ವಿರಾಜಪೇಟೆ ತಾಲ್ಲೂಕು ಬಿಲ್ಲವ ಸೇವಾ ಸಂಘದಿಂದ ನಾರಾಯಣ ಗುರು ಜಯಂತಿ ಆಚರಣೆ

ವಿರಾಜಪೇಟೆ:ದೀನ-ದಲಿತ ಶೋಷಿತ ಜನಾಂಗದ ಉದ್ಧಾರಕ್ಕರಾಗಿದ್ದ ಬ್ರಹ್ಮಶ್ರೀ ನಾರಾಯಣ ಗುರು ಅವರ ಜಯಂತಿಯನ್ನು ಶ್ರದ್ದಾ ಭಕ್ತಿಯಿಂದ ಆಚರಿಸಲಾಯಿತು. ಬಿಲ್ಲವ ಸೇವಾ ಸಂಘ ವಿರಾಜಪೇಟೆ ತಾಲೂಕು ವತಿಯಿಂದ ಬಿಟ್ಟಂಗಾಲ. ಅಂಬಟ್ಟಿಯಲ್ಲಿರುವ ಶ್ರೀ ನಾರಾಯಣ ಗುರು ಮಂದಿರಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮ ನಡೆಯಿತು. ಮೊದಲಿಗೆ ನಾರಾಯಣ ಗುರು ಪುತ್ತಳಿಗೆ ಮಾಲಾರ್ಪಣೆ ಮಾಡಲಾಗಿ ನಂತರದಲ್ಲಿ ಆಗಮಿಸಿದ ಜನಾಂಗ ಬಾಂಧವರಿಂದ ಪುಷ್ಪ ನಮನಗಳನ್ನು ಸಲ್ಲಿಸಿ ಬಳಿಕ ಆರತಿ ಬೆಳಗಲಾಯಿತು.
ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ವಿಜೇತರಾದ ವನಜಾ, ಸಮಾಜವು ಸ್ವಾತಂತ್ರ ಪೂರ್ವದಲ್ಲಿ ಅಂತ್ಯಂತ ಹೀನಾಯ ಸ್ಥಿತಿಯಲ್ಲಿತ್ತು. ಯಾವುದೇ ದೇವಾತ ಕಾರ್ಯಗಳಿಗೆ ಹಾಗೂ ಇತರ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ನಿಷೇಧ ಹೇರಲಾಗಿತ್ತು. ಇತಂಹ ಸನ್ನಿವೇಶದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಅವರು ಶಿವಲಿಂಗವನ್ನು ಸ್ಥಾಪಿಸಿ ಜಾನಾಂಗದ ಬಾಂಧವರನ್ನು ಪೂಜೆಗೈಯಲು ಅನುಮತಿ ಮಾಡಿಕೊಟ್ಟರು ಅಲ್ಲದೆ ಸಮಾಜದಲ್ಲಿ ಒಂದೇ ಜಾತಿ ಒಂದೇ ಧರ್ಮ ಎಂದು ಸಾರಿದ ಮಹಾನ್ ಸಂತರಾದರು. ಜನಾಂಗ ಬಾಂಧವರು ಕಡಿಮೆ ಸಂಖ್ಯೆಯಲ್ಲಿದ್ದರು ಕೂಡ ಎಲ್ಲಾ ಕ್ಷೇತ್ರದಲ್ಲಿ ತನ್ನ ಛಾಪನ್ನು ಮೂಡಿಸಿದ್ದಾರೆ. ಬಾಂಧವರು ಸಂಘಟಿತರಾಗಿ ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸುವಂತಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುನ್ನತ್ತ ಅಂಕ ಗಳಿಸಿ ತೇರ್ಗಡೆಗೊಂಡ ಪವಿತ್ರ.ಎಸ್, ನವೀನ್ ಬಿ.ಎಸ್, ಮತ್ತು ಪಿ.ಯು.ಸಿ ವಿಭಾಗದಲ್ಲಿ ಕೃಷಿಕ ಬಿ.ಎನ್, ಪ್ರಜ್ಞಾ ಬಿ.ಡಿ, ದೀಪಿಕ, ನಿಹಾಲ್, ರಕ್ಷಾ, ತನ್ಮಯಿ, ಮೇಘಾನ, ಅಕ್ಷಯ್ ಎಸ್, ಹಾಗೂ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾದ ಸುದೇಶ್, ಶ್ರೀಮತಿ ವನಜ ಆಟೋ ಚಾಲಕಿಯಾಗಿ ಸೇವೆ ಮಾಡುತ್ತಿರುವ ಸುಜಾತ ನೆಲ್ಲಿಹುದಿಕೇರಿ, ಜಾಜಿ ಬಿ.ಬಿ ಅವರನ್ನು ಗೌರವಪೂರ್ವಕವಾಗಿ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮ ಉದ್ದೇಶಿಸಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾದ ಸುದೇಶ್ ಮತ್ತು ಗೌ. ಅತಿಥಿಗಳಾದ ಮುಕುಂದ ಅವರುಗಳು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ಬಿಲ್ಲವ ಸೇವಾ ಸಂಘದ ಅದ್ಯಕ್ಷರಾದ ಬಿ.ಎಂ. ಗಣೇಶ್ ಅವರು ಪ್ರಸ್ತುತ ಬಿಲ್ಲವ ಸೇವಾ ಸಂಘವು ಹಲವಾರು ಜನಪರ ಮತ್ತು ಜಾನಾಂಗದ ಅಭಿವೃದ್ದಿಗಾಗಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಜನಾಂಗದ ವ್ಯಕ್ತಿಗಳು ವಿದ್ಯಾರ್ಥಿಗಳ ವಿದ್ಯಾಬ್ಯಾಸಕ್ಕೆ ಆರ್ಥಿಕವಾಗಿ ಸಹಾಯಧನವನ್ನು ನೀಡುತ್ತಾ ಬಂದಿರುವುದು ಶ್ಲಾಘನೀಯ ಎಂದರು. ಸಂಘವು ಹೊಂದಿರುವ ಸ್ಥಳದಲ್ಲಿ ಸುಮಾರು ಎರಡು ಕೋಟಿ ವೆಚ್ಚದಲ್ಲಿ ಸುಸಜ್ಜಿತವಾದ ಸಮೂದಾಯ ಸಭಾಂಗಣದ ನಿರ್ಮಾಣ ಕಾರ್ಯಕ್ಕೆ ಜನಾಂಗ ಬಾಂಧವರು ಸಹಾಯ ಹಸ್ತ ನೀಡುವಂತೆ ಮನವಿ ಮಾಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ತಾಲೂಕು ಬಿಲ್ಲವ ಸಂಘದ ಉಪಧ್ಯಕ್ಷರಾದ ಪುರುಶೋತಮ್, ಗೌ.ಅದ್ಯಕ್ಷರಾದ ರಾಜಾ ಪೂಜಾರಿ, ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಮಾಜಿ ಅದ್ಯಕ್ಷರಾದ ಮುಕುಂದ, ನಾರಾಯಣ ಹಳ್ಳಿಗಟ್ಟು, ಸುನಂದ ನಾರಾಯಣ, ಸಹ ಕಾರ್ಯಧರ್ಶಿ ಲಕ್ಷ್ಮಣ್ ಮಣಿ ಉಪಸ್ಥಿತರಿದ್ದರು. ವಿರಾಜಪೇಟೆ ತಾಲೂಕು ಬಿಲ್ಲವ ಸೇವಾ ಸಂಘದ ಪದಾಧಿಕಾರಿಗಳು, ಸದಸ್ಯರು, ತಾಲೂಕಿನ ವಿವಿಧೆಡೆಗಳಿಂದ ಆಗಮಿಸಿದ ಜನಾಂಗ ಬಾಂಧವರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ:ಕಿಶೋರ್ ಕುಮಾರ್ ಶೆಟ್ಟಿ