ಪುರುಷರ ಏಳಿಗೆಯಲ್ಲಿ ಮಹಿಳೆಯ ಪಾತ್ರ ಮಹತ್ವದ್ದು: ವೀಣಾ ಅಚ್ಚಯ್ಯ

ಮಡಿಕೇರಿ:ಪ್ರತಿಯೊಬ್ಬ ಯಶಸ್ವಿ ಪುರುಷನ ಸಾಧನೆಯ ಹಿಂದೆ ಆತನ ಮಡದಿಯ ಪಾತ್ರ ಅತ್ಯಂತ ಮಹತ್ವವನ್ನು ಹೊಂದಿರುತ್ತದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಡಿಕೇರಿ ಕೊಡವ ಸಮಾಜದಲ್ಲಿ ನಡೆದ ಕಕ್ಕಡ ನಮ್ಮೆಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಕೊಡಗಿನ ಇಬ್ಬರು ಶಾಸಕದ್ವಯರಾದ ಡಾ ಮಂತರ್ ಗೌಡ ಮತ್ತು ಎ.ಎಸ್.ಪೊನ್ನಣ್ಣ ನವರು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದು ಇವರ ಯಶಸ್ವಿ ನ ಹಿಂದೆ ಅವರ ಪತ್ನಿಯರ ಪಾತ್ರ ತುಂಬಾ ಇದೆ.ಪೊನ್ನಣ್ಣ ರವರ ಪತ್ನಿ ಕಾಂಚನ್ ಹಾಗೂ ಮಂತರ್ ಪತ್ನಿ ದಿವ್ಯಾ ರವರು ಸಮಾಜ ಸೇವೆಯ ಜೊತೆಗೆ ಚುನಾವಣೆ ಗೆಲುವಿನಲ್ಲೂ ಪಾತ್ರ ವಹಿಸಿದ್ದಾರೆ.ಕೊಡವ ಪೊಮ್ಮಕ್ಕಡ ಕೂಟದ ಸದಸ್ಯರು ಉತ್ತಮ ಕೆಲಸ ಮಾಡುತ್ತಿದ್ದು ನಮ್ಮ ಪಾರಂಪರಿಕ ಆಚರಣೆಗಳನ್ನು ಜೀವಂತವಾಗಿ ಇರಿಸಲು ಪಣತೊಟ್ಟಿರುವುದು ಸ್ವಾಗತಾರ್ಹ ಎಂದು ವೀಣಾ ಅಚ್ಚಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಸಂಧರ್ಭದಲ್ಲಿ ಮಡಿಕೇರಿ ಕೊಡವ ಸಮಾಜದ ಅಭಿವೃದ್ಧಿ ಕಾರ್ಯಕ್ಕೆ ಅನುದಾನ ಒದಗಿಸಲು ಡಾ ಮಂತರ್ ಗೌಡ ಹಾಗೂ ಪೊನ್ನಣ್ಣ ನವರು ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಬೇಕು ಎಂದು ವಿನಂತಿಸಿದರು.