ಕುಶಾಲನಗರ : ಪುರಸಭೆ ಆಯವ್ಯಯ ಸಭೆ; ರೂ.15.38 ಲಕ್ಷ ಉಳಿತಾಯ ಬಜೆಟ್ ಮಂಡನೆ

ಕುಶಾಲನಗರ : ಪುರಸಭೆ ಆಯವ್ಯಯ ಸಭೆ; ರೂ.15.38 ಲಕ್ಷ ಉಳಿತಾಯ ಬಜೆಟ್ ಮಂಡನೆ

ಕುಶಾಲನಗರ : ಇಲ್ಲಿನ ಪುರಸಭೆ ಸಭಾಂಗಣದಲ್ಲಿ ಶುಕ್ರವಾರ ನಡೆದ ಆಯವ್ಯಯ ಸಭೆಯಲ್ಲಿ ಆಡಳಿತಾಧಿಕಾರಿಯೂ ಆದ ಉಪ ವಿಭಾಧಿಕಾರಿ ನೀತಿನ್ ಚೆಕ್ಕಿ ಅವರು 2026-27ನೇ ಸಾಲಿನಲ್ಲಿ ರೂ.15.38 ಲಕ್ಷ ಉಳಿತಾಯ ಬಜೆಟ್ ಮಂಡಿಸುವ ಮೂಲಕ ವಿವಿಧ ನೂತನ ಯೋಜನೆಗಳೊಂದಿಗೆ ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡಲಾಗಿದೆ.

2026-27ನೇ ಸಾಲಿಗೆ ನಿರೀಕ್ಷಿತ ಆದಾಯ ರೂ.31,44,39,802 ಲಕ್ಷ, ನಿರೀಕ್ಷಿತ ಖರ್ಚು ರೂ.31,28,91,730 ಲಕ್ಷ ಆದಾಂಜಿಸಲಾಗಿದ್ದು,ರೂ.15.38 ಲಕ್ಷ ಉಳಿತಾಯ ನಿರೀಕ್ಷಿಸಲಾಗಿದೆ. ಈ ಬಾರಿ ವಿಶೇಷವಾಗಿ ಆಯವ್ಯಯದಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಯೋಜನೆಗಳು : ಪುರಸಭೆ ವ್ಯಾಪ್ತಿಯಲ್ಲಿ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣದ ಮುಂಭಾಗದಲ್ಲಿ ಪುಡ್ಕೋರ್ಟ್ ನಿರ್ಮಾಣ ಮಾಡಲು ರೂ.15.00 ಲಕ್ಷಗಳನ್ನು ಕಾಯ್ದಿರಿಸಲಾಗಿರುತ್ತದೆ.

ಪುರಸಭೆ ಕಛೇರಿಯ ಸಂಪೂರ್ಣ ಕಡತಗಳನ್ನು ಡಿಜಿಟಲೀಕರಣ ಗೊಳಿಸಲು ರೂ.20.00 ಲಕ್ಷಗಳನ್ನು ಕಾಯ್ದಿರಿಸಲಾಗಿರುತ್ತದೆ. ಪುರಸಭೆ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳಲ್ಲಿ ಮಹಿಳೆಯರು ಮತ್ತು ಹಿರಿಯ ನಾಗರೀಕರ ಸುರಕ್ಷತೆಗೆ ಸೋಲಾರ್ ಸಿ.ಸಿ.ಟಿ.ವಿ. ಅಳವಡಿಸಲು ರೂ.25.00 ಲಕ್ಷಗಳನ್ನು ಕಾಯ್ದಿರಿಸಲಾಗಿರುತ್ತದೆ ಹಾಗೂ ಬೀದಿನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಗಾಗಿ ರೂ. 10.00 ಲಕ್ಷಗಳನ್ನು ಕಾಯ್ದಿರಿಸಲಾಗಿರುತ್ತದೆಪುರಸಭೆ ವ್ಯಾಪ್ತಿಯ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣದಲ್ಲಿ ಆವರಣದಲ್ಲಿ ಮಹಿಳೆಯರ ಅನುಕೂಲಕ್ಕಾಗಿ ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಯಂತ್ರ ಅಳವಡಿಸಲು ಉದ್ದೇಶಿಸಲಾಗಿದೆ.

 ಪುರಸಭೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲಾ ಪೌರ ಸಿಬ್ಬಂದಿ ಗಳಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯದಲ್ಲಿ ಜನರಲ್ ಪರ್ಸನಲ್ ಇನ್ಸೂರೆನ್ಸ್ ಅಡಿಯಲ್ಲಿ ರೂ.60.00 ಲಕ್ಷದ ಅಪಘಾತ ವಿಮೆ ಮಾಡಿಸಲು ಉದ್ದೇಶಿಸಲಾಗಿದೆ.ಪುರಸಭೆ ವ್ಯಾಪ್ತಿಯಲ್ಲಿರುವ ಎಲ್ಲಾ ಸರ್ಕಲ್‌ಗಳ ಅಭಿವೃದ್ಧಿ ಹಾಗೂ ಕೆ.ಎಂ.ಕಾರ್ಯಪ್ಪ ಸರ್ಕಲ್ ಪ್ರತಿಮೆ ಹಾಗೂ ಗುಂಡೂರಾವ್ ಪ್ರತಿಮೆ ಸ್ಥಾಪನೆಗಾಗಿ ರೂ.25,00,000 ಕಾಯ್ದಿರಿಸಲಾಗಿದೆ ಎಂದು ಮುಖ್ಯಾಧಿಕಾರಿ ಟಿ.ಎಸ್.ಗಿರೀಶ್ ತಿಳಿಸಿದರು.

ರಾಜಸ್ವ ಆದಾಯ (ಸ್ವಂತ ನಿಧಿ) : ಆಸ್ತಿ ತೆರಿಗೆ ರೂ.3,73,00,000ಲಕ್ಷ,ಉದ್ದಿಮೆ ಪರವಾನಗಿ ರೂ.50,00,000 ಲಕ್ಷ, ಕಟ್ಟಡ ಪರವಾನಗಿ ರೂ.32,00,000 ಲಕ್ಷ, ಖಾತಾ ವರ್ಗಾವಣೆ ರೂ.4,50,000 ಲಕ್ಷ, ಮಾಂಸಮಾರಾಟ ಮಳಿಗೆಗಳು ರೂ.10,00,000 ಲಕ್ಷ, ಬ್ಯಾಂಕ್ ಗಳಿಂದ ಬಡ್ಡಿ ರೂ.10,00,000 ಲಕ್ಷ, ಜಾಹೀರಾತು ಶುಲ್ಕ ರೂ.3,00,000 ಲಕ್ಷ ಗಳಾಗಿದ್ದು ಒಟ್ಟು ರೂ.4,82,50,000 ಲಕ್ಷಗಳಾಗಿದೆ. ಜೊತೆಗೆ ಸರ್ಕಾರದ ಅನುದಾನಗಳು 16ನೇ ಹಣಕಾಸು ಯೋಜನೆ ಅನುದಾನ 1,25,00,000 ಲಕ್ಷ, ಕುಡಿಯುವ ನೀರಿನ ಅನುದಾನ ರೂ.10,00,000 ಲಕ್ಷ, ಮಳೆಹಾನಿ ಅನುದಾನ ರೂ.50,00,000 ಲಕ್ಷ, ಸ್ವಚ್ಛಭಾರತ್ ಅನುದಾನ ರೂ.30,00,000 ಲಕ್ಷ, ಮುಖ್ಯಮಂತ್ರಿಗಳ ಅನುದಾನ ರೂ.5,50,00,000 ಲಕ್ಷ, ಎಸ್.ಎಫ್.ಸಿ ವಿಶೇಷ ಅನುದಾನ ರೂ.5,00,00,000 ಲಕ್ಷ,ಎಸ್.ಎಫ್.ಸಿ.ಮೀಸಲು ಅನುದಾನ ರೂ.15,00,000 ಲಕ್ಷ ಸೇರಿದಂತೆ ಒಟ್ಟು ರೂ.12,80,00,000 ಲಕ್ಷ ನಿರೀಕ್ಷಿಸಲಾಗಿದೆ. ಅದೇ ರೀತಿ ಖರ್ಚುಗಳು : ಹೊರಗುತ್ತಿಗೆ ನೌಕರರ ವೇತನ ರೂ.90,00,000 ಲಕ್ಷ,ಘನತ್ಯಾಜ್ಯ ನಿರ್ವಹಣಾ ವಾಹನಗಳಿಗೆ ಇಂಧನ ವೆಚ್ಚ ರೂ.30,00,000 ಲಕ್ಷ, ಬೀದಿದೀಪ ನಿರ್ವಹಣಾ ವೆಚ್ಚ ರೂ.42,00,000 ಲಕ್ಷ,ಬೀದಿದೀಪ ನಿರ್ವಹಣೆ ದಾಸ್ತಾನುಗಳು ರೂ.15,00,000 ಲಕ್ಷ,ವಿದ್ಯುತ್ ಕಂಬಗಳ ಸ್ಥಳಾಂತರ ರೂ.30,00,000 ಲಕ್ಷ, ಶೌಚಾಲಯಗಳ ದುರಸ್ಥಿಗೆ ರೂ.10,00,000 ಲಕ್ಷ, ಬೀದಿನಾಯಿಗಳ ನಿಯಂತ್ರಣಕ್ಕಾಗಿ ರೂ.10,00,000 ಲಕ್ಷ,ಟ್ಯಾಂಕರ್ ನೀರಿಗೆ ಕಾಯ್ದಿರಿಸಿದ ವೆಚ್ಚ ರೂ.15,00,000 ಲಕ್ಷ,ನೂತನ ಪುರಸಭೆ ಮಾರುಕಟ್ಟೆ ನಿರ್ಮಾಣಕ್ಕೆ ರೂ.50,00,000 ಲಕ್ಷ, ನಾಗರೀಕ ವಿನ್ಯಾಸಗಳು, ಸ್ವಾಗತ ಕಾಮಾನು, ಸರ್ಕಲ್ ಅಭಿವೃದ್ಧಿಗಾಗಿ ರೂ.50,00,000 ಲಕ್ಷ,ರಸ್ತೆಗಳು ಮತ್ತು ಪಾದಾಚಾರಿ ಮಾರ್ಗಗಳ ದುರಸ್ಥಿ-ನಿರ್ಮಾಣ ರೂ.50,00,000 ಲಕ್ಷ,ರಸ್ತೆ ಬದಿ ಚರಂಡಿಗಳ ದುರಸ್ಥಿ ಮತ್ತು ನಿರ್ಮಾಣ ರೂ.50.00,000 ಲಕ್ಷ ಹೈಮಾಸ್ಕ್ ದೀಪಗಳು, ಬೀದಿದೀಪಗಳು, ಸೋಲಾರ್ ದೀಪಗಳು ಮತ್ತು ಸಂಚಾರಿ ದೀಪಗಳ ಅಳವಡಿಕೆ ರೂ.25,00,000 ಲಕ್ಷ, ಸ್ಮಶಾನಗಳ ಅಭಿವೃದ್ಧಿ ರೂ.25,00,000 ಲಕ್ಷ,ನೀರು ವಿತರಣಾ ಪೈಪ್ ಲೈನ್ ವ್ಯವಸ್ಥೆ ರೂ.25,00,000 ಲಕ್ಷ,ಪಾರ್ಕ್‌ಗಳ ಅಭಿವೃದ್ಧಿಗಾಗಿ ರೂ. 18,00,000 ಲಕ್ಷ,ನೂತನ ಬೋರ್‌ವೆಲ್‌ಗಳ ವ್ಯವಸ್ಥೆಗಾಗಿ ರೂ.10,00,000 ಲಕ್ಷ,ಭಾರಿವಾಹನಗಳ ಖರೀದಿಗಾಗಿ ರೂ.20,00,000 ಲಕ್ಷ ಅಂದಾಜಿಸಲಾಗಿದೆ.

ಈ ಸಂದರ್ಭ ಯೋಜನಾ ಪ್ರಾಧಿಕಾರ ಅಧ್ಯಕ್ಷ ಪ್ರಮೋದ್ ಮುತ್ತಪ್ಪ,ಕಂದಾಯ ಅಧಿಕಾರಿ ರಾಮು,ಆರೋಗ್ಯ ನಿರೀಕ್ಷಕ ಉದಯಕುಮಾರ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಕುಶಾಲನಗರ ಪುರಸಭೆಯ 2026-27ನೇ ಸಾಲಿನ ಬಜೆಟ್ ಅನ್ನು ಆಡಳಿತಾಧಿಕಾರಿಯೂ ಆದ ಉಪ ವಿಭಾಧಿಕಾರಿ ನೀತಿನ್ ಚೆಕ್ಕಿ ಮಂಡಿಸಿದರು. ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ,ಮುಖ್ಯಾಧಿಕಾರಿ ಟಿ.ಎಸ್.ಗಿರೀಶ್, ಆರೋಗ್ಯ ನಿರೀಕ್ಷಕ ಉದಯಕುಮಾರ್ ಭಾಗವಹಿಸಿದ್ದರು.