ವಿರಾಜಪೇಟೆ: ಚೆಕ್ ಬೌನ್ಸ್ ವ್ಯಕ್ತಿಗೆ ದಂಡ ,ಶಿಕ್ಷೆ ವಿಧಿಸಿದ ನ್ಯಾಯಾಲಯ
ವಿರಾಜಪೇಟೆ;ಮಗಳಿಗೆ ಅನಾರೋಗ್ಯ ಎಂದು ಚೆಕ್ ನೀಡಿ ಹಣ ಪಡೆದ ವ್ಯಕ್ತಿ ಹಣ ಹಿಂದಿರುಗಿಸಲು ವಿಳಂಬ ಮಾಡಿದ ಹಿನ್ನಲೆಯಲ್ಲಿ ನ್ಯಾಯಾಲಯ 06 ತಿಂಗಳ ಸಜೆಯೊಂದಿಗೆ ದಂಡ ವಿಧಿಸಿದ ಘಟನೆ ನಡೆದಿದೆ.
ವಿರಾಜಪೇಟೆ ತಾಲೂಕು ಸಿದ್ದಾಪುರ ಹೈಸ್ಕೂಲ್ ಪೈಸಾರಿ ನಿವಾಸಿ ದಿವಂಗತ ಪಿ.ಮಾದವ ಎಂಬುವವರ ಪುತ್ರ ಪಿ.ಎಂ.ಪ್ರಕಾಶ್ (51) ಚೆಕ್ ನೀಡಿ ನ್ಯಾಯಾಲಯ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಶಿಕ್ಷೆ ಗೆ ಗುರಿಯಾಗಿರುವ ವ್ಯಕ್ತಿ ಪ್ರಕಾಶ್ ಈ ಹಿಂದೆ ವಿರಾಜಪೇಟೆ ಕೆ.ಬೋಯಿಕೇರಿ ಗ್ರಾಮದ ನಿವಾಸಿ.
ಲೇಟ್ ಸೋಮಯ್ಯ ಅವರ ಪುತ್ರ ದೇವಯ್ಯ ಅಲಿಯಾಸ್ ಪ್ರಕಾಶ್ ಅವರೊಂದಿಗೆ ಸ್ನೇಹ ಬೆಳೆಸಿ ನಂತರದಲ್ಲಿ ಮಗಳ ಅನಾರೋಗ್ಯ ಕಾರಣ ಒಡ್ಡಿ ಚಿಕಿತ್ಸೆ ಗಾಗಿ 4.20 ಲಕ್ಷ ಹಣ ಡಿ.ಸಿ.ಸಿ. ಬ್ಯಾಂಕ್ ಖಾತೆ ಸಂಖ್ಯೆ121001481585 ಚೆಕ್ ನೀಡಿ ಹಣ ಪಡೆದಿದ್ದ.ತಾ. 07-02-2022 ರ ನಮೂದಿಸಿ ದೇವಯ್ಯ ಅವರಿಗೆ ನೀಡಿರುತ್ತಾರೆ.
ನೀಡಿರುವ ಹಣದ ಬಾಪ್ತು ಹಿಂದಿರುಗಿಸುವಂತೆ ದೇವಯ್ಯ ಅವರು ಹಲವು ಬಾರಿ ಮನವಿ ಮಾಡಿದ್ದಾರೆ. ಹಣ ಪಡೆದ ವ್ಯಕ್ತಿ ಪಡೆದ ಹಣ ಹಿಂದಿರುಗಿಸಲು ಮರೆತಿದ್ದಾರೆ.ಹಣ ನೀಡಿದ ವ್ಯಕ್ತಿ ತಾನು ನೀಡಿದ ಹಣ ಪಡೆಯಲು ಕೆನರಾ ಬ್ಯಾಂಕ್ ಖಾತೆಗೆ ಚೆಕ್ ಪಾವತಿ ಮಾಡಿದ್ದಾರೆ. ಖಾತೆಯಲ್ಲಿ ನಮೂದಾದ ಹಣ ಇಲ್ಲದಿರುವುದರಿಂದ ಚೆಕ್ ಅಮಾನ್ಯವಾಗಿದೆ.
ಸಂತ್ರಸ್ತ ನ್ಯಾಯಾಲಯ ಕ್ಕೆ ಮೊರೆಹೋಗಿದ್ದಾರೆ.ನ್ಯಾಯಾಲಯ ದಲ್ಲಿ ವಾದ ವಿವಾದ ನಡೆದು ತಾ. 06-12-2025 ರಂದು ಹಣ ಪಡೆದ ವ್ಯಕ್ತಿ ನಿಗದಿತ ಸಮಯದಲ್ಲಿ ಹಣ ನೀಡಲು ವಿಳಂಬವಾದ ಹಿನ್ನೆಲೆಯಲ್ಲಿ ನ್ಯಾಯಾಲಯವು ಹಣ ಸ್ವೀಕರಿಸಿದ ಪಿ.ಎಂ. ಪ್ರಕಾಶ್ ಅವರಿಗೆ ಮೂಲ ಹಣ 4 ಲಕ್ಷ 20 ಸಾವಿರ ಮತ್ತು ಹೆಚ್ಚುವರಿ 2 ಸಾವಿರ ಹಣ ಸೇರ್ಪಡಿಸಿ 4 ಲಕ್ಷ ದ 22 ಸಾವಿರ ಹಣ ಪಾವತಿ ಮಾಡುವಂತೆ ಹಾಗೂ 06 ತಿಂಗಳ ಜೈಲುವಾಸ ಅನುಭವಿಸುವಂತೆ ಜೆ.ಎಂ.ಎಫ್. ಸಿ. ಸಿವಿಲ್ ನ್ಯಾಯಾಲಯ ವಿರಾಜಪೇಟೆ ಗೌ. ನ್ಯಾ. ಪ್ರದೀಪ್ ಪೋತೆದಾರ್ ಅವರು ತೀರ್ಪು ನೀಡಿರುತ್ತಾರೆ. ಸಂತ್ರಸ್ತ ಎನ್.ಎಸ್. ದೇವಯ್ಯ ಪರ ಬಿ.ಆರ್ ಶೆಟ್ಟಿ ಅವರು ವಾದ ಮಂಡಿಸಿದ್ದಾರೆ.
ವರದಿ:ಕಿಶೋರ್ ಕುಮಾರ್ ಶೆಟ್ಟಿ
