ವಿರಾಜಪೇಟೆ:ಪೀಚೆ ಕತ್ತಿ ಸರಿ ಮಾಡಿಕೊಡುತ್ತೇನೆಂದು ಹಣ ಪಡೆದು ವಂಚನೆ!
ವಿರಾಜಪೇಟೆ: ಪೀಚೆ ಕತ್ತಿ ಸರಿ ಮಾಡಿಕೊಡುತ್ತೇನೆಂದು ಹೇಳಿ ಮತ್ತು ಹೊಸ ಪೀಚೆಕತ್ತಿಯನ್ನು ಮಾಡಿಕೊಡುತ್ತೇನೆದು ಮುಂಗಡ ಹಣ ಪಡೆದು ಕಳೆದ ಒಂದು ವರ್ಷದಿಂದ ಪೀಚೆ ಕತ್ತಿ ನೀಡದೆ ಗ್ರಾಹಕರಿಗೆ ವಂಚಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಪೊನ್ನಂಪೇಟೆ ಬಾಡಗರಕೇರಿ ನಿವಾಸಿ ಪೂಣಚ್ಚ ಎಂಬುವವರು ವಿರಾಜಪೇಟೆಯಲ್ಲಿರುವ ತಟ್ಟಂದ ಸುರೇಶ್ ಎಂಬುವವರಿಗೆ ದಿನಾಂಕ 4/10/2024 ರಲ್ಲಿ ಮಗನ ವಿವಾಹ ಸಂದರ್ಭ ಬೇಕಾಗಿರುವುದಕ್ಕಾಗಿ ಹೊಸ ಒಂದು ಕತ್ತಿ ಹಾಗೂ ಮನೆಯಲ್ಲಿದ್ದ ಮತ್ತೊಂದು ಕೊಂಡಿ ಕಳಚಿದ್ದ ಪೀಚೆಕತ್ತಿಯನ್ನು ಸರಿಪಡಿಸಿಕೊಡುವಂತೆ ಸುರೇಶ ಎಂಬಾತನಿಗೆ 32 ಸಾವಿರ ಮುಂಗಡ ಹಣವನ್ನು ನೀಡಿ ಮೂರು ತಿಂಗಳ ಸಮಯಾವಕಾಶ ಪಡೆದು ಬಂದಿರುತ್ತಾರೆ.
ಆದರೆ ಮಗನ ಮದುವೆ ಸಮೀಪಿಸಿದರೂ ಆತ ಪೀಚೆ ಕತ್ತಿಯನ್ನು ನೀಡಿರಲಿಲ್ಲ. ಹಲವು ಬಾರಿ ಆತನ ಬಳಿ ಕೇಳಿದರೂ ಆತನಿಂದ ಕತ್ತಿ ಸಿಗದೇ ಮುಂಗಡ ಹಣವೂ ಇಲ್ಲದೆ ಸರಿಪಡಿಸಲು ನೀಡಿದ ಹಳೆ ಕತ್ತಿಯೂ ಸಿಗದಿದ್ದಾಗ 17/1/25 ರಂದು ವಿರಾಜಪೇಟೆ ನಗರ ಠಾಣೆಯಲ್ಲಿ ಪೂಣಚ ಆತನ ವಿರುದ್ಧ ದೂರು ನೀಡಿದ್ದಾರೆ.
ಠಾಣೆಗೆ ಬಂದು ಮುಚ್ಚಳಿಕೆ ಬರೆದು ಕೊಟ್ಟ ತಟ್ಟಂಡ ಸುರೇಶ ಕಳೆದ ಜನವರಿ 24 ರ ಒಳಗಾಗಿ ಪೀಚೆ ಕತ್ತಿ ನೀಡುತ್ತೇನೆಂದು ಹೇಳಿದ್ದರು ಇಲ್ಲಿಯವರೆಗೆ ಪೀಚೆ ಕತ್ತಿ ಆತ ನೀಡದೆ ಸತಾಯಿಸುತ್ತಿರುವ ಬಗ್ಗೆ ಮತ್ತೆ ಪೂಕರು ನೀಡಿದರು.ಏನು ಪ್ರಯೋಜನವಾಗದೆ ಪೂಣಚ್ಚ ಈಗ ಅಸಹಾಯಕರಾಗಿದ್ದಾರೆ. ಅಲ್ಲದೆ ಈತನ ವಿರುದ್ಧ ಇಂತಹುದೇ ವಂಚನೆ ಪ್ರಕರಣವೂ ವಿರಾಜಪೇಟೆ ಪೊಲೀಸ್ ಠಾಣೆಯಲ್ಲಿ ಇದೆ.
