ಆಲ್ ಸ್ಟಾರ್ ಕೊಡಗು ವರ್ಲ್ ಕಪ್: BYBFC ಮುಂಬೈ ತಂಡಕ್ಕೆ ಪೆನಾಲ್ಟಿ ಶೂಟೌಟ್ ನಲ್ಲಿ ರೋಚಕ ಗೆಲುವು: ಫೈನಲ್ ಗೆ ಲಗ್ಗೆ

ಮಡಿಕೇರಿ:ಕೊಡಗು ಜಿಲ್ಲೆಯ ಫುಟ್ಬಾಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗೋಣಿಕೊಪ್ಪಲಿನ ಆಲ್ ಸ್ಟಾರ್ ಯೂತ್ ಕ್ಲಬ್ ಗೋಣಿಕೊಪ್ಪಲಿನ ಜಿಎಂಪಿ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿರುವ ಕೊಡಗು ವರ್ಲ್ಡ್ ಕಪ್ ಆಲ್ ಇಂಡಿಯಾ ಸೂಪರ್ ಫೈವ್ಸ್ ದ್ವಿತೀಯ ಸೆಮಿಫೈನಲ್ ಪಂದ್ಯದಲ್ಲಿ BYBFC ಮುಂಬೈ ತಂಡವು ಪೆನಾಲ್ಟಿ ಶೂಟೌಟ್ ನಲ್ಲಿ ರೋಚಕ ಗೆಲುವು ಸಾಧಿಸಿ ಫೈನಲ್ ಗೆ ಅರ್ಹತೆ ಪಡೆದುಕೊಂಡಿದೆ.ಕಲ್ಲುಬಾಯ್ಸ್ ಹಾಗೂ ಮುಂಬೈ ತಂಡವು ನಿಗದಿತ ಸಮಯದಲ್ಲಿ 1-1 ಗೋಲು ಗಳಿಸಿ ಸಮಬಲ ಸಾಧಿಸಿತು.ಅಂತಿಮವಾಗಿ ಪೆನಾಲ್ಟಿಯಲ್ಲಿ 3-2 ಗೋಲುಗಳ ಅಂತರದಿಂದ ಗೆದ್ದು ಫೈನಲ್ ಪ್ರವೇಶಿಸಿತು.ಮುಂಬೈ ತಂಡದ ಗೋಲ್ ಕೀಪರ್ ಸುಹಾಸ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.