ವಿರಾಜಪೇಟೆ ಪುರಸಭೆಯಿಂದ ತುಳಸಿ ಮಾರಿಯಮ್ಮ ದೇವಸ್ಥಾನಕ್ಕೆ ಕುರ್ಚಿಗಳ ಕೊಡುಗೆ: ಕುರ್ಚಿ ಹಸ್ತಾಂತರಿಸಿದ ಶಾಸಕ‌ ಎ.ಎಸ್ ಪೊನ್ನಣ್ಣ

ವಿರಾಜಪೇಟೆ ಪುರಸಭೆಯಿಂದ ತುಳಸಿ ಮಾರಿಯಮ್ಮ ದೇವಸ್ಥಾನಕ್ಕೆ ಕುರ್ಚಿಗಳ ಕೊಡುಗೆ:  ಕುರ್ಚಿ ಹಸ್ತಾಂತರಿಸಿದ ಶಾಸಕ‌ ಎ.ಎಸ್ ಪೊನ್ನಣ್ಣ

ವಿರಾಜಪೇಟೆ: ಪುರಸಭಾ ವ್ಯಾಪ್ತಿಯ, ಸುಣ್ಣದ ಬೀದಿಯಲ್ಲಿರುವ ಪ್ರಸಿದ್ಧ ತುಳಸಿ ಮಾರಿಯಮ್ಮ ದೇವಸ್ಥಾನಕ್ಕೆ ಪುರಸಭೆ ವಿರಾಜಪೇಟೆ ವತಿಯಿಂದ ಕುರ್ಚಿಗಳನ್ನು ನೀಡಲಾಯಿತು. ದೇವಸ್ಥಾನ ಸಮಿತಿಯವರಿಗೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರುಕುರ್ಚಿಗಳನ್ನು ವಿತರಿಸುತ್ತಾ, ಭಕ್ತಾದಿಗಳಿಗೆ ಅನುಕೂಲ ಆಗಲಿ ಎಂದು ಪುರಸಭೆಯವರು ಮಾಡುತ್ತಿರುವ ಈ ಸತ್ಕಾರ್ಯ ಶ್ಲಾಘನೀಯ. ತಾಯಿ ತುಳಸಿ ಮಾರಿಯಮ್ಮ ಎಲ್ಲರಿಗೂ ಒಳಿತನ್ನು ಮಾಡಲಿ ಎಂದು ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ವಿರಾಜಪೇಟೆ ಬ್ಲಾಕ್ ಅಧ್ಯಕ್ಷರಾದ ಪಟ್ಟಡ ರಂಜಿ ಪೂಣಚ್ಚ, ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ಉಪಾಧ್ಯಕ್ಷೆ ಫಸಿಯಾ ತಬ್ಸುಂ, ಮುಖ್ಯ ಅಧಿಕಾರಿ ನಾಚಪ್ಪ, ಪುರಸಭೆ ಸದಸ್ಯರಾದ ರಾಜೇಶ್ ಪದ್ಮನಾಭ, ಹಮೀದ್, ಸಾಯಿ ಸಮಿತಿ ಅಧ್ಯಕ್ಷರಾದ ಜಲೀಲ್, ಪುರಸಭೆ ಅಧಿಕಾರಿಗಳು, ತುಳಸಿ ಮಾರಿಯಮ್ಮ ದೇವಸ್ಥಾನದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.