ಮೆಂಟಲಿಸಮ್ ಮತ್ತು ಆಯುರ್ವೇದ ಕೋರ್ಸ್ ನಲ್ಲಿ ಸಾಧನೆ:ಕೊಡಗು ಜಿಲ್ಲೆಯ ಕಂಡಕರೆ ಗ್ರಾಮದ ಮೊಹಮ್ಮದ್ ಶಾಫಿ ಅವರನ್ನು ಸನ್ಮಾನಿಸಿದ ಸ್ಪೀಕರ್ ಯು.ಟಿ ಖಾದರ್

ಮಡಿಕೇರಿ:ಮೆಂಟಲಿಸಮ್ ಮತ್ತು ಕೇರಳ ವೈದ್ಯಾಸ್ ಲೀಗಲ್ ಫಾರಮ್(ಕೆವಿಎಲ್ಎಫ್) ಕೋರ್ಸ್ ಪೂರ್ಣಗೊಳಿಸಿರುವ ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಚೆಟ್ಟಳ್ಳಿ ಸಮೀಪದ ಕಂಡಕರೆ ಗ್ರಾಮದ ದಿವಂಗತ ಅಬ್ದುರೆಹಮಾನ್ ಹಾಗೂ ರುಕ್ಯಾ ದಂಪತಿಯ ಮಗನಾದ ಮೊಹಮ್ಮದ್ ಶಾಫಿ ಪಿ.ಎ ಅವರನ್ನು ಕರ್ನಾಟಕ ವಿಧಾನಸಭಾ ಸ್ಪೀಕರ್ ಆಗಿರುವ ಯು.ಟಿ ಖಾದರ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಫರಂಗಿಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಿದರು.
ಕಂಡಕರೆ ಗ್ರಾಮದ ಮೊಹಮ್ಮದ್ ಶಾಫಿ ಪಿ.ಎ ಅವರು 2021-2024ರವರೆಗೆ ಕೇರಳದ ಕೊಚ್ಚಿಯಲ್ಲಿ ಮೆಂಟಲಿಸಮ್,ಮತ್ತು ಆಯುರ್ವೇದದಲ್ಲಿ ಕೋರ್ಸ್ ಪಡೆದಿದ್ದಾರೆ.ಇವರ ಸಾಧನೆಯನ್ನು ಪರಿಗಣಿಸಿ ಫರಂಗಿಪೇಟೆಯ ಕುಂಜತ್ಕಳ ನಾಗರಿಕ ಸೌಹಾರ್ದ ವೇದಿಕೆಯ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.ಮೊಹಮ್ಮದ್ ಶಾಫಿ ಅವರ ಸಾಧನೆಯನ್ನು ಸ್ಪೀಕರ್ ಯು.ಟಿ ಖಾದರ್ ಅವರು ಶ್ಲಾಘಿಸಿದ್ದಾರೆ.ಮೊಹಮ್ಮದ್ ಶಾಫಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಫರಂಗಿಪೇಟೆ ಹತ್ತನೇ ಮೈಲು ತ್ವಾಹ ಜುಮಾ ಮಸೀದಿಯಲ್ಲಿ ಖತೀಬರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಹಾಗೂ ಕಂಡಕರೆ ಎಸ್.ಕೆ.ಎಸ್.ಎಸ್ ಎಫ್ ಯೂನಿಟ್ ಸಹ ಕಾರ್ಯದರ್ಶಿಯಾಗಿದ್ದಾರೆ.