ವಿರಾಜಪೇಟೆ: ಬ್ಯೂಟಿ ಪಾರ್ಲರ್ ನಲ್ಲಿ ವೇಶ್ಯಾವಾಟಿಕೆ| ಇಬ್ಬರ ಬಂಧನ

ವೀರಾಜಪೇಟೆ: ಬ್ಯೂಟಿ ಪಾರ್ಲರ್ ಮತ್ತು ಸ್ಪಾನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದಡಿ ಕೇರಳ ಮೂಲದ ಇಬ್ಬರನ್ನು ವೀರಾಜಪೇಟೆ ಪೊಲೀಸರು ವಶಪಡಿಸಿಕೊಂಡಿದ್ದು, 6 ಮಹಿಳೆಯರನ್ನು ರಕ್ಷಿಸಿದ್ದಾರೆ.
ಮೂಲತಃ ಕೇರಳ ರಾಜ್ಯದ ಕಣ್ಣೂರಿನ ನಿವಾಸಿಗಳಾದ ಪ್ರದೀಪನ್ ಮತ್ತು ಶಿಜು ಎಂಬವರನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲಾಗಿದೆ. ಮೂಲದ ಮಹಿಳೆಯರನ್ನು ಪೊಲೀಸರು ರಕ್ಷಿಸಿದ್ದಾರೆ. ಸದ್ಯ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕ್ಕೆ ಉನ್ನತಾಧಿಕಾರಿಗಳ ಸಲಹೆಯನ್ನು ಪೊಲೀಸರು ಪಡೆದುಕೊಳ್ಳುತ್ತಿದ್ದಾರೆ.
ಪಟ್ಟಣದ ಗಾಂಧಿ ನಗರದ ಕಟ್ಟಡವೊಂದನ್ನು ಪ್ರದೀಪನ್ ಹಾಗೂ ಶಿಜು ಅವರುಗಳು ಬಾಡಿಗೆಗೆ ಪಡೆದು ಆರೆಂಜ್ ಬ್ಯೂಟಿ ಪಾರ್ಲರ್ ಆ್ಯಂಡ್ ಸ್ಪಾ ತೆರೆದು ಅಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಗುಮಾನಿ ಮೇಲೆ ಪರಿಶೀಲಿಸಿ ನಂತರ ದಿಢೀರ್ ದಾಳಿ ನಡೆಸಿದಾಗ ಅಕ್ರಮ ಬೆಳಕಿಗೆ ಬಂದಿದೆ. ದಾಳಿಯ ವೇಳೆ ಕೊಡಗು ಸೇರಿದಂತೆ ಮಂಗಳೂರು ಮತ್ತು ತಮಿಳುನಾಡು ಮೂಲದ ಮಹಿಳೆಯರನ್ನು ರಕ್ಷಿಸಿದ್ದಾರೆ.
ವರದಿ:ಕಿಶೋರ್ ಕುಮಾರ್ ಶೆಟ್ಟಿ