ಮದುವೆಯ ಆಮಿಷ: ಶಿಕ್ಷಕಿಗೆ ₹11.76 ಲಕ್ಷ ವಂಚನೆ

ಮದುವೆಯ ಆಮಿಷ: ಶಿಕ್ಷಕಿಗೆ ₹11.76 ಲಕ್ಷ ವಂಚನೆ

ಮೈಸೂರು: ಮದುವೆಯಾಗುವುದಾಗಿ ನಂಬಿಸಿ ಖಾಸಗಿ ಶಾಲೆಯ ಶಿಕ್ಷಕಿಯಿಂದ ₹11.76 ಲಕ್ಷ ವಂಚಿಸಿದ ಆರೋಪ ಸಂಬಂಧ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಜಯನಗರ ನಿವಾಸಿಯಾದ ಶಿಕ್ಷಕಿ ಹಣ ಕಳೆದುಕೊಂಡವರು.

ಮ್ಯಾಟ್ರಿಮೋನಿ ಮೂಲಕ ಪರಿಚಯವಾದ ಸಚಿನ್ ಎಂಬಾತ ತಾನು ವಿದೇಶದಲ್ಲಿದ್ದು ಮದುವೆಯಾಗುವುದಾಗಿ ಹೇಳಿ, ಭಾರತಕ್ಕೆ ಬರಲು ಟಿಕೆಟ್ ಪಡೆಯುವ ನೆಪದಲ್ಲಿ ಮೊದಲು ₹35 ಸಾವಿರ ಪಡೆದು, ನಂತರ ಹಂತ ಹಂತವಾಗಿ ಒಟ್ಟು ₹11.76 ಲಕ್ಷವನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ಬಳಿಕ ಹಣ ವಾಪಸ್ ನೀಡದೇ ವಂಚಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ.