ಹಿರಿಯ ರಾಜಕಾರಣಿ, ವೀರಶೈವ ‌ಮಹಾಸಭಾದ ಮಾಜಿ ರಾಜ್ಯಾಧ್ಯಕ್ಷ ಎನ್ ತಿಪ್ಪಣ್ಣ ನಿಧನಕ್ಕೆ ಸಂತಾಪ

ಹಿರಿಯ ರಾಜಕಾರಣಿ, ವೀರಶೈವ ‌ಮಹಾಸಭಾದ ಮಾಜಿ ರಾಜ್ಯಾಧ್ಯಕ್ಷ ಎನ್ ತಿಪ್ಪಣ್ಣ ನಿಧನಕ್ಕೆ  ಸಂತಾಪ

ಸೋಮವಾರಪೇಟೆ:-ಅಖಿಲ ಭಾರತ ವೀರಶೈವ ಮಹಾಸಭಾದ ಮಾಜಿ ರಾಜ್ಯಾಧ್ಯಕ್ಷ ಎನ್.ತಿಪ್ಪಣ್ಣ ನವರ ನಿಧನಕ್ಕೆ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಕಂಬನಿ ಮಿಡಿದಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ತಿಪ್ಪಣ್ಣ ನವರು ತೊಂಬತ್ತರ ದಶಕದಲ್ಲಿ ಭೀಮಣ್ಣ ಖಂಡ್ರೆಯವರೊಂದಿಗೆ ರಾಜ್ಯವ್ಯಾಪಿ ಪ್ರವಾಸಮಾಡಿ ಸಮುದಾಯವನ್ನು ಒಗ್ಗೂಡಿಸುವ ಹಾಗೂ ಮಹಾಸಭಾವನ್ನು ಬಲಿಷ್ಠ ಗೊಳಿಸಿದರು ಈ ಸಂದರ್ಭ ಸೋಮವಾರಪೇಟೆಗೂ ಆಗಮಿಸಿ ಸಭೆ ನಡೆಸಿದಬಗ್ಗೆ ಮಹೇಶ್ ಸ್ಮರಿಸಿಕೊಂಡರು.ತಮ್ಮ ಇಳಿ ವಯಸ್ಸಿನಲ್ಲಿಯು ಮಹಾಸಭಾದ ರಾಜ್ಯಾಧ್ಯಕ್ಷರಾಗಿ ಹಲವು ವರ್ಷ ತಮ್ಮ ಜವಾಬ್ದಾರಿಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ ಎಂದಿದ್ದಾರೆ.