕೆಂದು ಹೇಳಿದರು. ವೇದಿಕೆಯಲ್ಲಿ ವಿದ್ಯಾರ್ಥಿ ಸಂಘಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಭೋದಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪ್ರೌಢಶಾಲಾ ವಿಭಾಗದ ನಾಯಕರಾಗಿ ಹತ್ತನೇ ತರಗತಿಯ ಶಿಶೀರ್ ಸುಗಂಧ್, ಮತ್ತು ಹರ್ಮೀನ್ ಫಾತಿಮಾ, ಸಹನಾಯಕರಾಗಿ ಯಶಸ್ಸ್ ಮತ್ತು ಆಯಿಷಾ ಅಯ್ಕೆಗೊಂಡರು. ಪ್ರಾಥಮಿಕ ವಿಭಾಗದ ನಾಯಕರಾಗಿ ಮೊಹಮ್ಮದ್ ಉಮ್ಮರ್, ಮತ್ತು ಫಾತಿಮಾ ಶಬ್ಲಾ, ಕ್ರೀಡಾ ನಾಯಕನಾಗಿ ಹರಿಕೃಷ್ಣ, ಸಹಕಾರ್ಯದರ್ಶಿಯಾಗಿ ಲಿಖಿತ ಮತ್ತು ಆರ್ಯ ಹಾಗೂ ಫರ್ಜಾನ್ ಆಯ್ಕೆಯಾದರು. ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ವ್ಯವಸ್ಥಾಪಕರಾದ ಸುಶ್ಮಾ ತಿಮ್ಮಯ್ಯ, ಪಾಂಶುಪಾಲರಾದ ಪ್ರತಿಮಾ ಉಪಸ್ಥಿತರಿದ್ದರು.