ಕರಿಕೆಯ, ಶ್ರೀ ತುಳೂರ್ ವನತ್ ಭಗವತಿ ಕ್ಷೇತ್ರದಲ್ಲಿ ನಡೆಯುತ್ತಿರುವ ಇತಿಹಾಸ ಪ್ರಸಿದ್ಧ ಕಳಿಯಾಟ ಮಹೋತ್ಸವದಲ್ಲಿ ಭಾಗವಹಿಸಿದ ಶಾಸಕ ಎಎಸ್ ಪೊನ್ನಣ್ಣ

Feb 21, 2026 - 10:50
 0  325
ಕರಿಕೆಯ, ಶ್ರೀ ತುಳೂರ್ ವನತ್ ಭಗವತಿ ಕ್ಷೇತ್ರದಲ್ಲಿ ನಡೆಯುತ್ತಿರುವ ಇತಿಹಾಸ ಪ್ರಸಿದ್ಧ ಕಳಿಯಾಟ ಮಹೋತ್ಸವದಲ್ಲಿ ಭಾಗವಹಿಸಿದ ಶಾಸಕ ಎಎಸ್ ಪೊನ್ನಣ್ಣ

ವಿರಾಜಪೇಟೆ:ವಿಧಾನಸಭಾ ಕ್ಷೇತ್ರದ ಗಡಿ ಗ್ರಾಮವಾದ ಕರಿಕೆಯ, ಶ್ರೀ ತುಳೂರ್ ವನತ್ ಭಗವತಿ ಕ್ಷೇತ್ರದಲ್ಲಿ ನಡೆಯುತ್ತಿರುವ ಇತಿಹಾಸ ಪ್ರಸಿದ್ಧ ಕಳಿಯಾಟ ಮಹೋತ್ಸವ ದೈವೋತ್ಸವದಲ್ಲಿ ಭಾಗವಹಿಸಿ ಆಶೀರ್ವಾದ ಪಡೆಯಲು, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಶ್ರೀ ಕ್ಷೇತ್ರಕ್ಕೆ ಆಗಮಿಸಿದರು.

ಈ ಉತ್ಸವದ 5 ನೇ ಕಳಿಯಟ್ ನಡೆಯತ್ತಿದು ಶ್ರೀದೇವರ ಕೋಲವನ್ನು ವೀಕ್ಷಿಸಿ ಪೂಜೆ ಸಲ್ಲಿಸಿದ ಶಾಸಕರು, ನಾಡಿನ ಸರ್ವರಿಗೂ ಒಳಿತಾಗಲಿ ಎಂದು ಹಾರೈಸಿದರು. ಸಾರ್ವಜನಿಕರಿಗೆ ಊಟ ಬಡಿಸುತ್ತಾ ದೇವರ ಸೇವೆ ಮಾಡಿ ಸಂತೃಪ್ತಿ ಪಡೆದ ಶಾಸಕರು ಈ ಉತ್ಸವದ ಪ್ರಯುಕ್ತ ಸಾರ್ವಜನಿಕರಿಗೆ, ದೈವಸ್ಥಾನ ವತಿಯಿಂದ ಅನ್ನಸಂಪರ್ಪಣೆ ಕಾರ್ಯಕ್ರಮ ಜರುಗಿತ್ತು. ನೇರವಾಗಿ ಅನ್ನಸಂತರ್ಪಣೆ ಮಾಡುತ್ತಿರುವ ಜಾಗಕ್ಕೆ ತೆರಳಿದ ಮಾನ್ಯ ಶಾಸಕರು ತಾವೇ ಸ್ವತಃ ಸಾರ್ವಜನಿಕರಿಗೆ ಅನ್ನ ಬಡಿಸುವುದರ ಮೂಲಕ ದೇವರ ಸೇವೆಯಲ್ಲಿ ತಮ್ಮ ಭಕ್ತಿಯನ್ನು ತೋರಿದರು.

 ನೂರಾರು ಭಕ್ತರಿಗೆ ಅನ್ನ ಬಡಿಸಿದ ಶಾಸಕರು ಎಲ್ಲರೊಂದಿಗೆ ನಗುನಗುತ್ತಾ ಮಾತನಾಡಿಸಿದರು. ಈ ಸಂದರ್ಭದಲ್ಲಿ ಬೇಕಲ್ ಹರಿಪ್ರಸಾದ್ ಕರಿಕೆ ವಲಯ ಅಧ್ಯಕ್ಷರು, ಬಾಲಚಂದ್ರ ನಾಯರ್ ಪಂಚಾಯತ್ ಅಧ್ಯಕ್ಷರು,ಬೇಕಲ್ ರಮಾನಾಥ್ ಕೆಪಿಸಿಸಿ ಸದಸ್ಯರು, ಶ್ರೀನಿವಾಸ್ ಖಜಾಂಜಿ, ಮಿಥುನ್ ಹೊಸಮನೆ ಪ್ರಚಾರ ಸಮಿತಿಯ ಅಧ್ಯಕ್ಷರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0