ಶನಿವಾರ ಹಾಗೂ ಭಾನುವಾರ ಎಸ್.ಕೆ.ಎಫ್ ಸಿ ಮರಗೋಡು ಇವರ ವತಿಯಿಂದ ಮೊದಲ ವರ್ಷದ ಮೊಗೇರ ಫುಟ್ಬಾಲ್ ಪ್ರೀಮಿಯರ್ ಲೀಗ್

ಶನಿವಾರ ಹಾಗೂ  ಭಾನುವಾರ ಎಸ್.ಕೆ.ಎಫ್ ಸಿ ಮರಗೋಡು ಇವರ ವತಿಯಿಂದ ಮೊದಲ ವರ್ಷದ ಮೊಗೇರ ಫುಟ್ಬಾಲ್ ಪ್ರೀಮಿಯರ್ ಲೀಗ್

ಮಡಿಕೇರಿ; ಎಸ್ ಕೆ ಎಫ್ ಸಿ ಮರಗೋಡು ಇವರ ವತಿಯಿಂದ ಪ್ರಥಮ ಬಾರಿಗೆ ಮೊಗೇರ ಫುಟ್ಬಾಲ್ ಪ್ರೀಮಿಯರ್ ಲೀಗ್ ಪಂದ್ಯವು ನ.8, ಮತ್ತು ನ9,ಶನಿವಾರ ಹಾಗೂ ಭಾನುವಾರ ಮರಗೋಡುವಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ.

 ಮೊಗೇರ ಜನಾಂಗದ ಕ್ರೀಡಾಪಟುಗಳಿಗೆ ಮಾತ್ರ ಸೀಮಿತವಾಗಿದ್ದು ಒಟ್ಟು 7 ಮಾಲೀಕತ್ವದ 7 ತಂಡಗಳು ಪಾಲ್ಗೊಳ್ಳಲಿದೆ, ಮ್ಯಾಡ್ರಿಡ್ ಎಫ್ ಸಿ ಸುಂಟಿಕೊಪ್ಪ, ಸ್ಟಾರ್ ಬಾಯ್ಸ್ ಅಭ್ಯತ್ ಮಂಗಲ, ಎಂ ಎಫ್ ಸಿ ಅಮ್ಮತಿ, ಅಮೃತ ಮೊಗೇರ ಫ್ರೆಂಡ್ಸ್ ಸಿದ್ದಾಪುರ, ಸೋಕರ್ ಯುನೈಟೆಡ್ ಅಮ್ಮತಿ, ಭಗವತಿ ಹಾಲುಗುಂದ, ಎಸ್ ಕೆ ಎಫ್ ಸಿ ಮರಗೋಡು, ತಂಡಗಳ ನಡುವೆ ಪಂದ್ಯಗಳು ನಡೆಯಲಿವೆ. ಪಂದ್ಯ ಕೂಟದ ಚಾಂಪಿಯನ್ ತಂಡಕ್ಕೆ 44444 ನಗದು ಹಾಗೂ ಆಕರ್ಷಕ ಟ್ರೊಫಿ, ರನ್ನರ್ಸ್ ತಂಡಕ್ಕೆ 22222 ನಗದು ಹಾಗೂ ಆಕರ್ಷಕ ಟ್ರೊಫಿ ತೃತೀಯ ಹಾಗೂ ನಾಲ್ಕನೇ ಸ್ಥಾನ ಪಡೆದ ತಂಡಕ್ಕೆ ಆಕರ್ಷಕ ಟ್ರೊಫಿ ಹಾಗೆಯೇ ವೈಯಕ್ತಿಕ ,ಟ್ರೊಫಿಗಳು ಕೂಡ ಕ್ರೀಡಾಪಟುಗಳಿಗೆ ಸಿಗಲಿದೆ.

ಕ್ರೀಡಾ ಕೂಟದ ಕ್ರೀಡಾ ಕೂಟದ ಉದ್ಘಾಟನೆಯನ್ನು ಎಸ್ ಕೆ ಎಫ್ ಸಿ ಫುಟ್ಬಾಲ್ ಆಯೋಜಕರಾದ ಎಂ.ಎಸ್. ವಿಜಯ್ ಇವರ ಅಧ್ಯಕ್ಷೆತೆಯಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಎಸ್ ಪೊನ್ನಣ್ಣರವರು ಉದ್ಘಾಟನೆ ಮಾಡಲಿದ್ದಾರೆ, ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಡಾ: ಮಂತರ್ ಗೌಡ ಮಾನ್ಯ ಶಾಸಕರು, ಮಡಿಕೇರಿ ಕ್ಷೇತ್ರ, ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಅಧ್ಯಕ್ಷರಾದ ಜನಾರ್ಧನ್ ಮರಗೋಡು, ನಿಕಟ ಪೂರ್ವ ಸದಸ್ಯರು ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಪಿ. ಎಂ. ರವಿ, ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಕ್ರೀಡಾ ಅಧ್ಯಕ್ಷರಾದ ಎಂ ಜಿ. ಚಂದ್ರು, ಹಾಗೂ ಮೊಗೇರ ಸಮುದಾಯದ ಹಿರಿಯ ಹಾಗೂ ಗಣ್ಯ ವ್ಯೆಕ್ತಿಗಳು ಆಗಮಿಸಲಿದ್ದಾರೆ, ಕ್ರೀಡಾ ಕೂಟದ ಪ್ರಮುಖವಾಗಿ ಆಯೋಜಕರು ಹಾಗೂ ಮಡಿಕೇರಿಯ ಎಸ್ ಆರ್ ವಿ ಫುಟ್ಬಾಲ್ ಕ್ಲಬ್ ತಂಡದ ನಡುವೆ ಪ್ರದರ್ಶನ ಪಂದ್ಯ ನಡೆಯಲಿದ್ದು ವೀಕ್ಷಕ ವಿವರಣೆಯನ್ನು ಹೆಬ್ಬಟ್ಟಗೇರಿಯ ರಮೇಶ್ ಮಾಸ್ಟರ್ ಹಾಗೂ ಮಂಜು ಬಬ್ಳಿ ಅಮ್ಮತಿ ನೀಡಲಿದ್ದಾರೆ ಎಂದು ಆಯೋಜಕರಾಗಿರುವ ವಿಜಯ್. ಎಂ. ಎಸ್, ದೀಪಕ್, ಚಂಪಕ್, ಸಂಜಿತ್, ಚಂದ್ರ, ವಿಶ್ವನಾಥ್, ಅಜಯ್,ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಶೋಕ್ ಮಡಿಕೇರಿ